ಜಿಲ್ಲೆಯಲ್ಲಿ ಮಂಗಳವಾರ 134 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 663ಕ್ಕೆ ಏರಿಕೆಯಾಗಿದೆ.
ಕೊರೊನಾ ಕಠೋರ; ಬಕ್ರೀದ್ಗೆ ಇರಲಿ ಎಚ್ಚರ
ರ್ಕಾರದ ಸೂಚನೆಗಳ ಅನ್ವಯವೇ ಸಾಮಾಜಿಕ ಅಂತರದಲ್ಲಿ ಬಕ್ರೀದ್ ಆಚರಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೂಚನೆ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿ ನೆಪದಲ್ಲಿ ವಿದ್ಯಾರ್ಥಿನಿ ಖಾತೆ ಹಣ ವರ್ಗಾವಣೆ
ಬ್ಯಾಂಕ್ ಅಧಿಕಾರಿ ನೆಪದಲ್ಲಿ ವ್ಯಕ್ತಿಯೋರ್ವ ಖಾತೆಯ ವಿವರಗಳನ್ನು ಪಡೆದು ನಕಲಿ ಸಹಿ ಮಾಡಿ ವಿದ್ಯಾರ್ಥಿನಿಯೋರ್ವರ ಖಾತೆಯಲ್ಲಿದ್ದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ದೂರು ದಾಖಲಿಸಲಾಗಿದೆ.
ಸಿದ್ಧರಾಮೇಶ್ವರರ ಕಿರು ರಥೋತ್ಸವ
ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಎಚ್ಚರಿಕೆಯ ನಡೆಯನ್ನು ಪಾಲಿಸಿ ಮುಂದಿನ ನೂರಾರು ರಥೋತ್ಸವ ಕಣ್ತುಂಬಿ ಕೊಳ್ಳಲು ಸಾಂಕೇತಿಕವಾಗಿ ಕಿರು ರಥೋತ್ಸವ ಆಚರಿಸಲಾಗಿದೆ.
ಆಸ್ಪತ್ರೆ ದಾಖಲಿಗೆ ನೆರವಾಗಲು ತಂಡಗಳ ರಚನೆ
ರೋಗಿಗಳು ಆಸ್ಪತ್ರೆಗೆ ದಾಖಲಾಗುವಲ್ಲಿ ಆಗುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ಆಸ್ಪತ್ರೆಯ ಹಂತದಲ್ಲಿ ಸಮಿತಿಗಳನ್ನು ರಚಿಸಿ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಜನರ ಪರ ಇರುವ ಕಾಂಗ್ರೆಸ್ಗೆ ಮತ ನೀಡಿ
ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಕಾರ್ಯದರ್ಶಿಯಾಗಿ ನಾಯರಿ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಅಖಿಲ ಭಾರತ ಕಾರ್ಯದರ್ಶಿಯಾಗಿ ನಗರದ ಕೆ.ರಾಘವೇಂದ್ರ ನಾಯರಿ ಅವರು ನೇಮಕವಾಗಿದ್ದಾರೆ.
ನಗರಕ್ಕೆ ನಾಳೆ ಸಿಎಂ ಸಿದ್ದರಾಮಯ್ಯ
ನಗರದ ಬಾಪೂಜಿ ಸಮುದಾಯ ಭವನದಲ್ಲಿ ನಾಡಿದ್ದು ದಿನಾಂಕ 4ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ನಲ್ಲಿರುವ ಕುರುಬ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಸಮಾಜದ ಮುಖಂಡ ಶಿವಕುಮಾರ್ ಒಡೆಯರ್ ತಿಳಿಸಿದ್ದಾರೆ.
ಹರಹರ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಮಾಧುಸ್ವಾಮಿ ಪ್ರಚಾರ
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಇಂದು ಮತಯಾಚಿಸಲಿದ್ಧಾರೆ.
ಅಂಕಲಿಮಠದ ಜಾತ್ರೆ : ನಗರದಲ್ಲಿ ಇಂದು ಸಭೆ
ರಾಯಚೂರು ಜಿಲ್ಲೆ ಲಿಂಗಸ ಗೂರು ತಾಲ್ಲೂಕಿನ ತಲೆಕಟ್ಟು ಗ್ರಾಮದ ಅಂಕಲಿಮಠದ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋ ತ್ಸವ ಹಾಗೂ ನೂತನ ಮಾಂಗಲ್ಯ ಭವನದ ಲೋಕಾ ರ್ಪಣೆಯ ಸಂಬಂಧ ಇಂದು ಬೆಳಿಗ್ಗೆ 10.30ಕ್ಕೆ ಬಿಐಇಟಿಯ ಬೆಳ್ಳಿಗಿರಿ ವಸತಿ ಗೃಹದಲ್ಲಿ ಪೂರ್ವಭಾವಿ ಸಭೆಯನ್ನು ಅಂಕಲಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ
ಹಿಂದುಳಿದ ಸಮಾಜಕ್ಕೆ ಬಿಜೆಪಿ ಅನ್ಯಾಯ
ಜಗಳೂರು : ರಾಜ್ಯದಲ್ಲಿ ಮೂರನೇ ಬಹುದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮಾಜಕ್ಕೆ ಲೋಕಸಭಾ ಚುನಾವಣೆಯಲ್ಲಿ ಒಂದೂ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಹಿಂದುಳಿದ ದಲಿತ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಮುಕುಡಪ್ಪ ಆರೋಪ ಮಾಡಿದ್ದಾರೆ.
ದ್ವೈವಾರ್ಷಿಕ ವಿಧಾನ ಪರಿಷತ್ ಚುನಾವಣೆ
ಚುನಾವಣಾ ಆಯೋಗವು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ದಾವಣಗೆರೆ ಜಿಲ್ಲೆ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಒಂದು ಪದ ವೀಧರರ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದ್ದು ಜೂನ್ 3 ರಂದು ಮತದಾನ ನಡೆಯಲಿದೆ.
ಬಿಜೆಪಿ ಅಭ್ಯರ್ಥಿ ಪರ ನಗರದಲ್ಲಿ ಇಂದು ಯದುವೀರ್ ಒಡೆಯರ್ ರೋಡ್ ಶೋ
ಬಿಜೆಪಿ ಮುಖಂಡ, ಮೈಸೂರಿನ ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವರು ನಾಳೆ ಶುಕ್ರವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ತಿಳಿಸಿದ್ದಾರೆ.
ಕುಂದುವಾಡ ಕೆರೆ : ಸಿದ್ದೇಶ್ವರ ವಿರುದ್ಧದ ಆರೋಪ ಸತ್ಯಕ್ಕೆ ದೂರ – ಜಯಮ್ಮ
ಕುಂದುವಾಡ ಕೆರೆ ಅಭಿವೃದ್ಧಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ 16 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಹೆಚ್.ಸಿ. ಜಯಮ್ಮ ಹೇಳಿದ್ದಾರೆ.
ಹರಿಹರದಲ್ಲಿ ನಾಳಿನ ಕಾಂಗ್ರೆಸ್ ಪಕ್ಷದ ಕುರುಬ ಸಮಾಜದ ಬೆಂಬಲಿತ ಸಭೆಗೆ ಮುಖ್ಯಮಂತ್ರಿ
ಹರಿಹರ : ಮೇ 7 ರಂದು ನಡೆಯುವ ದಾವ ಣಗೆರೆ ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಕುರುಬ ಸಮಾಜದ ಬೆಂಬಲಿತ ಸಭೆಯನ್ನು ನಾಳೆ ದಿನಾಂಕ 4ರ ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ
ರಾಣೇಬೆನ್ನೂರಿಗೆ ಇಂದು ಸಿಎಂ ಸಿದ್ದರಾಮಯ್ಯ
ಹಾವೇರಿ-ಗದಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರ ಪರವಾಗಿ ಮತ ಯಾಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ರಾಣೇಬೆನ್ನೂರಿಗೆ ಆಗಮಿಸಿ ಉರ್ದು ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗವಹಿಸುವರು.
ದುಗ್ಗಮ್ಮ ದೇವಸ್ಥಾನದ ಬಳಿ ವಾರದ ಸಂತೆ ನಡೆಸಲು ಒತ್ತಾಯ
ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ 5 ವಾರ ಸಂತೆ ನಡೆಸುವಂತೆ ಹಿರಿಯ ಮುಖಂಡ ಜೆ. ಸೋಮನಾಥ್ ಮತ್ತು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಅವರುಗಳು ಮಹಾ ನಗರ ಪಾಲಿಕೆ ಆಯುಕ್ತರು ಮತ್ತು ದೇವಸ್ಥಾನ ಸಮಿತಿ ಧರ್ಮ ದರ್ಶಿಗಳಲ್ಲಿ ಮನವಿ ಮಾಡಿದ್ದಾರೆ.
ಗುಡ್ಡದಾನ್ವೇರಿಯಲ್ಲಿ ಗುಡ್ಡಾಪುರ ದಾನಮ್ಮ ಪ್ರವಚನ
ಗುಡ್ಡದಾನ್ವೇರಿ ವಿರಕ್ತ ಮಠದಲ್ಲಿ ಇಂದಿನಿಂದ 11ರವರೆಗೆ ಮುಂಡರಗಿ ಅನ್ನದಾನೇಶ್ವರ ಶ್ರೀಗಳ ಸಾನಿಧ್ಯ ದಲ್ಲಿ ಶ್ರೀ ಮಠದ ಪೀಠಾಧಿಪತಿ ಶ್ರೀ ಶಿವಯೋಗೀ ಶ್ವರ ಸ್ವಾಮಿಗಳ ನೇತೃತ್ವದಲ್ಲಿ ಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ, ಜಂಗಮ ಜ್ಯೋತಿ ಶಿವಯೋಗಿಗಳ 71ನೇ ಜಾತ್ರೋತ್ಸವ ಹಾಗೂ ಶ್ರೀಗಳ 61ನೇ ಹುಟ್ಟುಹಬ್ಬದ ಕಾರ್ಯ ಕ್ರಮಗಳು ನಡೆಯಲಿವೆ.
ಗೋಶಾಲೆಗೆ ಹುಲ್ಲು ದಾನಕ್ಕೆ ಕರೆ
ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ್ ಗೋಶಾಲೆಯಲ್ಲಿ 600 ಕ್ಕೂ ಹೆಚ್ಚು ಹಸು ಮತ್ತು ಕರುಗಳನ್ನು ಸಾಕಲಾಗುತ್ತಿದ್ದು, ರೈತ ಬಾಂಧವರು ತಮ್ಮ ಕೈಲಾದಷ್ಟು ಮೇವು (ಹುಲ್ಲು) ಪೆಂಡಿಗಳನ್ನು ದಾನ ಮಾಡುವುದರ ಮೂಲಕ ಸಾರ್ಥಕ ಸೇವೆ ಸಲ್ಲಿಸುವಂತೆ ವಿನಂತಿಸಲಾಗಿದೆ.
ಪಂಚಮಸಾಲಿ ಸಮಾಜಕ್ಕೆ ಸಿದ್ದೇಶ್ವರ ಅಪಮಾನ : ಅಶೋಕ್
ಸಂಸದ ಜಿ.ಎಂ. ಸಿದ್ದೇಶ್ವರ ಅವರಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನ, ಅನ್ಯಾಯವಾಗಿದ್ದು, ಸಮಾಜ ಬಾಂಧವರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್ ಕರೆ ನೀಡಿದ್ದಾರೆ.
ವಿಪ್ರ ವಟು ಶಿಕ್ಷಣ ಶಿಬಿರ
ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿಪ್ರ ವಟು ಶಿಕ್ಷಣ ಶಿಬಿರವನ್ನು ಇದೇ ದಿನಾಂಕ 10 ರಿಂದ ಮೇ 19 ರವರೆಗೆ ಆಯೋಜಿಸಲಾಗಿದೆ. ವಿವರಕ್ಕೆ ವಿನಾಯಕ ಡಿ ಜೋಶಿ (98441 30834), ಎಸ್. ಗೋಪಾಲದಾಸ್ ಅವರನ್ನು ಸಂಪರ್ಕಿಸಬಹುದು.
ವಿಠಲಾಪುರ : ಅನಾಮಧೇಯ ಮಹಿಳೆಯ ಶವ ಪತ್ತೆ
ವಿಠಲಾಪುರ ಗ್ರಾಮದ ಭದ್ರಾ ಚಾನಲ್ ಬಳಿಯ ಮರದ ಕೊಂಬೆಯಲ್ಲಿ ಸುಮಾರು 55-60 ವರ್ಷದ ಹೆಂಗಸಿನ ಅನಾಮಧೇಯ ಶವ ಪತ್ತೆಯಾಗಿದೆ.
ಕಾರ್ಯಕರ್ತರಿಗೆ ಬೆಲೆ ನೀಡದ ಸಿದ್ದೇಶ್ವರ : ಎಲ್.ಡಿ. ಗೋಣೆಪ್ಪ
ಬಿಜೆಪಿಯಲ್ಲಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಸೇರಬೇಕಾಯಿತು ಎಂದು ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಹೇಳಿದರು.
ಹಿರಿಯರನ್ನು ಗಣನೆಗೆ ತೆಗೆದುಕೊಳ್ಳದ ಸಿದ್ದೇಶ್ವರ : ಪ್ರತಾಪ್
ಜಿಲ್ಲೆಯಲ್ಲಿ ಬಿಜೆಪಿ ಒಬ್ಬ ವ್ಯಕ್ತಿಯ ಹಿಡಿತದಲ್ಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಂಡಿಲ್ಲ ಎಂದು ಮಟ್ಟಿಕಲ್ ಆರ್. ಪ್ರತಾಪ್ ಆರೋಪಿಸಿದ್ದಾರೆ.
ಬಸವ ಜಯಂತಿ: ನಗರದಲ್ಲಿ ನಾಡಿದ್ದು ಪ್ರಭಾತ್ಪೇರಿ
112ನೇ ವರ್ಷದ ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ಇದೇ ದಿನಾಂಕ 4ರ ಶನಿವಾರದಿಂದ ಇದೇ ದಿನಾಂಕ 10ರ ಶುಕ್ರವಾರದವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ರಾಜ್ಯದಲ್ಲಿ ಎರಡು ಸಿ.ಡಿ. ಉತ್ಪಾದನಾ ಫ್ಯಾಕ್ಟರಿ
ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ ಆಗುವವರೆಗೂ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.
ಅಂಕಲಿಮಠದ ಜಾತ್ರೆ : ನಾಳೆ ಸಭೆ
ನೂತನವಾಗಿ ನಿರ್ಮಾಣಗೊಂಡಿರುವ ಮಾಂಗಲ್ಯ ಭವನದ ಲೋಕಾರ್ಪಣೆಯ ಸಂಬಂಧ ನಾಡಿದ್ದು ದಿನಾಂಕ 3 ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ಬೆಳ್ಳಿಗಿರಿ ವಸತಿ ಗೃಹದಲ್ಲಿ ಪೂರ್ವಭಾವಿ ಸಭೆಯನ್ನು ಅಂಕಲಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ
ಸೈನಿಕ ಹನುಮಂತಪ್ಪ ಇಂದು ವಾಪಸ್ ಸ್ವಗ್ರಾಮಕ್ಕೆ
ಭಾರತೀಯ ಭೂಸೇನೆ ಯಲ್ಲಿ ಸೈನಿಕರಾಗಿ 17 ವರ್ಷಗಳ ಕಾಲ ದೇಶ ರಕ್ಷಣೆ ಮಾಡಿ, ನಿವೃತ್ತರಾಗಿರುವ ಹರಿಹರ ತಾಲ್ಲೂಕು ಹರಳಹಳ್ಳಿಯ ಹನಮಂತಪ್ಪ ಡಿ.ಹೆಚ್. ಅವರು ಇಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಹಣಕ್ಕಾಗಿ ಮತ ಮಾರಿಕೊಳ್ಳದೆ ನನಗೆ ನೀಡಿ: ಎಂ.ಜಿ. ಶ್ರೀಕಾಂತ್
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನವಭಾರತ ಸೇನಾ ಪಕ್ಷದ ವತಿಯಿಂದ ಸ್ಪರ್ಧಿಸಿದ್ದು, ತಮ್ಮ ಕ್ರಮ ಸಂಖ್ಯೆ 11ರ ಬೆಂಕಿ ಪಟ್ಟಣದ ಗುರುತಿಗೆ ಮತ ನೀಡುವಂತೆ ಅಭ್ಯರ್ಥಿ ಎಂ.ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.
ಶೋಷಿತ ವರ್ಗಗಳ ಏಳಿಗೆಗೆ ಕಾಂಗ್ರೆಸ್ ಅವಶ್ಯಕ ಜಗಳೂರು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ
ಶೋಷಿತ ವರ್ಗಗಳ ಏಳಿಗೆಗೆ ಕಾಂಗ್ರೆಸ್ ಆಡಳಿತ ಅವಶ್ಯಕ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ ಅಭಿಪ್ರಾಯಿಸಿದರು.
`ಸ್ವಾಭಿಮಾನಿಯಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿ’ ಹೊನ್ನಾಳಿಯಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಮನವಿ
ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಇಂದು ಹೊನ್ನಾಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಹೊನ್ನಾಳಿ ತಾ.ನ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್
ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದ್ರೆ, ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೂ ಬಂದಿಲ್ಲ.
ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯ : ಎಸ್ಸೆಸ್ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ರೋಡ್ ಷೋ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 13, 19, 20 ಮತ್ತು 21ನೇ ವಾರ್ಡ್ಗಳ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಶಾಮನೂರು ಶಿವಶಂಕರಪ್ಪ
ಜನರ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಸದರನ್ನು ಇಂದು ಬದಲಾಯಿಸದೇ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ
ಹರಪನಹಳ್ಳಿ ತಾಲ್ಲೂಕಿನ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್
ಲೋಕಸಭಾ ಚುನಾವಣೆ : ನಗರದಲ್ಲಿ ಪೊಲೀಸ್ ಪಥ ಸಂಚಲನ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ನಿನ್ನೆ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಜನರ ಸೇವೆ ಮಾಡಲೆಂದೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ : ಡಾ.ಪ್ರಭಾ
ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ರೋಡ್ ಶೋ ನಡೆಸಿದರು.
ಚನ್ನಯ್ಯ ಒಡೆಯರ್ ಸಮಾಧಿಗೆ ಸಚಿವ ಎಸ್ಸೆಸ್ಸೆಂ ಪುಷ್ಪನಮನ
ಮೂರು ಬಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ದಿ.ಚನ್ನಯ್ಯ ಒಡೆಯರ್ ಅವರ ಸಮಾಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್ ಎಂ.
ಹರಿಹರ : ನಾಡ್ ಬಂದ್ ಷಾವಲಿ ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಭೇಟಿ
ನಗರದ ನಾಡ್ ಬಂದ್ ಷಾವಲಿ ದರ್ಗಾಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ.
ಜಿ.ಎಂ.ಎಸ್ ಕಾಲೇಜಿನಿಂದ ನೆಟ್ಬಾಲ್ ಪಂದ್ಯಕ್ಕೆ ವಿದ್ಯಾರ್ಥಿನಿಯರ ಆಯ್ಕೆ
ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನಿಂದ ಐವರು ವಿದ್ಯಾರ್ಥಿನಿಯರು ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ನೆಟ್ಬಾಲ್ (ಮಹಿಳೆ) ಪಂದ್ಯಾವಳಿಯಲ್ಲಿ
ದೇವಾಂಗ ಸಮಾಜದ ಜಗದ್ಗುರುಗಳ ಆಶೀರ್ವಾದ ಪಡೆದ ಎಸ್ಸೆಸ್ಸೆಂ
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ದೇವಾಂಗ ಸಮಾಜದ ಶ್ರೀ ಗಾಯತ್ರಿ ಪೀಠ,
ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ
ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ರೈತ ಸಂಘದ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಗಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ನಗರದ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಗಾಯತ್ರಿ ಸಿದ್ದೇಶ್ವರ ಪರವಾಗಿ ಲೋಕಿಕೆರೆ ನಾಗರಾಜ್ ಮತಯಾಚನೆ
ಉತ್ತರ ವಿಧಾನಸಭಾ ಕ್ಷೇತ್ರದ 30ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಪರವಾಗಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಬೂದಿಹಾಳ್ನಲ್ಲಿ ಬಿಜೆಪಿ ಅಭ್ಯರ್ಥಿಗಳ ಮತಯಾಚನೆ
ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂದಿಹಾಳ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪತಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಗಾಂಧಿನಗರ ಹಾಲೇಶ್, ಅಂಜಿನಪ್ಪ, ಗಿರೀಶ್, ಬೂದಿಹಾಳ್ ರಾಜು, ನಾಗರಾಜ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ, ನನಗೂ ಅವಕಾಶ ಕೊಡಿ
ಹರಿಹರ : ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ, ನಿಮ್ಮ ಮನೆ ಮಗನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಸಿ. ಕೇಶವಮೂರ್ತಿ ಸೇವೆ ಮರೆಯುವಂತಿಲ್ಲ ಆರ್ಯವೈಶ್ಯ ಸಮಾಜದ ಸಭೆಯಲ್ಲಿ ಸಚಿವ ಎಸ್ಸೆಸ್ಸೆಂ
ಬಡವರ, ನಿರ್ಗತಿಕರ ಹಾಗೂ ದೀನ ದಲಿತರ ಏಳಿಗೆಗಾಗಿ ಆಶಾಕಿರಣವಾಗಿ ಸಮಾಜಸೇವೆ ಮಾಡಿರುವಂತಹ ದಿ. ಸಿ. ಕೇಶವಮೂರ್ತಿ ಅವರ ಸೇವೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಮಂಡಕ್ಕಿ-ಮಿರ್ಚಿ ಸವಿದ ಪ್ರಭಾ, ಸೌಮ್ಯ ರೆಡ್ಡಿ
ಮಲೇಬೆನ್ನೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಬುಧವಾರ ಕೊಮಾರನಹಳ್ಳಿಯ ಪ್ರಸಿದ್ದ ಮಧು ಮಂಡಕ್ಕಿ ಹೋಟೆಲ್ನಲ್ಲಿ ಮಂಡಕ್ಕಿ-ಮಿರ್ಚಿ ಸವಿದರು.
ಜಿ.ಬಿ. ವಿನಯ್ ಕುಮಾರ್ ನೀನು ಗೆದ್ದೇ ಗೆಲ್ತೀಯಾ : ಗೊರವಯ್ಯ ಭವಿಷ್ಯ
ಹರಿಹರ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನೀನು ಗೆದ್ದೇ ಗೆಲ್ಲುತ್ತೀಯಾ ಎಂದು ಗೊರವಯ್ಯ ಅವರು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ಗೆ ಅಭಯ ನೀಡಿದರು.
ಶ್ರೀಮಂತರ ಪರ ಇರುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ
ಮಲೇಬೆನ್ನೂರು : ಶ್ರೀಮಂತರ ಪರ ಆಡಳಿತ ನೀಡುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ. ಬಡವರ, ರೈತರ, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಜನರ ಹಿತ ಕಾಪಾಡುವ ಕಾಂಗ್ರೆಸ್ ಅನ್ನು ಎಂದಿಗೂ ಕೈ ಬಿಡಬೇಡಿ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ ಹೇಳಿದರು.
ಎಡಿಸಿ ಸೇರಿ 228 ಅಧಿಕಾರಿಗಳು ಅಂಚೆ ಮತದಾನ
ಚುನಾವಣಾ ಕರ್ತವ್ಯ ನಿರತರಾದ ಅಪರ ಜಿಲ್ಲಾಧಿಕಾರಿ ಸೇರಿದಂತೆ 228 ಹೊರ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಸ್ಮಾರ್ಟ್ಸಿಟಿ ಕಟ್ಟಡದಲ್ಲಿ ಬುಧವಾರ ಅಂಚೆ ಮತದಾನ ಮಾಡಿದರು.
ಹರಿಹರ ನಗರಕ್ಕೆ ಇಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್
ಹರಿಹರ : ಇದೇ ದಿನಾಂಕ 7 ರಂದು ನಡೆಯುವ ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಾಳೆ ದಿನಾಂಕ 3 ರ ಶುಕ್ರವಾರ ಸಂಜೆ 6 ಗಂಟೆಗೆ ಹರಿಹರ ನಗರದಲ್ಲಿ ಬೃಹತ್ ರೋಡ್ ಶೋ ಮಾಡಲಿದ್ದಾರೆ
ನಾಳೆ ಕುರುಬ ಸಮಾಜದ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಹೊನ್ನಾಳಿ : ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಬ ಸಮಾಜದ ಕಾರ್ಯಕರ್ತರ ಸಭೆಯನ್ನು ನಾಳೆ ದಿನಾಂಕ 4ರ ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ಬಾಪೂಜಿ ಸಮುದಾಯ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ
ಜಿಲ್ಲೆಯಿಂದ 216 ಜನ ಹಜ್ ಯಾತ್ರೆಗೆ ಪ್ರಯಾಣ
ಈ ಬಾರಿ ಪವಿತ್ರ ಹಜ್ ಯಾತ್ರೆಗೆ ಜಿಲ್ಲೆಯಿಂದ 216 ಜನ ಪ್ರಯಾಣ ಬೆಳೆಸಲಿದ್ದಾರೆ.
ಎಸ್.ಎಸ್. ಮಲ್ಲಿಕಾರ್ಜುನ್ ಸೇವಾ ಸಂಸ್ಥೆಯಿಂದ ಡಾ. ಪ್ರಭಾ ಪರ ಪಾದಯಾತ್ರೆ
ಕರ್ನಾಟಕ ರಾಜ್ಯ ಎಸ್.ಎಸ್. ಮಲ್ಲಿಕಾರ್ಜುನ್ ಸೇವಾ ಸಂಸ್ಥೆ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗಾಗಿ ಪಾದಯಾತ್ರೆ ಮೂಲಕ ಮತಯಾಚಿಸಲಾಯಿತು.
ನ್ಯಾಮತಿ ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಸುಧಾ ಆಯ್ಕೆ
ನ್ಯಾಮತಿ : ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಸುಧಾ ಅವರು ಅವಿರೋಧವಾಗಿ ಆಯ್ಕೆಯಾದರು.
ನಿಟುವಳ್ಳಿ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರಾ ಮಹೋತ್ಸವ
ದಾವಣಗೆರೆ, ಏ.27- ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.