Category: ಕೂಡ್ಲಿಗಿ

Home ಸುದ್ದಿಗಳು ಕೂಡ್ಲಿಗಿ

ಕೊಟ್ಟೂರು : ತಹಶೀಲ್ದಾರ್ ಅವರಿಂದ ವಾಹನ ತಪಾಸಣೆ

ಕೊಟ್ಟೂರು : ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುಮಾರಸ್ವಾಮಿ ಅವರು ಎಸ್.ಎಸ್.ಟಿ ಟೀಮ್ ಜೊತೆಗೆ ಉಜ್ಜಿನಿ ಹಾಗೂ ಹರಾಳು ಚೆಕ್‌ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಿದರು.

25ರಂದು ಉಜ್ಜಿನಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

ಕೊಟ್ಟೂರು : ಉಜ್ಜಿನಿ ರಥೋತ್ಸವದ ಸಂದರ್ಭದಲ್ಲಿ ಇಲಾಖಾಧಿಕಾರಿಗಳಿಗೆ ವಹಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಹಶೀಲ್ದಾರ್ ಎಂ.ಕುಮಾರಸ್ವಾಮಿ ತಿಳಿಸಿದರು.  

ಸಮಾನತೆಯ ಸಂದೇಶ ಸಾರಿದ ಡಾ. ಅಂಬೇಡ್ಕರ್

ಕೊಟ್ಟೂರು ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ   ಡಾ. ಬಿ.ಆರ್. ಅಂಬೇ ಡ್ಕರ್ ಅವರ 132ನೇ ಜಯಂತಿಯನ್ನು  ಹಿರಿಯ ಮುಖಂಡರು ಹಾಗೂ ಯುವಕ ರೊಂದಿಗೆ ಇಂದು ಆಚರಿಸಲಾಯಿತು.

ಕೊಟ್ಟೂರು : ಕಾಲ್ನಡಿಗೆಯಲ್ಲಿ ಮತದಾನ ಜಾಗೃತಿ

ಕೊಟ್ಟೂರು : ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಮತದಾನ ಅಭಿಯಾ ನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

ಮತದಾನದ ಅರಿವು ಮೂಡಿಸಲು ಆಟೋ ಜಾಥಾ

ಮತದಾನದ ಮಹತ್ವ ಮತ್ತು ಪ್ರಕ್ರಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತ ಚುನಾವಣೆ ಆಯೋಗ ಸ್ವೀಪ್ ಸಮಿತಿಯ ಅಧಿಕಾರಿ ಶಶಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಂಯಕ್ತಾಶ್ರಯದಲ್ಲಿ ಸೋಮವಾರ ಸಂಜೆ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಯೊಂದಿಗೆ ಆಟೋ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 41 ಲಕ್ಷ ರೂ ಸಂಗ್ರಹ

ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 41,44,651 ರೂ. ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಯು.ಎಂ.ಪ್ರಕಾಶರಾವ್ ತಿಳಿಸಿದರು.

ಮತ್ತೆ ಗೆಲ್ಲುವ ವಿಶ್ವಾಸ : ಶಾಸಕ ಎಸ್.ಭೀಮಾನಾಯ್ಕ

ಕೊಟ್ಟೂರು : ಕಾಂಗ್ರೆಸ್ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಭೀಮಾನಾಯ್ಕ ಅವರು ಪತ್ನಿ ಗೀತಾಬಾಯಿ ಅವರೊಂದಿಗೆ ಶನಿವಾರ ಸಂಜೆ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು. 

20.91 ಲಕ್ಷ ರೂ.ಉಳಿತಾಯ ಬಜೆಟ್ ಮಂಡನೆ

ಕೊಟ್ಟೂರು : ಪಟ್ಟಣ ಪಂಚಾಯ್ತಿ ಕಚೇರಿಯ ಕೊಟ್ಟೂರೇಶ್ವರ ಸಭಾಂಗಣದಲ್ಲಿ ಬುಧವಾರ ನಡೆದ ಬಜೆಟ್ ಮತ್ತು ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ 2023-2024 ನೇ ಸಾಲಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ 20.91 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಕೊಟ್ಟೂರು : ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ವಿತರಣೆ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ  ಶಾಸಕ ಎಸ್. ಭೀಮ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕೊಟ್ಟೂರು ತಾಲ್ಲೂಕು ಪಟ್ಟಣದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸದೃಢ ಹಾಗೂ ಸುರಕ್ಷತಾ ಕುಟುಂಬಕ್ಕಾಗಿ ಕಾಂಗ್ರೆಸ್ಸಿನ ಮೂರು ಗ್ಯಾರೆಂಟಿ ಕಾರ್ಡ್ ವಿತರಿಸಲಾಯಿತು. 

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

ಕೊಟ್ಟೂರು : ನಮ್ಮ ರಾಜ್ಯದಲ್ಲಿ ಯಾವುದೇ ಬಿಜೆಪಿ ನಾಯಕರು ಪಕ್ಷ ತೊರೆದು  ಕಾಂಗ್ರೆಸ್‌ಗೆ ಹೋಗುತ್ತಾರೆಂಬುದು ಸುಳ್ಳು ಸುದ್ದಿ.  ಬಿಜೆಪಿಯಿಂದ ಯಾವುದೇ ಶಾಸಕ ಅಥವಾ ಮುಖಂಡರು ಹೊರಗೆ ಹೋಗುವುದಿಲ್ಲ.

ಶ್ರೀ ಮಾಯಮ್ಮ ರಥೋತ್ಸವ : 3 ಲಕ್ಷಕ್ಕೆ ಹರಾಜಾದ ದೇವಿ ಪಟಾಕ್ಷಿ

ಕೊಟ್ಟೂರು : ತಾಲ್ಲೂಕಿನ ಗಾಣಗಟ್ಟೆ ಗ್ರಾಮದ ಆದಿಶಕ್ತಿ ಶ್ರೀ ಮಾಯಮ್ಮ ದೇವಿ ರಥೋತ್ಸವವು ಸಕಲ ವಾದ್ಯ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಬುಧವಾರ ಸಂಜೆ ಅದ್ಧೂರಿಯಾಗಿ ಜರುಗಿತು.

ಕೊಟ್ಟೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಕೊಟ್ಟೂರು : ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಿನ್ನೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಮುಖಂಡರು ಭಾಗವಹಿಸಿ, ಅದ್ಧೂರಿಯಾಗಿ ಆಚರಿಸಿದರು.