ಜಿ.ಎಂ.ಎಸ್ ಕಾಲೇಜಿನಿಂದ ನೆಟ್‍ಬಾಲ್ ಪಂದ್ಯಕ್ಕೆ ವಿದ್ಯಾರ್ಥಿನಿಯರ ಆಯ್ಕೆ

ಜಿ.ಎಂ.ಎಸ್ ಕಾಲೇಜಿನಿಂದ ನೆಟ್‍ಬಾಲ್ ಪಂದ್ಯಕ್ಕೆ ವಿದ್ಯಾರ್ಥಿನಿಯರ ಆಯ್ಕೆ

ದಾವಣಗೆರೆ, ಮೇ 3- ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನಿಂದ ಐವರು ವಿದ್ಯಾರ್ಥಿನಿಯರು ಇಂದಿನಿಂದ ಇದೇ ದಿನಾಂಕ 7ರವರೆಗೆ ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ನೆಟ್‍ಬಾಲ್ (ಮಹಿಳೆ) ಪಂದ್ಯಾವಳಿಯಲ್ಲಿ ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿಗಳಾದ ಕು. ಕ್ಷೇಮ ಏಂಜಲ್, ಕು. ಭೂಮಿಕಾ ಕೆ.ಬಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ ಕು. ತೇಜಸ್ವಿನಿ ಎ, ಕು. ಧನುಶ್ರೀ, ಕು. ತನ್ವಿ ಎನ್. ಗುಪ್ತಾ ಅವರುಗಳು ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.

error: Content is protected !!