Category: ಹರಿಹರ

ಮಲೇಬೆನ್ನೂರು : ಇಂದು ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಮಲೇಬೆನ್ನೂರು ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದ್ದು, 19ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

ನಾಟಕ, ಸಿನಿಮಾಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ

ಮಲೇಬೆನ್ನೂರು : ನಾಟಕ, ಸಿನಿಮಾಗಳು ಮನರಂಜನೆಗಾಗಿ ಇದ್ದರೂ ಅವುಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇದ್ದೇ ಇರುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅಭಿಪ್ರಾಯಪಟ್ಟರು.

ಕವಿತಾ ಮಾರುತಿ ಬೇಡರ್, ವಾಮನಮೂರ್ತಿ ಭೇಟಿ

ಹರಿಹರ : ಗ್ರಾಮದೇವತೆ ಊರಮ್ಮ ದೇವಿ ಹಬ್ಬದ ಸಮಯದಲ್ಲಿ ನಗರದ ಜನತೆಗೆ ನೀರಿನ ತೊಂದರೆ ಆಗದಂತೆ ತಡೆಯಲು ಕವಲೆತ್ತು ಬಳಿ ಇರುವ ಜಾಕ್ ವೇಲ್ ಮತ್ತು ಪಂಪ್ ಹೌಸ್ ಗೆ ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಮತ್ತು ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು.

ಯಲವಟ್ಟಿ : ಇಂದು ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ

ಮಲೇಬೆನ್ನೂರು ಸಮೀಪದ ಯಲ ವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾ ಸ್ವಾಮೀಜಿಯವರ  20ನೇ ವರ್ಷದ ಪುಣ್ಯಾರಾಧನೆ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮೀಜಿಯರ 18ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ವನ್ನು ಇಂದು ಹಮ್ಮಿಕೊಳ್ಳಲಾಗಿದೆ

ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ ಆಚರಣೆ

ಮಲೇಬೆನ್ನೂರು : ಹೋಳಿ ಬಣ್ಣದ ಅಂಗವಾಗಿ ಪಟ್ಟಣದ ಮುಖ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ಜಿಗಳಿಯಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವವು ಗುರುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಶಾಂತಿಯುತ ಹೋಳಿ ಆಚರಣೆಗೆ ಹರಿಹರ ಪಿಎಸ್ಐ ಮನವಿ

ಹರಿಹರ : ಪರೀಕ್ಷೆಗಳು  ಆರಂಭವಾಗಿದ್ದು,   ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ  ಆಗದಂತೆ ಹೋಳಿ ಹಬ್ಬವನ್ನು  ಆಚರಿಸುವಂತೆ  ಪಿಎಸ್ಐ ಶ್ರೀಪತಿ ಗಿನ್ನಿ  ಮನವಿ ಮಾಡಿದರು.

ಜಿಲ್ಲಾ ಮಂತ್ರಿಗಳನ್ನು ದೂರುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ

ಹರಿಹರ : ಶಾಸಕ ಬಿ.ಪಿ.ಹರೀಶ್ ವಿನಾಕಾರಣ  ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ದೂರುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.

ಕೆ.ಎಂ. ರೇಣುಕಾಗೆ `ಅಕ್ಕ’ ರಾಜ್ಯ ಪ್ರಶಸ್ತಿ

ಹರಿಹರ : ಅಕ್ಕನ ಮನೆ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೊಳೆಸಿರಿಗೆರೆಯ ಜಿಹೆಚ್‌ಪಿಎಸ್ ಶಾಲೆಯ ಶಿಕ್ಷಕಿ ಶ್ರೀಮತಿ ಕೆ.ಎಂ. ರೇಣುಕಾ ಅವರಿಗೆ ಅವರ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಅಕ್ಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

error: Content is protected !!