Category: ಲೇಖನಗಳು

Home ಲೇಖನಗಳು

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರ ವ್ರತವಿದ್ದಂತೆ – ಡಾ|| ಬಾಣಪೂರ್‌ಮಠ್‌

ಸ್ತನ್ಯಪಾನವೆನ್ನುವುದು ಪ್ರಕೃತಿದತ್ತವಾದ ಸಹಜ ಪ್ರಕ್ರಿಯೆ. ಇದನ್ನು ಸಕಲ ಪ್ರಾಣಿ ಸಂಕುಲದಲ್ಲಿಯೂ ಸಹಜವಾಗಿಯೇ ನೋಡತ್ತೇವೆ. ಹೆರಿಗೆಯಾದ ಪ್ರತಿ ತಾಯಿಗೂ ಹಾಲು ಉತ್ಪತ್ತಿಯಾಗುತ್ತದೆ, ತಾಯಿ ಮಗುವಿಗೆ ಎದೆ ಹಾಲುಣಿಸುತ್ತಾಳೆ.

ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ

ಕಳೆದ ಹಲವು ದಿನಗಳಿಂದ ಬಿಸಿಲಿನ ಪ್ರಕೋಪ ಮಿತಿ ಮೀರಿದ್ದು 40 ಡಿಗ್ರಿ ದಾಟುತ್ತಿದೆ, ಇಂತಹ ಸಮಯದಲ್ಲಿ ಉಬ್ಬಸ ಹಾಗೂ ಡಸ್ಟ್ ಅಲರ್ಜಿ ರೋಗಿಗಳಿಗೆ ವಿಶೇಷ ಕಾಳಜಿಯ ಅವಶ್ಯಕತೆ ಇದೆ. 

ಇಂದು ವಿಶ್ವ `ಥಲಸ್ಸೇಮಿಯಾ’ ದಿನ: ಈ ರಕ್ತದ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು?

ಇದು ಒಂದು ಅನುವಂಶಿಕವಾಗಿ ತಂದೆ, ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದೆ. ಈ ಕಾಯಿಲೆಯ ಲಕ್ಷಣ ಅದರ ಚಿಕಿತ್ಸೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 8 ರಂದು ವಿಶ್ವ ಥಲಸ್ಸೇಮಿಯಾ ದಿನವನ್ನು ಆಚರಿಸಲಾಗುವುದು.

ಮೇ 8, ವಿಶ್ವ ರೆಡ್‌ಕ್ರಾಸ್ ದಿನಾಚರಣೆ

ವಿಶ್ವ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಹೆನ್ರಿ ಡ್ಯೂನಾಂಟ್‌ ಎಂಬುವರು 1863ರಲ್ಲಿ ಹುಟ್ಟು ಹಾಕಿದರು. ಇದನ್ನು 1859 ಜೂನ್ 24ರಂದು ಇಟಲಿ, ಫ್ರಾನ್ಸ್‌ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ `ಸಲ್ಫರಿನೊ’ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್‌ ಕ್ರಾಸ್‌ ಅನ್ನು ಸ್ಥಾಪಿಸಿದರು.

ಪೋಷಕರಿಗೊಂದು ಕಿವಿಮಾತು

ಮಕ್ಕಳಲ್ಲಿ ಕಲಿಕೆ ಆರಂಭವಾಗುವುದು ಅನುಕರಣೆಯಿಂದ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಅನುಕರಣೆ ಮೊಳಕೆ ಯೊಡೆಯುವಾಗ ಪೋಷಕರು ಮತ್ತು ಹಿರಿಯರು ಮನೆಯಲ್ಲಿ ಮಕ್ಕಳಿರುವುದನ್ನು ಅರಿತು ಯಾವುದೇ ಕಾರ್ಯದಲ್ಲಿ ತೊಡಗುವಾಗ ಬಹಳಷ್ಟು ಎಚ್ಚರವಹಿಸಬೇಕು, ಮಾತನಾಡಬೇಕು.

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

ಬಸವಾದಿ ಶಿವಶರಣರ ಹಿರಿಯ ಸಮಕಾಲೀನ ಮರುಳಸಿದ್ಧರ ನಡೆ ಧೀರೋದಾತ್ತವಾದುದು. ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಅವರು ಸಾರಿದ ಸಮರ ಅಂದಿನ ಪಟ್ಟಭದ್ರರ ಎದೆ ನಡುಗಿಸುವಂತಿತ್ತು.

ಮಾಗಾನಹಳ್ಳಿ ರತ್ನಮ್ಮ ಅವರಿಗೆ `ಅಕ್ಕ ಶ್ರೀ’ ಪ್ರಶಸ್ತಿ

ದಾವಣಗೆರೆಯ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಮಹಿಳಾ ಕ್ಷೇತ್ರದ ಸಾಧಕರಿಗೆ ಅಕ್ಕಮಹಾದೇವಿ ಜಯಂತ್ಯೋತ್ಸವ ಹಾಗೂ ವಚನೋತ್ಸವದ ಸಂದರ್ಭದಲ್ಲಿ ಕೊಡ ಮಾಡುವ ಅಕ್ಕ ಶ್ರೀ ಪ್ರಶಸ್ತಿಗೆ ಶ್ರೀಮತಿ ಮಾಗಾನಹಳ್ಳಿ ರತ್ನಮ್ಮ ಭಾಜನರಾಗಿದ್ದಾರೆ.

ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ

ಬಸವಣ್ಣನವರ ಮೂಲ ಮಂತ್ರ ವಾದ ಕಾಯಕ ಮತ್ತು ದಾಸೋಹದಲ್ಲಿ ತಮ್ಮನ್ನು ತೊಡಗಿಸಿ ಕೊಂಡು, ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅನುಭವವ ಗಳನ್ನು ಹಂಚಿಕೊಳ್ಳುವಂತಹ ಸಂದರ್ಭದಲ್ಲಿ ಅವರಾಡಿದ ಮಾತುಗಳೇ ವಚನಗಳಾಗಿ ಮಾರ್ಪಟ್ಟು ಸರ್ವರಿಗೂ ಮಾರ್ಗದರ್ಶನ ಮಾಡುವಂತಹ ಮೈಲಿಗಲ್ಲುಗಳಾದವು.

ಡಾ. ಸ್ಯಾಮುಯಲ್ ಹಾನಿಮನ್‌ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಪಿತಾಮಹ

ಸರಿಸುಮಾರು 230 ವರ್ಷಗಳಿಗಿಂತಲೂ ಹೆಚ್ಚು ಕಾಲದ ಇತಿಹಾಸವಿರುವ ಹೋಮಿಯೋಪಥಿ ವೈದ್ಯಕೀಯ ಪದ್ದತಿ, ಜರ್ಮನಿ ಮೂಲದ ಒಬ್ಬ ಅತ್ಯಂತ ಮೇಧಾವಿ ಹಾಗೂ ರೋಗಿಗಳ ಬಗೆಗಿನ ಅಪಾರ ಕಾಳಜಿ ಹೊಂದಿದ್ದ ಡಾ. ಸ್ಯಾಮುಯಲ್ ಹಾನಿಮನ್‌ರ ಸತತ ಸಂಶೋಧನೆ ಹಾಗೂ ಅವಿರತ ಪರಿಶ್ರಮಗಳ ಫಲವೇ ಇದು ಎಂದರೆ ಉತ್ಪ್ರೇಕ್ಷೆಯೇನಲ್ಲ.

ಭಾವನೆಗಳ ಬೇವು ಬೆಲ್ಲ

ಭಾವವಗಳೇ ಸುಂದರ. ವ್ಯಕ್ತಿ ವ್ಯಕ್ತಿಗೂ ಇವು ಬದಲಾಗುತ್ತವೆ. ಕೆಲವರಿಗೆ ಬೇವಾಗಿದ್ದು, ಅದೇ ಇನ್ನೊಬ್ಬರಿಗೆ ಬೆಲ್ಲವಾಗಬಹುದು. ಮಾನಸಿಕವಾಗಿ ನಾವು ಏನನ್ನು ಯೋಚಿಸುತ್ತೇವೋ ಅದೇ ನಮ್ಮ ಭಾವನೆಗಳು ಯಾದ್ಭಾವಂ ತದ್ ಭವತಿ ಎಂಬಂತೆ ನಮ್ಮ ಮಾನಸಿಕ, ದೈಹಿಕ ಸ್ಥಿತಿ ಉತ್ತಮವಾಗಿದ್ದರೆ ನಮಗೆ ಎಲ್ಲವು ಸಿಹಿಯಾಗಿ ಕಾಣುತ್ತದೆ.

error: Content is protected !!