Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಸ್ನಾತಕೋತ್ತರ ಕೇಂದ್ರದ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ 100 ಎಕರೆ ಭೂಮಿ ನೀಡಲು ಪ್ರಯತ್ನ

ಹರಪನಹಳ್ಳಿ : ಪಟ್ಟಣದಲ್ಲಿ ಆರಂಭವಾಗಿರುವ ನೂತನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 100 ಎಕರೆ ಭೂಮಿ ನೀಡಲು ಪ್ರಯತ್ನ ಮಾಡುವು ದಾಗಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಭರವಸೆ ನೀಡಿದರು.

ಮೋದಿ ನಾಯಕತ್ವದಲ್ಲಿ ಭಾರತ ಸದೃಢ, ಸುಭದ್ರ

ಹರಿಹರ : ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದಲೇ ಭಾರತ ದೇಶವು ಸದೃಢವಾಗಿ, ಸುಭದ್ರವಾಗಿ ಅಭಿವೃದ್ಧಿ ರಾಷ್ಟ್ರವಾಗಿ ವಿಶ್ವಗುರು ಸ್ಥಾನದತ್ತ ದಾಪುಗಾಲಿಟ್ಟಿದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಗಳೂರಿನಲ್ಲಿ ಕಾಂಗ್ರೆಸ್ ಬೆಂಬಲಿಗರ ಸಭೆ ಟಿಕೆಟ್ ಸಿಗುವ ವಿಶ್ವಾಸವಿದೆ : ವಿನಯ್ ಕುಮಾರ್

 ಜಗಳೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದ್ದು ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಪಕ್ಷದ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ನಿಧನಕ್ಕೆ ಮೇಣದ ಬತ್ತಿ ಹಚ್ಚಿ ಸಂತಾಪ

ಜಗಳೂರು : ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕನ್ನಡ ಚಲನಚಿತ್ರ ನಟ ಕೆ. ಶಿವರಾಮ್ ನಿಧನಕ್ಕೆ ಮೇಣದ ಬತ್ತಿ ಹಚ್ಚಿ ಸಂತಾಪ ಸೂಚಿಸಲಾಯಿತು.

ಮಲೇಬೆನ್ನೂರಿನಿಂದ ಕೊಟ್ಟೂರಿಗೆ ಪಾದಯಾತ್ರೆ

ಮಲೇಬೆನ್ನೂರು : ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಲೇಬೆನ್ನೂರಿನ ಭಕ್ತರು ಗುರುವಾರ ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು.

ಹೊಸ ಆವಿಷ್ಕಾರಗಳನ್ನು ಬಿತ್ತಲು ಎಳೆಯ ವಯಸ್ಸು ಸೂಕ್ತ

ಹೊನ್ನಾಳಿ : ಹೊಸ ಆವಿಷ್ಕಾರಗಳನ್ನು ನಾವು ಮಕ್ಕಳ ಎಳೆಯ ವಯಸ್ಸಿನಲ್ಲಿಯೇ ಕಾಣಲು ಸಾಧ್ಯ, ಇದನ್ನು ನಾವು ಕಾಣ ಬೇಕಾದರೆ ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಬಿತ್ತಬೇಕು ಎಂದು ಸಿ.ವಿ ರಾಮನ್ ವಿಜ್ಞಾನ ಸಂಘದ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದರು. 

ಗಮನ ಸೆಳೆದ ಕಾಲಶಾಸ್ತ್ರ, ತ್ರಿಶೂಲ ಪವಾಡ

ಮಲೇಬೆನ್ನೂರು : ದೇವರಬೆಳಕೆರೆ ಗ್ರಾಮದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಕಾಲಶಾಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಗಮನ ಸೆಳೆದವು.

ಹರಿಹರದಲ್ಲಿ ಕೊಟ್ಟೂರು ಮಹಾರಥೋತ್ಸವಕ್ಕೆ ಪಾದಯಾತ್ರೆ

ಹರಿಹರ : ಸೋಮವಾರ ನಡೆಯುವ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ನಗರದ ಹೊರವಲಯದ ಕೋಡಿಯಾಲ ಹೊಸಪೇಟೆ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಇಂದು ಸಂಜೆ ತೆರಳಿದರು. 

ತ.ನಾಡಿನಿಂದ ದೆಹಲಿವರೆಗೆ ಬೈಕ್‌ನಲ್ಲಿ ಮೋದಿ ಪರ ಪ್ರಚಾರ : ಬೀಳ್ಕೊಡುಗೆ

ಮಲೇಬೆನ್ನೂರು : ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಪ್ರಚಾರ ಮಾಡುತ್ತಾ ಬೈಕ್‌ನಲ್ಲಿ ತಮಿಳುನಾಡಿನ ಮಧುರೆಯಿಂದ ದೆಹಲಿವರೆಗೆ ಜಾಗೃತಿ ಜಾಥಾ ಕೈಗೊಂಡಿರುವ ರಾಜಲಕ್ಷ್ಮಿ ಮತ್ತು ಅವರ ತಂಡ ಇಂದು ಸಂಜೆ ಹೊನ್ನಾಳಿಯಿಂದ ಮಲೇಬೆನ್ನೂರಿಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ, ನಂತರ ಹರಿಹರಕ್ಕೆ ಬೀಳ್ಕೊಟ್ಟರು.

ಭಾನುವಳ್ಳಿ : 3ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ : ಎಸ್ಪಿ ಉಮಾ ಪ್ರಶಾಂತ್ ಭೇಟಿ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ತೆರವುಗೊಳಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸಬೇಕು ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ, ಕುರುಬ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.

ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ

ಹರಪನಹಳ್ಳಿ :00 ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯವು ಅರಾಜಕತೆಯತ್ತ ಸಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಶಾಸಕ ಪಿ. ರಾಜೀವ್ ಆರೋಪಿಸಿದರು.

error: Content is protected !!