Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು : ಹೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

ರಾಣೇಬೆನ್ನೂರು : ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿ, ಆಧಾರ್ ಲಿಂಕ್ ಮಾಡುವ ಸರ್ಕಾರದ ಯೋಜನೆ ವಿರೋಧಿಸಿ, ರೈತ ಮುಖಂಡ ರವೀಂದ್ರಗೌಡ ಪಾಟೀಲರ ನೇತೃತ್ವದಲ್ಲಿ ಇಲ್ಲಿನ ಹೆಸ್ಕಾಂ ಕಚೇರಿ ಮುಂದೆ ಕೃಷಿ ಪಂಪ್‍ಸೆಟ್‍ಗಳ ಪರಿಕರಗಳನ್ನು ಬಿಸಾಕಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಮಹಿಳಾ ಸಾಹಿತ್ಯಕ್ಕೆ ಹೆಳವನಕಟ್ಟೆ ಗಿರಿಯಮ್ಮ ಕೊಡುಗೆ ಅದ್ವಿತೀಯ

ರಾಣೇಬೆನ್ನೂರು : ಇದುವರೆಗೂ ಪ್ರಕಟವಾಗಿ ರುವ ಕನ್ನಡ ಸಾಹಿತ್ಯದಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಕಾವ್ಯಗಳಲ್ಲಿ ಹೊಸ ವಿಚಾರ ಕಾಣುತ್ತದೆ. ಅವಳ ಅಪ್ಪಟ ಬದುಕು ಸಾಹಿತ್ಯದ ಕೃತಿಗಳ ಸ್ಥೂಲವಾದ ಪರಿಚಯಾತ್ಮ ಕದಂತಿದೆ.

ರಾಣೇಬೆನ್ನೂರು ತಾ|| ಕಸಾಪ ಭವನ ನಿರ್ಮಾಣ ರಾಜ್ಯದಲ್ಲೇ ಪ್ರಥಮ

ರಾಣೇಬೆನ್ನೂರು : ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಿಸಿದ ಕೀರ್ತಿ ತಾಲ್ಲೂಕಿನ ಸಾಹಿತ್ಯಾಸಕ್ತರಿಗೆ ಸಲ್ಲುತ್ತದೆ ಎಂದು `ವರ್ತಕ ರತ್ನ ಪ್ರಶಸ್ತಿ ಪುರಸ್ಕೃತ’ ಉದ್ಯಮಿ ಮಲ್ಲೇಶ್‌ ಹೇಳಿದರು.

ಕಳಸಾರೋಹಣದಿಂದ ಕುಟುಂಬದ ಆರ್ಥಿಕ ಅಭಿವೃದ್ಧಿ

ರಾಣೇಬೆನ್ನೂರು : ದೇವಸ್ಥಾನ ಕಟ್ಟಿಸಿದರೆ ಸಾಲದು, ಆ ದೇವಸ್ಥಾನಕ್ಕೆ ಕಳಸಾ ರೋಹಣ ಮಾಡಿದರೆ ಹೊನ್ನ ಕಳಸವಿಟ್ಟಂತೆ. ಆಗ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ಜೊತೆಗೆ ಪ್ರತಿಯೊಂದು ಕುಟುಂಬದ ಆರ್ಥಿಕ ಅಭಿವೃದ್ಧಿ ಯಾಗಿ ಸಂತಸದ ಬೀಡಾಗುತ್ತದೆ

ಪ್ರತಿಭಾ ಕಾರಂಜಿ : ಮಹಮ್ಮದ್, ಕೃತಿಕಾ ಕಮ್ಮಾರ್‌ ಪ್ರಥಮ

ರಾಣೇಬೆನ್ನೂರು : ನಗರದಲ್ಲಿ ಈಚೆಗೆ ನಡೆದ ರಾಣೇಬೆನ್ನೂರು ನಂ-1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ `ಕಲೋತ್ಸವ ಕಾರ್ಯಕ್ರಮ’ದಲ್ಲಿ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

240 ಕೋಟಿ ರೂ. ವೆಚ್ಚದಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆ

ರಾಣೇಬೆನ್ನೂರು : 240 ಕೋಟಿ ವೆಚ್ಚದಲ್ಲಿ ಭೈರವನ ಪಾದ, ಕರಲಗೇರಿ ಹಾಗೂ ಕುದರಿಹಾಳ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿ ದೊರಕಿದ್ದು  ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಹಾವೇರಿಯಲ್ಲಿ ಮೈತ್ರಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನೆ

ರಾಣೇಬೆನ್ನೂರು : ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು   ಜೆಡಿಎಸ್ ಹಾಗೂ ಬಿಜೆಪಿ ಪ್ರಯತ್ನ  ನಡೆಸಿವೆ ಎಂದು  ಆರೋಪಿಸಿ ಹಾವೇರಿಯಲ್ಲಿಂದು ಜಿಲ್ಲಾ ಕಾಂಗ್ರೆಸ್  ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಅಲ್ಲದೇ ರಾಜ್ಯಪಾಲರ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  

ರಾಣೇಬೆನ್ನೂರು : ದಲಿತ ಸಂಘರ್ಷ ಸಮಿತಿಯಿಂದ ವಿಜಯೋತ್ಸವ

ರಾಣೇಬೆನ್ನೂರು : ಒಳ ಮೀ ಸಲಾತಿ ವರ್ಗೀಕರಣದ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ ತಾಲ್ಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ನಗರದ ಸಂಗಮ ಸರ್ಕಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಎಲ್ಲೆಡೆ ಕೆರೆ-ಕೊಳ್ಳ ತುಂಬಿ ಹರಿದರೂ.. ರಾಣೇಬೆನ್ನೂರು ದೊಡ್ಡಕೆರೆಗಿಲ್ಲದ ಭಾಗ್ಯ.!

ರಾಣೇಬೆನ್ನೂರು : ನಾಡಿನಾದ್ಯಂತ  ಬೀಳುತ್ತಿರುವ ಮಳೆಯಿಂದ ಹೊಳೆ-ಹಳ್ಳಗಳು ಬೋರ್ಗರೆಯುತ್ತ ಹರಿದವು, ಕೆರೆ-ಕೊಳ್ಳ ತುಂಬಿ ತುಳುಕಾಡಿದವಾದರೂ ರಾಣೇಬೆನ್ನೂರು ದೊಡ್ಡಕೆರೆಗೆ ಆ ಭಾಗ್ಯವಿಲ್ಲ.

ಮಳೆಯಿಂದ ಅಲ್ಪ ಹಾನಿ ; ಶೀಘ್ರದಲ್ಲಿ ಪರಿಹಾರ

ರಾಣೇಬೆನ್ನೂರು : ಕಳೆದ ಒಂದು ವಾರದಿಂದ ಮಳೆ ಸುರಿದರೂ ಸಹ ನಮ್ಮ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಬೆಳೆ ಹಾನಿಯಾಗಲೀ ಹಾಗೂ ಹೆಚ್ಚು ಮನೆಗಳು ಬಿದ್ದ ದುರ್ಘಟನೆಗಳು ನಡೆದಿಲ್ಲ. ತುಂಗಭದ್ರಾ ಹಾಗೂ ಕುಮದ್ವತಿ ನದಿ ತೀರದ ನಾಲ್ಕಾರು ಗ್ರಾಮಗಳ  ಹತ್ತಾರು ಎಕರೆಗಳಲ್ಲಿನ ಬೆಳೆ ಹಾಳಾಗಿದೆ. 

error: Content is protected !!