Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು

ಮಳೆ ಬಿರುಸು

ಮುಂಗಾರು ಪೂರ್ವದಲ್ಲಿ ಆರ್ಭಟಿಸಿದ್ದ ಮಳೆ ಕಳೆದ ಕೆಲವು ದಿನ ಕಡಿಮೆಯಾಗಿ ಆತಂಕ ಮೂಡಿಸಿತ್ತು. ಆದರೆ ಕಳೆದೆರಡು ದಿನಗಳಿಂದ ಮತ್ತೆ ಚುರುಕಾಗಿದ್ದು, ಜನರಲ್ಲಿ ಸಂತಸ ತಂದಿದೆ. ಸೋಮವಾರ ಮಧ್ಯಾಹ್ನ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಮಳೆಯೊಂದಿಗಿನ ನಡಿಗೆಯ ಚಿತ್ರ.

ಗ್ರಾಮಾಂತರ ಪ್ರದೇಶಗಳಲ್ಲಿ ಸಮಗ್ರ ಮೂಲ ಸೌಕರ್ಯ ಕಲ್ಪಿಸುವ ಯೋಜನೆ ರೂಪಿಸಲು ಸಂಸದರ ನಿರ್ದೇಶನ

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸುವಂತೆ ದಾವಣಗೆರೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸುರೇಶ ಹಿಟ್ನಾಳ್ ಅವರೊಂದಿಗೆ ತಮ್ಮ ಗೃಹ ಕಚೇರಿ ಸಭೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸೂಚಿಸಿದರು. 

ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ

21ನೇ ಶತಮಾತನದಲ್ಲಿ ಆಧುನಿಕ ದೃಶ್ಯಮಾಧ್ಯಮ ಎಷ್ಟೇ ಜನಪ್ರಿಯವಾದರೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ ಎಂದು ಹಿರಿಯ ಪತ್ರಕರ್ತ  ಎಚ್.ಬಿ.ಮಂಜುನಾಥ್ ತಿಳಿಸಿದರು. 

ತಾಂತ್ರಿಕತೆ ನೈಪುಣ್ಯತೆ ಹೆಚ್ಚಿಸಿಕೊಳ್ಳಿ

ದಾವಣಗೆರೆ ಜಿಲ್ಲೆ ಪಹಣಿಗೆ ಆಧಾರ್ ಲಿಂಕ್ ಮತ್ತು ಸರ್ಕಾರಿ ಲ್ಯಾಂಡ್‍ಬೀಟ್ ಪ್ರಗತಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ತಾಂತ್ರಿಕತೆಯ ನೈಪುಣ್ಯತೆಯನ್ನು ಕಂದಾಯ ಇಲಾಖೆ ಸಿಬ್ಬಂದಿಗಳು ಹೆಚ್ಚಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು. 

ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಿ

ಜಿಲ್ಲೆಯ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರಿನಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆ ಸ್ಥಗಿತ ಇಲ್ಲ, ಆತಂಕ ಬೇಡ

ಐದು ಗ್ಯಾರಂಟಿ ಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮಹಿಳೆಯರು ಪ್ರತಿಪಕ್ಷಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬೇಡಿ. ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.

ಭದ್ರಾ ಮೇಲ್ದಂಡೆ ಚುರುಕಿಗೆ ಸೂಚನೆ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿ ರುವುದಕ್ಕೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒತ್ತಡಕ್ಕೆ ಮಣಿದು ತಪ್ಪು ಮಾಡದಿರಿ

ಮಲೇಬೆನ್ನೂರು : ಅಧಿಕಾರಿಗಳು ಬೇರೆಯವರ ಒತ್ತಡಕ್ಕೆ ಮಣಿದು ತಪ್ಪು ಮಾಡಿದರೆ ಮುಂದೆ ನಿಮ್ಮನ್ನು ಉಳಿಸಲು ಯಾರೂ ಬರಲ್ಲ. ತಪ್ಪು ಮಾಡಿದರೆ ನನ್ನನ್ನೂ ಸೇರಿ ಯಾರಿಗೂ ಉಳಿಗಾಲ ಇಲ್ಲ ಎಂದು ಶಾಸಕ ಬಿ.ಪಿ. ಹರೀಶ್ ಅಧಿಕಾರಿಗಳನ್ನು ಎಚ್ಚರಿಸಿದರು.

ನಾಗಮ್ಮ ಕೇಶವಮೂರ್ತಿ ಕುರಿತ ಸಂಶೋಧನಾ ಗ್ರಂಥ ಹೊರ ತರಲಿ

ಮಾಜಿ ಸಚಿವೆ, ವನಿತಾ ಸಮಾಜದ ಸಂಸ್ಥಾಪಕರಾಗಿದ್ದ ದಿ. ಡಾ.ನಾಗಮ್ಮ ಕೇಶವಮೂರ್ತಿ ಅವರ ಜೀವನ ಸಾಧನೆ ಕುರಿತ ಸಂಶೋಧನಾ ಗ್ರಂಥ ಹೊರ ತರುವ ಅಗತ್ಯವಿದೆ ಎಂದು ನಗರದ ಸಾಧನಾಶ್ರಮದ ಮಾತಾಜಿ ಯೋಗಾನಂದಮಯಿ ಹೇಳಿದರು.

ಸಾಕ್ಷಿಗಳು ತಿರುಗಿ ಬೀಳುವುದೇ ಶಿಕ್ಷೆಗೆ ಅಡ್ಡಿ

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿ ಬೀಳುವ ಕಾರಣದಿಂದ ಶೇ.80-85ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಪ್ರತಿಭಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್ ಹಾಗೂ ಚುನಾವಣಾ ವೆಚ್ಚಕ್ಕೆ ಹಣ ಬಳಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಆವರಗೆರೆ, ಭಾರತ್ ಕಾಲೋನಿ, ಬಸಾಪುರ ಗ್ರಾಮದ ರಾಜಕಾಲುವೆ ಹೂಳು ತೆಗೆಯಲು ಮೇಯರ್‌ ನಿರ್ದೇಶನ

ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಆವರಗೆರೆ, ಭಾರತ್ ಕಾಲೋನಿ, ಬಸಾಪುರ ಗ್ರಾಮದಲ್ಲಿನ ರಾಜಕಾಲುವೆಗಳಿಗೆ ಆಯುಕ್ತರು, ಮೇಯರ್, ಪಾಲಿಕೆಯ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದಷ್ಟು ಬೇಗ ಉಳಿದಿರುವ ಹೂಳೆತ್ತುವ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. 

error: Content is protected !!