Tag: ದಾವಣಗೆರೆ

Home ದಾವಣಗೆರೆ

ಮೋದಿಜೀ ಅಂತಹ ನಾಯಕ ಮತ್ತೆ ಸಿಗೋಲ್ಲ

ಹೊನ್ನಾಳಿ : ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅಂತಹ ಇನ್ನೊಬ್ಬ ನಾಯಕ 100 ವರ್ಷ ಕಳೆದರೂ ಈ ದೇಶಕ್ಕೆ ಸಿಗುವುದಿಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ನೀತಿ ಸಂಹಿತೆ : 14.32 ಕೋಟಿ ವಿವಿಧ ವಸ್ತುಗಳು ಸೇರಿದಂತೆ ನಗದು ವಶ

ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ಏಪ್ರಿಲ್ 24 ರ ವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ ರೂ. 14,32,07,731 ಮೌಲ್ಯದ ವಿವಿಧ ವಸ್ತುಗಳು, ಮದ್ಯ, ಮಾದಕ ವಸ್ತು ಸೇರಿದಂತೆ ನಗದು ವಶಪಡಿಸಿಕೊಳ್ಳಲಾಗಿದೆ

ಜೆಇಇ ಮೇನ್ಸ್‍ನಲ್ಲಿ ನಗರದ ಮಾಗನೂರು ಬಸಪ್ಪ ಕಾಲೇಜಿಗೆ ರ‍್ಯಾಂಕ್

ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಇಂಜಿನಿಯರಿಂಗ್ ಪದವಿಯ ಪ್ರವೇಶಕ್ಕೆ 2024 ರಲ್ಲಿ ನಡೆಸಲಾದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ವರುಣ್ ಎಂ.ಎಸ್.  ರಾಷ್ಟ್ರಮಟ್ಟದಲ್ಲಿ 144 ನೇ ರ‍್ಯಾಂಕ್ ಪಡೆದಿರುತ್ತಾನೆ.

ಕಾರ್ಯಕರ್ತರಲ್ಲಿ ಒಗ್ಗಟ್ಟಿದ್ದರೆ ಪಕ್ಷಕ್ಕೆ ಸೋಲೇ ಇಲ್ಲ : ಎಸ್ಸೆಸ್ಸೆಂ

ಹರಪನಹಳ್ಳಿ : ಹರಪನಹಳ್ಳಿ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿನ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿದರೆ ಕಾಂಗ್ರೆಸ್ಸಿಗೆ ಸೋಲೇ ಇಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಹನುಮ ಜನ್ಮೋತ್ಸವ: ನಾಳೆ ಶೋಭಾಯಾತ್ರೆ

ಶ್ರೀ ಹನುಮ ಜನ್ಮೋತ್ಸವ ಸಮಿತಿ ವತಿಯಿಂದ ಶ್ರೀ ಹನುಮ ಜನ್ಮೋತ್ಸವ ಪ್ರಯುಕ್ತ 3ನೇ ವರ್ಷದ ಶೋಭಾಯಾತ್ರೆಯನ್ನು ನಾಡಿದ್ದು ದಿನಾಂಕ 27ರ ಶನಿವಾರ ಹಮ್ಮಿಕೊಳ್ಳಲಾಗಿದೆ.

ಬೆಣ್ಣೆ ನಗರಿಯಲ್ಲಿ ಅಕ್ಷರ ದೋಸೋತ್ಸವ

ದಾವಣಗೆರೆ ಬೆಣ್ಣೆ ನಗರಿ, ಬೆಣ್ಣೆ ದೋಸೆ ಎಂದೇ ಬ್ರಾಂಡ್ ಪಡೆದುಕೊಂಡಿದೆ. ದೋಸೆ ಕಾವಲಿಯಲ್ಲಿ ದೋಸೆಯ ಹಿಟ್ಟನ್ನು ಬಳಸಿ ನಮ್ಮ ಮತ, ನನ್ನ ಹಕ್ಕು, ತಪ್ಪದೇ ಮೇ 7 ರಂದು ಮತದಾನ ಮಾಡಿ ಎಂಬ ಘೋಷಣೆಯನ್ನು ಕಾವಲಿಯಲ್ಲಿ ದೋಸೆಯಲ್ಲಿ ಮೂಡಿ ಬಂದಿತು. 

ನಗರದಲ್ಲಿ ಇಂದು ವಿಶ್ವಕರ್ಮ ಸಮಾಜದಿಂದ ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ

ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾಮೂಹಿಕ ಉಪನಯನ ಹಾಗೂ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ತಿಳಿಸಿದ್ದಾರೆ.

ಹೆಚ್‌.ಎಸ್‌. ನಾಗರಾಜ್‌ ಮತ್ತವರ ಅಭಿಮಾನಿಗಳಿಗೆ ಕಾಂಗ್ರೆಸ್‌ ಸ್ವಾಗತ

ನಗರದ ರೇಣುಕ ಮಂದಿರದಲ್ಲಿ ನಡೆದ ಹೆಚ್.ಎಸ್. ನಾಗರಾಜ್ ಮತ್ತು ಅಭಿಮಾನಿಗಳ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡರುಗಳಾದ ಎನ್.ಜಿ. ಪುಟ್ಟಸ್ವಾಮಿ, ಬಿ.ಹೆಚ್. ವೀರಭದ್ರಪ್ಪ, ದುಮ್ಮಿ ಚಮನ್ ಸಾಬ್, ಗಣೇಶ್ ಹುಲ್ಮನಿ ಇತರರಿದ್ದರು.

22ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ಮತಯಾಚನೆ

ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಮಹಾನಗರ ಪಾಲಿಕೆಯ 22ನೇ ವಾರ್ಡ್‌ ಯಲ್ಲಮ್ಮ ನಗರದ 11ನೇ ಕ್ರಾಸ್‌ನಲ್ಲಿ  ವಾರ್ಡ್‌ನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗಾಗಿ ಮನೆ – ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು.

ಸಿದ್ಧಗಂಗಾ ಕಾಲೇಜಿಗೆ ಜೆಇಇ ಮೇನ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 64ನೇ ರ‍್ಯಾಂಕ್

2023-24ನೇ ಸಾಲಿನ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನು ಎಲ್.ಜೆ.ಅದ್ವಿತೀಯ ಸಾಧನೆ ಮಾಡಿ ಅಖಿಲ ಭಾರತ ಮಟ್ಟದ 64ನೇ ರ‍್ಯಾಂಕ್ ಪಡೆದಿರುತ್ತಾನೆ.

ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ 1 ತಿಂಗಳು ನಡೆಸು ತ್ತಿರುವ ಮಜ್ಜಿಗೆ ವಿತರಣಾ ಕಾರ್ಯ ಕ್ರಮಕ್ಕೆ  ಪ್ರತಿಭಾ ವಿಶ್ವನಾಥ್, ಶೋಭಾ ಹನುಮಂತಪ್ಪ, ಎಸ್.ಆರ್. ಮಲ್ಲಿಕಾರ್ಜುನ್ ಸೋಗಿ ನೆನಪಿನಲ್ಲಿ, ಮೇಧಾ ವೇದ ಮಾಧವ ಕುಲಕರ್ಣಿ ಅವರು ಇಂದಿನ ದಾನಿಗಳಾಗಿದ್ದಾರೆ.

error: Content is protected !!