ಬಟ್ಟೆ ತೊಳೆಯಲೆಂದು ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿ ಚಾನಲ್ಗೆ ಬಂದಿದ್ದ ಮಹಿಳೆಯರು ತಮ್ಮೊಂದಿಗೆ ಕರೆ ತಂದಿದ್ದ ಚಿಕ್ಕ ಮಕ್ಕಳಿಗೆ ನೋಡಿಲ್ಲಿ ಆಬೂ (ನೀರು) ಎನ್ನುತ್ತಾ ಸ್ನಾನ ಮಾಡಿಸಿದರು.

ಆದಿ ಜಗದ್ಗುರು ರೇಣುಕಾಚಾರ್ಯರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಶೀಘ್ರ ಪೂರೈಸಲಿ
ಶ್ರೀ ರೇಣುಕಾ ಚಾರ್ಯರ ಮಹಾದ್ವಾರ ಮತ್ತು ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಹೊಣೆ ಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎ. ರವೀಂದ್ರನಾಥ್ ವಹಿಸಿಕೊಂಡು ಆದಷ್ಟು ಶೀಘ್ರ ಕಾರ್ಯ ಪೂರ್ಣಗೊಳಿಸುವಲ್ಲಿ ಕ್ರಮ ತೆಗೆದುಕೊಳ್ಳಬೇಕು

ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಗೆ : ಕಾಪಶಿ
ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಅಧಿಕಾರಿಗಳು, ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಮಾದರಿ ನೀತಿ ಸಂಹಿತೆಯನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ರಾಮನವಮಿ : ನಗರದಲ್ಲಿ ಇಂದು ಶೋಭಾಯಾತ್ರೆ
ಶ್ರೀ ರಾಮನವಮಿ ಉತ್ಸವ ಸಮಿತಿ ವತಿಯಿಂದ ಶೋಭಾಯಾತ್ರೆ ಹಾಗೂ ಶ್ರೀ ರಾಮೋತ್ಸವ ಕಾರ್ಯಕ್ರಮವನ್ನು ನಾಳೆ ದಿನಾಂಕ 30ರ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಂತೋಷ್ ಪೈಲ್ವಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೊಲ್ಲರಹಳ್ಳಿಯಲ್ಲಿ ಇಂದು ವೆಂಕಟೇಶ್ವರಸ್ವಾಮಿ ರಥೋತ್ಸವ
ದಾವಣಗೆರೆ ಸಮೀಪದ ಗೊಲ್ಲರಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಇಂದು ಸಂಜೆ 4.30ಕ್ಕೆ ನಡೆಯಲಿದೆ.
ಒಳ ಮೀಸಲಾತಿ ಶಿಫಾರಸ್ಸಿಗೆ ಭೋವಿ ಸಮಾಜ ವಿರೋಧ ಸರ್ಕಾರ ತಪ್ಪು ತಿದ್ದಿಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ
ರಾಜ್ಯ ಸರ್ಕಾರ ಒಳ ಮೀಸಲಾತಿ ಶಿಫಾರಸ್ಸು ಮಾಡುವ ಮೂಲಕ ಪರಿಶಿಷ್ಟ ಜಾತಿಯ ಜನರ ಮಧ್ಯೆ ವಿಷ ಬಿತ್ತುವ ಕೆಲಸ ಮಾಡಿದ್ದು, ಅವೈಜ್ಞಾನಿಕವಾಗಿ ಒಳ ಮೀಸಲಾತಿ ಘೋಷಿಸಿದೆ ಎಂದು ಜಿಲ್ಲಾ ಭೋವಿ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕಾಶ್ ಕೋಳಿವಾಡಗೆ ಟಿಕೆಟ್ : ಜಟ್ಟೆಪ್ಪ ಕರೇಗೌಡ್ರ ಅಸಮಾಧಾನ
ರಾಣೇಬೆನ್ನೂರು : ಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಪುತ್ರನ ಹೆಸರು ಬಂದಿರುವುದು ಬೇಸರದ ಸಂಗತಿಯಾಗಿದೆ
ಅಣಜಿಗೇರಿಯಲ್ಲಿ ಇಂದು- ನಾಳೆ ಜಾತ್ರಾ ಮಹೋತ್ಸವ
ಹರಪನಹಳ್ಳಿ ತಾಲ್ಲೂಕಿನ ಅಣಜಿಗೇರಿಯಲ್ಲಿ ಇಂದು ಮತ್ತು ನಾಳೆ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ದಿಡಗೂರು ಆಂಜನೇಯ ಸ್ವಾಮಿ ರಥೋತ್ಸವ
ಹೊನ್ನಾಳಿ ತಾಲ್ಲೂಕಿನ ದಿಡಗೂರು ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ಇಂದು ನಡೆಯಲಿದೆ.
ಹರಳಹಳ್ಳಿ : ಇಂದು ಆಂಜನೇಯ ಸ್ವಾಮಿ ತೇರು
ಮಲೇಬೆನ್ನೂರು ಸಮೀಪದ ಹರಳಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಇಂದು ತಡರಾತ್ರಿ (ಶುಕ್ರವಾರ ಬೆಳಗಿನ ಜಾವ) ಜರುಗ ಲಿದೆ. ರಥೋ ತ್ಸವದ ಅಂಗ ವಾಗಿ ಇಂದು ಬೆಳಿಗ್ಗೆ 8ಕ್ಕೆ ಗಜೋತ್ಸವ, ಗಂಡುಗತ್ತಿ ಹಾಯುವುದು, ಮಧ್ಯಾಹ್ನ 12.30ಕ್ಕೆ ಗ್ರಾಮಸ್ಥರಿಂದ ಅಕ್ಕಿಪಡಿ ಹಾಕಿದ ನಂತರ ಭಕ್ತಾದಿಗಳಿಂದ ಸೇವಾ ಕಾರ್ಯಕ್ರಮಗಳು ನಡೆಯಲಿವೆ.
ಬಸವನಾಳ್ ಗೊಲ್ಲರಹಟ್ಟಿ : ಆಂಜನೇಯ ಸ್ವಾಮಿ ತೇರು
ದಾವಣಗೆರೆ ತಾಲ್ಲೂಕು ಬಸವನಾಳ್ ಗೊಲ್ಲರಹಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ನಾಳೆ ಗುರುವಾರ ಸಂಜೆ 5 ಗಂಟೆಗೆ ನಡೆಯಲಿದೆ.
ಕುಕ್ಕುವಾಡದಲ್ಲಿ ಇಂದು ರಥೋತ್ಸವ
ದಾವಣಗೆರೆ ತಾ.ನ ಕುಕ್ಕುವಾಡ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವ ಮತ್ತು ಜಾತ್ರಾ ಾಮಹೋತ್ಸ ವವು ಇಂದು ನಡೆಯಲಿದೆ. ಇಂದು 5 ಕ್ಕೆ ಶ್ರೀ ಆಂಜನೇಯ ಸ್ವಾಮಿ ಉಚ್ಛಾ ಯದ ರಥೋ ತ್ಸವ ನಡೆಯಲಿದ್ದು, ನಾಳೆ ಶುಕ್ರವಾರ ಬೆಳಿಗ್ಗೆ 9 ಕ್ಕೆ ದೇವರ ಬಾವುಟ, ಭಕ್ತರು ಕೊಟ್ಟ ಕಾಣಿಕೆಗಳ ಹರಾಜು ರಥೋತ್ಸವ ಜರುಗು ವುದು.
ಕೆ.ಎನ್ ಹಳ್ಳಿಯಲ್ಲಿಂದು ತೇರು
ಮಲೇಬೆನ್ನೂರು ಸಮೀಪದ ಕೆ.ಎನ್ ಹಳ್ಳಿ ಗ್ರಾಮದಲ್ಲಿ ಶ್ರೀ ರಾಮನವಮಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಸೀತಾ ರಾಮ ಕಲ್ಯಾಣ ಮಹೋತ್ಸವವು ಇಂದು ಜರುಗಲಿದೆ.
ಕೊಕ್ಕನೂರಿನಲ್ಲಿಂದು ಹನುಮಪ್ಪನ ತೇರು
ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಇಂದು ಜರುಗಲಿದ್ದು, ಗ್ರಾಮ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ 10 ಹೊಸ ಕಂದಾಯ ಗ್ರಾಮಗಳ ಸೃಜನೆ
ದಾವಣಗೆರೆ ತಾಲ್ಲೂಕು ವ್ಯಾಪ್ತಿಯ 10 ಹೊಸ ಕಂದಾಯ ಗ್ರಾಮಗಳನ್ನು ಸೃಜಿಸಿಲಾಗಿದೆ.
ನಗರದ ಕೋದಂಡರಾಮ ದೇವಸ್ಥಾನದಲ್ಲಿ ಇಂದು – ನಾಳೆ ಶ್ರೀರಾಮ ಜನ್ಮೋತ್ಸವ
ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಬರುವ ಮಾರ್ಚ್ 4ರಂದು ಚುನಾವಣೆ ನಡೆಯಲಿದೆ.
ಎಸ್ಬಿಐ ಆಡಳಿತ ಮಂಡಳಿಯ ಮಲತಾಯಿ ಧೋರಣೆ ಖಂಡಿಸಿ ನಾಳೆ ಪ್ರತಿಭಟನೆ
ಉದ್ಯೋಗದಾತರ ಕೊಡುಗೆ ಯಲ್ಲಿನ ಕುಂದು ಕೊರತೆಗಳ ಈಡೇರಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕುಗಳ ನಿವೃತ್ತ ಉದ್ಯೋಗಿಗಳು ನಾಡಿದ್ದು ದಿನಾಂಕ 31 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿರುವ ಎಸ್ಬಿಐ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಿದ್ದಾರೆ
ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ : ಗಲಭೆ ಹಿಂದೆ ಕೈ ಮುಖಂಡರ ಕೈವಾಡ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿರೋಧಿಸಿ, ಶಿಕಾರಿಪುರದಲ್ಲಿ ನಡೆದ ಹೋರಾಟದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವುದು ಅತ್ಯಂತ ಖೇದನೀಯ
ಶಿಫಾರಸ್ಸು ತಿರಸ್ಕರಿಸಲು ಜಿಲ್ಲಾ ಬಂಜಾರ ಸೇವಾ ಸಂಘದ ಆಗ್ರಹ
ರಾಜ್ಯದ ವಿವಿಧ ಸಮುದಾಯಗಳಿಗೆ ಸರ್ಕಾರ ಅವೈಜ್ಞಾನಿಕವಾಗಿ ಮೀಸಲಾತಿ ನೀಡಿದ್ದು, ಈ ಮೀಸಲಿಗೆ ಕಾನೂನು ರಕ್ಷಣೆಯೂ ಇಲ್ಲ, ಸಂವಿಧಾನದ ಬಲವೂ ಇಲ್ಲ ಎಂದು ಜಿಲ್ಲಾ ಬಂಜಾರ ಸೇವಾ ಸಂಘದ ಮುಖಂಡ ಹಾಗೂ ವಕೀಲ ಕೆ.ಆರ್. ಮಲ್ಲೇಶ್ ನಾಯ್ಕ್ ಆರೋಪಿಸಿದರು.

ಜೀವ ಜಲದ ಸಂರಕ್ಷಣೆಯತ್ತ ಜನರ ಕಾಳಜಿ ಅಗತ್ಯ
ಸಿಹಿ ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿ ಸಲು ಮತ್ತು ನೀರಿನ ಮಾಲಿನ್ಯ, ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರನ್ನು ಜಾಗೃತಗೊಳಿಸುವುದು ಹಾಗೂ ಪ್ರೇರೇಪಿಸುವುದು ಜಲ ದಿನಾಚರಣೆಯ ಮುಖ್ಯ ಉದ್ಧೇಶ.

ದಾಮ್ಕೋಸ್ ನೂತನ ಕಟ್ಟಡದ ಶಂಕುಸ್ಥಾಪನೆ
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಪಕ್ಕ ತರಕಾರಿ ಮಾರುಕಟ್ಟೆ ಎದುರಿನ ದಾಮ್ಕೋಸ್ ಕಚೇರಿ ಆವರಣದಲ್ಲಿ 25 ವರ್ಷ ಪೂರ್ಣಗೊಳ್ಳುತ್ತಿರುವ ಪ್ರಯುಕ್ತ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಎಸ್.ಎ ರವೀಂದ್ರನಾಥ್ ನೆರವೇರಿಸಿದರು.

ಹರಿಹರ : ಮುಸ್ಲಿಂ ಮೀಸಲಾತಿ ಮತ್ತೆ ನೆಲೆಗೊಳಿಸಲು ಮನವಿ
ಹರಿಹರ : ಮುಸ್ಲಿಂ ಸಮುದಾಯದ 2 ಬಿ ಮೀಸಲಾತಿ ಪುನಃ ಸ್ಥಾಪನೆಗೊಳಿಸುವಂತೆ ಆಗ್ರಹಿಸಿ, ಜೆಡಿಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ತಹಶೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಎಲ್ಎಸ್ಡಿ ಹೋದರೂ ಬಳಲುತ್ತಿರುವ ಜಾನುವಾರುಗಳು
ಚರ್ಮಗಂಟು ರೋಗ (ಎಲ್.ಎಸ್.ಡಿ.) ರೋಗ ಕಳೆದ ವರ್ಷದ ಕೊನೆಯ ತಿಂಗಳುಗಳಲ್ಲಿ ತೀವ್ರವಾಗಿ ಹರಡಿತ್ತು. ಜಿಲ್ಲೆಯಲ್ಲಿ 1,355 ಜಾನುವಾರುಗಳು ರೋಗದಿಂದ ಸತ್ತಿದ್ದವು. ಈಗ ರೋಗ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆಯಾದರೂ, ರೋಗದಿಂದ ಜಾನುವಾರುಗಳು ಬಳಲಿರುವ ಕಾರಣ ಹೈನುಗಾರಿಕೆಗೆ ತೀವ್ರ ಹೊಡೆತ ಬಿದ್ದಿದೆ.

ಮಹಿಳೆಯರಿಗೆ ಸಾಹಿತ್ಯಿಕ ಪ್ರಜ್ಞೆ ಅವಶ್ಯ
ಜೀವನದಲ್ಲಿ ನೀರಿನಷ್ಟೇ ನೀರೆಯರಿಗೆ ಪ್ರಾಮುಖ್ಯತೆ ಇದೆ. ಪ್ರಥಮ ಬಾರಿಗೆ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಂಡ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ. ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿರುವ ಮಹಿಳೆ ಯರು ರಾಜಕೀಯ ಹಾಗೂ ಸಾಹಿತ್ಯಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಅವಶ್ಯವಿದೆ

ವರ್ತಮಾನದಲ್ಲಿಯೂ ಮಹಿಳೆ ದ್ವಿತೀಯ ದರ್ಜೆ ನಾಗರಿಕ ಸ್ಥಾನದಲ್ಲಿದ್ದಾಳೆ
ಪುರುಷ ಪ್ರಧಾನ ಸಮಾಜದ ಪ್ರಭಾವವು ಮಹಿಳೆಯ ರನ್ನು ಭೋಗದ ವಸ್ತುಗಳಂತೆ ಪರಿಗಣಿಸಿರು ವುದರಿಂದ, ಆಧುನಿಕ ದಿನಗಳಲ್ಲಿಯೂ ಮಹಿ ಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ