ಮಂಡಕ್ಕಿ-ಮಿರ್ಚಿ ಸವಿದ ಪ್ರಭಾ, ಸೌಮ್ಯ ರೆಡ್ಡಿ

ಮಂಡಕ್ಕಿ-ಮಿರ್ಚಿ ಸವಿದ ಪ್ರಭಾ, ಸೌಮ್ಯ ರೆಡ್ಡಿ

ಮಲೇಬೆನ್ನೂರು, ಮೇ 2- ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಬುಧವಾರ ಕೊಮಾರನಹಳ್ಳಿಯ ಪ್ರಸಿದ್ದ ಮಧು ಮಂಡಕ್ಕಿ ಹೋಟೆಲ್‌ನಲ್ಲಿ ಮಂಡಕ್ಕಿ-ಮಿರ್ಚಿ ಸವಿದರು.

ಚುನಾವಣಾ ಪ್ರಚಾರಕ್ಕಾಗಿ ಹೊನ್ನಾಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕೊಮಾರನಹಳ್ಳಿಯ ಹೋಟೆಲ್ ಬಳಿ ನಿಂತಿದ್ದ ಜನರನ್ನು ಮಾತನಾಡಿಸಿ, ನಂತರ ಹೋಟೆಲ್‌ ಒಳಗಡೆ ಹೋಗಿ ಬಿಸಿ ಬಿಸಿ ಮಂಡಕ್ಕಿ-ಮಿರ್ಚಿ ತಿನ್ನುತ್ತಾ ಹೋಟೆಲ್ ಮಾಲೀಕ ಮಧು ಅವರೊಂದಿಗೆ ವ್ಯಾಪಾರದ ಬಗ್ಗೆ ಮಾಹಿತಿ ಪಡೆದರು.

ಇದೇ ದಿನ ಸಂಜೆ ಇದೇ ಹೋಟೆಲ್‌ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರೂ ಆಗಮಿಸಿ, ಮಂಡಕ್ಕಿ-ಮಿರ್ಚಿ ಸವಿದು ಖುಷಿ ಪಟ್ಟರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಎಸ್.ಎಂ.ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!