ಜಿಲ್ಲೆಯಲ್ಲಿ 4 ಸಾವು, 134 ಪಾಸಿಟಿವ್

ಜಿಲ್ಲೆಯಲ್ಲಿ 4 ಸಾವು, 134 ಪಾಸಿಟಿವ್ - Janathavaniದಾವಣಗೆರೆ, ಜು. 28 – ಜಿಲ್ಲೆಯಲ್ಲಿ ಮಂಗಳವಾರ 134 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 663ಕ್ಕೆ ಏರಿಕೆಯಾಗಿದೆ.

ಇದೇ ದಿನದಂದು 36 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,667 ಜನರಲ್ಲಿ ಇದುವರೆಗೂ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಒಟ್ಟಾರೆ 963 ಜನರು ಗುಣಮುಖರಾಗಿದ್ದಾರೆ ಹಾಗೂ 41 ಜನರು ಸಾವನ್ನಪ್ಪಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 59, ಹರಿಹರದಲ್ಲಿ 34, ಜಗಳೂರಿನಲ್ಲಿ 8, ಚನ್ನಗಿರಿಯಲ್ಲಿ 12, ಹೊನ್ನಾಳಿಯಲ್ಲಿ 20 ಹಾಗೂ ಹೊರ ಜಿಲ್ಲೆಗಳ ಒಬ್ಬರು ಸೋಂಕಿತರು ಕಂಡು ಬಂದಿದ್ದಾರೆ.

ಇದೇ ದಿನ ದಾವಣಗೆರೆ ತಾಲ್ಲೂಕಿನ 41, ಹರಿಹರದ 11, ಜಗಳೂರು ಹಾಗೂ ಚನ್ನಗಿರಿಯ ತಲಾ ಇಬ್ಬರು, ಹೊನ್ನಾಳಿಯ ನಾಲ್ವರು ಗುಣವಾಗಿ ಬಿಡುಗಡೆಯಾಗಿದ್ದಾರೆ.

ಹರಿಹರ ತಾಲ್ಲೂಕಿನ ನಾಗೇನಹಳ್ಳಿಯ 70 ವರ್ಷದ ವೃದ್ಧರೊಬ್ಬರು ಕೊರೊನಾ ದಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆಯ ಎಂ.ಸಿ.ಸಿ. ಎ ಬ್ಲಾಕ್‌ನ 76ರ ವೃದ್ಧೆ, ಅಹಮದ್ ನಗರದ 59ರ ಮಹಿಳೆ ಹಾಗೂ ಮುದ್ದಾಭೋವಿ ಕಾಲೋನಿಯ 45ರ ಪುರುಷ ಸಾವನ್ನಪ್ಪಿದ್ದಾರೆ. ಮೃತ ಎಲ್ಲರೂ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಾವಣಗೆರೆ ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ರೇಡಿಯೋ ಗ್ರಾಫರ್ ಆಗಿರುವ 54ರ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ವಿಶ್ವವಿದ್ಯಾ ನಿಲಯದ 28ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ 31, 33, 36 ಹಾಗೂ 58ರ ಮಹಿಳೆಯರು, 22, 26, 31, 33, 54, 67 ಹಾಗೂ 36ರ ಪುರುಷರು, 7 ವರ್ಷದ ಬಾಲಕರಲ್ಲಿ ಸೋಂಕು ಕಂಡು ಬಂದಿದೆ.

ಆಂಜನೇಯ ಬಡಾವಣೆಯ 30ರ ಪುರುಷ, 84ರ ವೃದ್ಧ, 58ರ ಮಹಿಳೆ,  ಎಂ.ಸಿ.ಸಿ. ಎ ಬ್ಲಾಕ್‌ನ 30 ಹಾಗೂ 52ರ ಪುರುಷರು, 22ರ ಮಹಿಳೆ,  ಎಂ.ಸಿ.ಸಿ. ಬಿ ಬ್ಲಾಕ್‌ನ 41 ಹಾಗೂ 60ರ ಮಹಿಳೆಯರು, 65 ಹಾಗೂ 66ರ  ಪುರುಷರಲ್ಲಿ ಸೋಂಕುಕಂಡು ಬಂದಿದೆ.

ಬಸಾಪುರದ 47ರ ಪುರುಷ, ಬಾಷಾನಗರದ 24ರ ಪುರುಷ, 54ರ ಮಹಿಳೆ, ದೇವರಾಜ ಅರಸ್ ಬಡಾವಣೆಯ 26 ಹಾಗೂ60ರ ಮಹಿಳೆಯರು, ಒಂದು ವರ್ಷದ ಬಾಲಕಿ, 6 ವರ್ಷದ ಬಾಲಕ, ಬಂಬೂ ಬಜಾರ್‌ನ 26, 30 ಹಾಗೂ 42ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಚಾಮರಾಜಪೇಟೆಯ 26ರ ಪುರುಷ, ಕೋರ್ಟ್ ಕಚೇರಿಯ 54ರ ಪುರುಷ, ಜೆ.ಸಿ. ಬಡಾವಣೆಯ 26ರ ಪುರುಷ, ಕೆ.ಟಿ.ಜೆ.ನಗರದ 22ರ ಹಾಗೂ 52ರ ಮಹಿಳೆಯರು, 13ರ ಬಾಲಕಿ, ಕೆ.ಎಸ್.ಆರ್.ಟಿ.ಸಿ. ಡಿಪೋದ 40ರ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ವಿನೋಬನಗರದ 9 ವರ್ಷದ ಬಾಲಕಿ, 52ರ ಮಹಿಳೆ,  23 ಹಾಗೂ 62ರ ಪುರುಷರು, ಸರಸ್ವತಿ ನಗರದ 59ರ ಪುರುಷ, ಕೆ.ಬಿ. ಬಡಾವಣೆಯ 84ರ ವೃದ್ಧೆ,  ಟೀಚರ್ಸ್‌ ಲೇಔಟ್‌ನ 52ರ ಪುರುಷ, ಜಾಲಿನಗರದ 37ರ ಪುರುಷ, ವಿವೇಕಾನಂದ ಬಡಾವಣೆಯ 57ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ನಿಟುವಳ್ಳಿಯ 73ರ ವೃದ್ಧೆ,  14ರ ಬಾಲಕ, ತರಳಬಾಳು ಬಡಾವಣೆಯ 75ರ ವೃದ್ಧ, 39ರಮಹಿಳೆ, ಟಿ.ಪಿ. ಕ್ವಾರ್ಟರ್ಸ್‌ 32ರ ಪುರುಷ ಹಾಗೂ 50ರ ಮಹಿಳೆ, ಶ್ರೀನಿವಾಸ ನಗರದ 6 ವರ್ಷದ ಬಾಲಕ, ಮಹಾರಾಜಪೇಟೆಯ 51ರ ಮಹಿಳೆ ಹಾಗೂ ಎಲ್ಲಮ್ಮನಗರದ 49ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕು ಕಂದಗಲ್‌ನ 46ರ ಪುರುಷ ಹಾಗೂ 50ರ ಮಹಿಳೆ, ಚಿನ್ನ ಸಮುದ್ರದ 24ರ ಪುರುಷ, ಸಿದ್ದಮ್ಮನ ಹಳ್ಳಿಯ 18ರ ಪುರುಷ, ಹಳೇಬಾತಿಯ 35ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ. ಹರಿಹರದ ಕಾಳಿದಾಸನಗರದ 68ರ ಮಹಿಳೆ, ಹೆಚ್.ಎಸ್. ಬಡಾವಣೆಯ 26ರ ಮಹಿಳೆ, ಸರ್ಕಾರಿ ಆಸ್ಪತ್ರೆಯ 35ರ ಮಹಿಳೆ, ಇಂದ್ರಾನಗರದ 37ರ ಪುರುಷ, ಹೊಸಪೇಟೆಯ ಬೀದಿಯ 29ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಜೆ.ಸಿ. ಬಡಾವಣೆಯ 45ರ ಪುರುಷ ಹಾಗೂ 23ರ ಮಹಿಳೆ, ಮಹಾಲಕ್ಷ್ಮಿ ಬಡಾವಣೆಯ 31ರ ಪುರುಷ, ರಾಜಾರಾಮ ನಗರದ 49ರ ಪುರುಷ, ಕೆ.ಹೆಚ್.ಬಿ. ಬಡಾವಣೆಯ 45ರ ಪುರುಷ, ಕಾಳಿದಾಸ ಬಡಾವಣೆಯ 56ರ ಪುರುಷ, ಟಿಪ್ಪು ಬಡಾವಣೆಯ 45ರ ಪುರುಷ, ಬೆಂಕಿನಗರದ 80ರ ವೃದ್ಧೆಯರಲ್ಲಿ ಸೋಂಕು ಕಂಡು ಬಂದಿದೆ.

ಹರಿಹರ ತಾಲ್ಲೂಕಿನ ಬರ್ಮಾಪುರದ 32 ಹಾಗೂ 63ರ ಮಹಿಳೆಯರು, ಯಲವಟ್ಟಿಯ 28ರ ಪುರುಷ,  ಹರ್ಲಾಪುರದ 42ರ ಪುರುಷ,  ಮಲೇಬೆನ್ನೂರಿನ 45ರ ಪುರುಷ, 28ರ ಮಹಿಳೆ, ಅಮರಾವತಿಯ 64ರ ಪುರುಷ, ರಾಜನಹಳ್ಳಿಯ 13ರ ಬಾಲಕ, ಹನಗವಾಡಿಯ 37, 42, 48ರ ಪುರುಷರು ಹಾಗೂ 75ರ ವೃದ್ಧ ಮತ್ತು 30 ಹಾಗೂ 53ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.

ಹೊನ್ನಾಳಿ ಪೊಲೀಸ್ ಕ್ವಾರ್ಟರ್ಸ್‌ನ 10 ವರ್ಷದ ಬಾಲಕಿ, 39ರ ಪುರುಷ ಹಾಗೂ ಹೊನ್ನಾಳಿ ತಾಲ್ಲೂಕು ಹಿರೇಬಸೂರಿನ 25 ಹಾಗೂ 53ರ ಮಹಿಳೆಯರು ಮತ್ತು ಇದೇ ಗ್ರಾಮದ 7 ಮತ್ತು 13ರ ಬಾಲಕಿಯರು,  ಆರು ವರ್ಷದ ಬಾಲಕ, ಹುಣಸಘಟ್ಟದ 11ರ ಬಾಲಕಿ, ಕುಂದೂರಿನ 20ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.

ನ್ಯಾಮತಿಯ 48ರ ಪುರುಷ ಹಾಗೂ 19ರ ಮಹಿಳೆ, 22 ಹಾಗೂ 56ರ ಪುರುಷರು, 17ರ ಬಾಲಕರಲ್ಲಿ ಸೋಂಕು ಕಂಡು ಬಂದಿದೆ.

ಜಗಳೂರಿನ ಎಂ.ಎಂ. ರಸ್ತೆಯ 27ರ ಮಹಿಳೆ ಹಾಗೂ  ಜಗಳೂರು ತಾಲ್ಲೂಕಿನ ಕಲ್ಲೇದೇವರಪುರದ 36ರ ಮಹಿಳೆ, ಯರ್ಲಕಟ್ಟೆಯ 30ರ ಪುರುಷ, ಹಳ್ಳಿ ಮಲ್ಲಾಪುರದ 28ರ ಮಹಿಳೆ, ತೋರಣಗಟ್ಟೆಯ 25ರ ಮಹಿಳೆ, ಹೊರಕೆರೆಯ 24ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.

ಚನ್ನಗಿರಿ ತಾಲ್ಲೂಕು ಕಚೇರಿಯ 68ರ ಪುರುಷ, ಕರೆಕಟ್ಟೆಯ 26, 30 ಹಾಗೂ 48ರ ಮಹಿಳೆ ಹಾಗೂ 35, 50 ಮತ್ತು 40ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಚನ್ನಗಿರಿ ತಾಲ್ಲೂಕಿನ ನಲ್ಲೂರಿನ 65ರ ಪುರುಷ ಹಾಗೂ 55ರ ಮಹಿಳೆ, ಬುಸ್ಸೇನಹಳ್ಳಿಯ 26ರ ಪುರುಷ, ಕೆರೆಬಿಳಚಿ 45ರ ಪುರುಷರಲ್ಲಿ ಸೋಂಕಿರುವುದು ಕಂಡು ಬಂದಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆಯ 27ರ ಮಹಿಳೆಯಲ್ಲಿ ಸೋಂಕಿರುವುದು ಕಂಡು ಬಂದಿದೆ.

ಬಿಡುಗಡಯಾದವರು:  ದೇವರಾಜ ಅರಸು ಬಡಾವಣೆಯ ೬೧ ವರ್ಷದ ಪುರುಷ, ಆಲೂರಿನ ೨೪ ವರ್ಷದ ಯುವಕ, ಕೆ.ಆರ್. ರಸ್ತೆಯ ೪೫ ಹಾಗೂ ೪೮ ವರ್ಷದ ಪುರುಷಕರು, ಪಿ.ಜೆ. ಬಡಾವಣೆ ೯ನೇ ಕ್ರಾಸ್, ೮ನೇ ಮೇನ್ ೫೫ ವರ್ಷದ ಮಹಿಳೆ, ದೇವರಾಜ ಅರಸು ಬಡಾವಣೆ ಸಿ ಬ್ಲಾಕ್‌ ೧ನೇ ಕ್ರಾಸ್‌ನ ೫೭ ವರ್ಷದ ಪುರು,  ನಿಟುವಳ್ಳಿ ಹೊಸ ಬಡಾವಣೆಯ ೧ನೇ ಮೇನ್, ೪ನೇ ಕ್ರಾಸ್‌ನ ೩೦ ವರ್ಷದ ಮಹಿಳೆ, ಸಿದ್ದವೀರಪ್ಪ ಬಡಾವಣೆಯ ೪೬ ವರ್ಷದ ಪುರುಖ, ವಿನೋಬನಗರದ ೫೩ ವರ್ಷದ ಪುರುಷ, 

ಯರಗುಂಟೆ ಗಣೇಶನ ದೇವಸ್ಥಾನ ಬಳಿಯ ೪೩ ವರ್ಷದ ಯುವಕ, ನಿಜಲಿಂಗಪ್ಪ ಬಡಾವಣೆ ೨ನೇ ಮೇನ್, ೨ನೇ ಕ್ರಾಸ್‌ನ ೩೪ ವರ್ಷದ ಪುರುಖ, ರಜಾವುಲ್ಲಾ ಮುಸ್ತಾಫಾ ನಗರದ ೮೫ ವರ್ಷದ ವೃದ್ಧೆ, ಡಿಸಿಎಂ ಟೌನ್‌ಶಿಪ್ ಮುಖ್ಯ ರಸ್ತೆಯ ೭೨ರ ವೃದ್ಧ, ವಿಜಯನಗರ ಬಡಾವಣೆ ಎಸ್‌ಬಿಐ ಎಟಿಎಂ  ಬಳಿಯ ೩೮ರ ಪುರುಷ,  68ರ ಪುರುಷ, ೧೧ನೇ ಕ್ರಾಸ್‌ ಸಿದ್ದೇಶ್ವರ ಬಡಾವಣೆಯ ೩೫ರ ಪುರುಷ, ದಾವಣಗೆರೆ ಕೆಟಿಜೆ ನಗರದ ೪೨ರ ಪುರುಷ, ಕೆ.ಬಿ. ಬಡಾವಣೆಯ ದೀಕ್ಷಿತ್ ರಸ್ತೆಯ ೨ನೇ ಕ್ರಾಸ್‌ನ ೫೦ರ ಪುರುಷ, ನಿಜಲಿಂಗಪ್ಪ  ಬಡಾವಣೆಯ ೫ನೇ ಕ್ರಾಸ್‌ನ ೨೬ರ ಯುವಕ, ಆನೆಕೊಂಡದ ದುಗ್ಗಮ್ಮನ ಪೇಟೆ ಹಿಂಭಾಗದ ೧೦ರ ಯುವಕ, ದೇವರಾಜ ಅರಸು ಬಡಾವಣೆಯ ೪೯ರ ಪುರುಷ, 

ಬಸವನಾಳ ಗೊಲ್ಲರಹಟ್ಟಿ ೪೦ರ ಮಹಿಳೆ, ೪೫ರ ಪುರುಷ, ೬೧ರ ಪುರುಷ, ಜಗಳೂರು ಗೊಲ್ಲರಹಟ್ಟಿಯ ವಾಟರ್ ಫಿಲ್ಟರ್ ಬಳಿಯ ೩೦ರ ಪುರುಷ,  ಹೊನ್ನಾಳಿಯ ೪೦ರ ಮಹಿಳೆ, ಹೊನ್ನಾಳಿಯ ಎನ್.ಜಿ. ಹಳ್ಳಿಯ ೩೩ರ ಮಹಿಳೆ, ನ್ಯಾಮತಿ ಹೊಸಮಳಲಿಯ ೩೦ರ ಪುರುಷ,ಹೊನ್ನಾಳಿ ಟಿಎಂ ರಸ್ತೆಯ ೨೦ ಹಾಗೂ ೨೨ರ ಯುವಕ, ಚನ್ನಗಿರಿ ನಲ್ಲೂರಿನ ೨೧ರ ಯುವಕ,  19 ಯುವಕ ಇವರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.

error: Content is protected !!