ಹಿರಿಯರನ್ನು ಗಣನೆಗೆ ತೆಗೆದುಕೊಳ್ಳದ ಸಿದ್ದೇಶ್ವರ : ಪ್ರತಾಪ್

ದಾವಣಗೆರೆ, ಮೇ 1- ಜಿಲ್ಲೆಯಲ್ಲಿ ಬಿಜೆಪಿ ಒಬ್ಬ ವ್ಯಕ್ತಿಯ ಹಿಡಿತದಲ್ಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಂಡಿಲ್ಲ ಎಂದು ಮಟ್ಟಿಕಲ್ ಆರ್. ಪ್ರತಾಪ್ ಆರೋಪಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಕಟ್ಟಿ ಬೆಳೆಸಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಸಿದ್ದೇಶ್ವರ 20 ವರ್ಷ ಅಧಿಕಾರ ಅನುಭವಿಸಿದ್ದು ಬಿಟ್ಟರೆ ಅವರ ಸಾಧನೆ ಏನೂ ಇಲ್ಲ ಎಂದರು.

ನನ್ನಂತ ಹಿರಿಯರನ್ನೂ ಸಿದ್ದೇಶ್ವರ ಅವರು ಗಣನೆಗೆ ತೆಗದುಕೊಳ್ಳದೆ ಹೀನಾಯವಾಗಿ ನೋಡಿಕೊಳ್ಳುತ್ತಾರೆ. ಅವರ ನಡೆಯಿಂದ ಬೇಸತ್ತು, ಅವರಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ಏನೂ ಕೊಡುಗೆ ಇಲ್ಲ ಎಂದರಿತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಬೇಕಾಯಿತು. ನನ್ನಂತೆಯೇ ನೂರಾರು ಕಾರ್ಯಕರ್ತರು ಬಿಜೆಪಿಯಲ್ಲಿ ನೋವು ಅನುಭವಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾವಂತೆ, ಬಹು ಭಾಷಾ ಜ್ಞಾನವಿದೆ.  ಸಂಸತ್‌ನಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ತಿಳಿಸಿ ಅನುದಾನ ತರಬಲ್ಲವರಾಗಿದ್ದಾರೆ. ಶಾಮನೂರು ಕುಟುಂಬ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲವು ಖಚಿತ ಎಂದು ಹೇಳಿದರು.

ಬಿಜೆಿಯ ಮುಖಂಡ ರವಿಕುಮಾರ್ ಅವರು, ಸಚಿವ ಮಲ್ಲಿಕಾರ್ಜುನ್ ಅಭಿವೃದ್ಧಿ ಕುರಿತ ಚರ್ಚೆಗೆ ಬರಲಿ ಎಂದು ಸವಾಲಾಕಿದ್ದಾರೆ. ಅದಕ್ಕೆ ಉತ್ತರಿಸಲು ಸಚಿವರೇ ಬರಬೇಕೆಂದಿಲ್ಲ. ನಾನೂ ಸಿದ್ಧನಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಎಲ್. ಆನಂದಪ್ಪ, ಮಟ್ಟಿಕಲ್ ವೀರಭದ್ರ ಸ್ವಾಮಿ, ಅಣಜಿ ಬಸವರಾಜ್, ಶಶಿಖೇರ್, ಮಟ್ಟಿಕಲ್ ಅಜ್ಜಪ್ಪ, ಮಟ್ಟಿಕಲ್ ಪ್ರಕಾಶ್, ಅಕ್ಕಿ ರಾಮಚಂದ್ರಪ್ಪ, ರಾಜೇಶ್ ಈಡೀಗರ್, ವಿಜಯಕುಮಾರ್, ರಾಘವೇಂದ್ರ ಕೊಡಗನೂರು, ಪರಮೇಶ್ವರಪ್ಪ, ಮಹಾಂತೇಶ್, ಎ.ಗುಡ್ಡಪ್ಪ ಇತರರಿದ್ದರು.

error: Content is protected !!