ಮೇಷ ರಾಶಿ :
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ವ್ಯಾಪಾರ ವ್ಯವಹಾರ ವಿಸ್ತರಣೆಗೆ ಇದು ಸೂಕ್ತ ಸಮಯವಾದರೂ, ಮುನ್ನೆಚ್ಚರಿಕೆಯೊಂದಿಗೆ ಹೆಜ್ಜೆ ಇಡುವುದು ಉತ್ತಮ. ವಿದ್ಯಾರ್ಥಿಗಳ ಮೇಧಾಶಕ್ತಿ ಹೆಚ್ಚಿ, ಉತ್ತಮ ಶ್ರೇಯೋಭಿಲಾಷೆ ಈಡೇರಲಿದೆ. ಮಕ್ಕಳ ಆಟಿಕೆ ಹಾಗೂ ಕ್ರೀಡಾ ಸಾಮಗ್ರಿಗಳ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ವಹಿವಾಟು ಹೆಚ್ಚಲಿದೆ.ಅನಾವಶ್ಯಕ ಪ್ರಯಾಣ ಅಥವಾ ಓಡಾಟಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಹೊಸ ಯೋಜನೆಗಳನ್ನು ಜಾರಿಗೆ ತರುವ ಮೊದಲು ಅವುಗಳಿಂದಾಗಬಹುದಾದ ಸಾಧಕ – ಬಾಧಕಗಳ ಅರಿವಿರುವುದು ಮೇಲು. ಹಣಕಾಸಿನ ಹರಿವು ಹೆಚ್ಚಲಿದೆ.ಗೋ ಸೇವೆ ಮಾಡಿರಿ. ಭಾನು-ಸೋಮ-ಮಂಗಳ-ಶುಭದಿನಗಳು.
ವೃಷಭ ರಾಶಿ :
(ಇ.ಉ.ಎ.ಒ.ವ.ವಿ.ವು.ವೆ.ವೋ)
ನೀವು ಮಾಡಲಿರುವ ಸಾಮಾಜಿಕ ಸೇವೆಯನ್ನು ಮೆಚ್ಚಿ ಸರ್ಕಾರದಿಂದ ಗೌರವ ಸಲ್ಲಲಿದೆ. ಆದಾಯವು ಮಧಗತಿಯಲ್ಲಿದ್ದರೂ ದೈನಿಕ ನಿರ್ವಹಣೆ ಗೇನೂ ತೊಂದರೆಯಿಲ್ಲ.ಯುವಜನರ ನಡವಳಿಕೆಯಲ್ಲಿ ಸಾಕಷ್ಟು ಸುಧಾರಣೆಯಿಂದ ಮನೆಯ ಹಿರಿಯರಿಗೆ ಸಂತಸವಾಗಲಿದೆ. ಮಹಿಳೆಯರು ಶುಚಿತ್ವವನ್ನು ಕಾಪಾಡಿ ಕೊಳ್ಳದೇ ಹೋದಲ್ಲಿ ಅನೇಕ ರೋಗಗಳನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಅವರದೇ ಆದ ಉದಾಸೀನತೆಯಿಂದಾಗಿ ನಿರೀಕ್ಷಿತ ಫಲಿತಾಂಶ ಬರದೇ ಹೋಗಬಹುದು. ರಾಜಕಾರಣಿಗಳಿಗೆ ಉತ್ತಮದಿನಗಳು. ಗುರು-ಶುಕ್ರ-ಶನಿ-ಶುಭದಿನಗಳು.
ಮಿಥುನ ರಾಶಿ :
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ನೀವು ಯಾರನ್ನು ತುಂಬಾ ನಂಬಿದ್ದಿರೋ ಅವರಿಂದಲೇ ಮೋಸ ಹೋಗುವ ಸಂಭವವಿದೆ, ಆದ್ದರಿಂದ ಈ ವಿಚಾರದಲ್ಲಿ ಸಾಕಷ್ಟು ಎಚ್ಚರದಿಂದಿರುವುದು ಮೇಲು, ಮಹಿಳಾ ಉದ್ಯಮಿಗಳಿಗೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಲಿವೆ, ಅದನ್ನು ಧೈರ್ಯದಿಂದ ಎದುರಿಸಬೇಕಷ್ಟೆ. ಅತಿಯಾದ ಭೋಜನ ಕೂಟಗಳಿಂದಾಗಿ ಅಜೀರ್ಣಾದಿ ಆರೋಗ್ಯ ಸಮಸ್ಯೆಗಳು ಕಾಡಲಿದೆ. ಸಿದ್ಧ ಆರೋತ್ಪಾದಕರಿಗೆ ವಹಿವಾಟು ಹೆಚ್ಚಿ ಅಧಿಕ ಲಾಭವಾಗಲಿದೆ. ನಿಮ್ಮ ಕಾರ್ಯ ವೈಖರಿ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಲಿದೆ. ಗುರುಗಳನ್ನು ಆರಾಧಿಸಿ. ಗೋ ಸೇವೆಮಾಡಿ. ಭಾನು-ಬುಧ-ಶುಕ್ರ-ಶುಭದಿನಗಳು.
ಕರ್ಕಾಟಕ ರಾಶಿ :
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಮಾಡಬೇಕಾಗಿರುವ ಕೆಲಸ ಕಾರ್ಯಗಳಲ್ಲಿ ಖಚಿತತೆಯಿರಲಿ, ದ್ವಂದ್ವಗಳಿಂದಾಗಿ ನಷ್ಟವುಂಟಾಗಬಹುದು, ಆದಾಯದ ಮೂಲದಲ್ಲಿ ಕಡಿತವಿರುವುದರಿಂದ ಹೆಚ್ಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೋಗಬೇಡಿ. ಕ್ರೀಡಾಪಟುಗಳಿಗೆ ಉತ್ತಮ ತರಬೇತುದಾರರು ದೊರೆಯಲಿದ್ದು, ಉತ್ತಮ ಅವಕಾಶಗಳು ಹುಡುಕಿ ಕೊಂಡು ಬರಲಿವೆ.ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.ಅವಿವಾಹಿತರಿಗೆ ಕಂಕಣಭಾಗ್ಯ ದೊರೆಯಲಿದ್ದು, ಕೂಡಲೇ ಕಾರ್ಯಪ್ರವೃತ್ತರಾಗುವುದು ಮೇಲು. ಅನ್ನದಾನ ಮಾಡಿ. ಸೋಮ-ಬುಧ-ಗುರು-ಶುಭದಿನಗಳು.
ಸಿಂಹ ರಾಶಿ :
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಕೌಟುಂಬಿಕ ವಿಚಾರದಲ್ಲಿ ತೆಗೆದುಕೊಳ್ಳಲಿರುವ ನಿರ್ಧಾರಗಳು ಉತ್ತಮವಾಗಿರಲಿದೆ. ಇದಕ್ಕೆ ಪಶ್ಚಾತ್ತಾಪ ಪಡಬೇಕಾಗಿಲ್ಲ. ಮಗಳ ಮದುವೆಗೆ ಸಿದ್ಧತೆ ಭರದಿಂದ ನಡೆಯಲಿದೆ.ಮಾಡಿರುವ ಸಾಲವನ್ನು ತೀರಿಸಲು ಉತ್ತಮ ಅವಕಾಶವೊಂದು ಬರಲಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಿ. ಆಸ್ತಿ ವ್ಯವಹಾರದಲ್ಲಿ ನಿಮ್ಮ ಉದಾಸೀನತೆಯಿಂದಾಗಿ ನಷ್ಟವನ್ನು ಅನುಭವಿಸಬೇಕಾದೀತು, ಸೋದರನ ಹಣಕಾಸಿನ ವ್ಯಹಾರವನ್ನು ನಿಮ್ಮಿಂದ ಮಾತ್ರ ಬಗೆಹರಿಸಲು ಸಾಧ್ಯ. ಹಿರಿಯರಿಗೆ ಎದುರಾಡಬೇಡಿ. ಭಾನು-ಮಂಗಳ-ಬುಧ-ಶುಭದಿನಗಳು.
ಕನ್ಯಾ ರಾಶಿ :
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ನೀವು ಎಷ್ಟೇ ಹೋರಾಟ-ಹಾರಾಟ ನಡೆಸಿದರೂ ಏಳಿಗೆ ಮಾತ್ರ ಸಾಧಾರಣವಾಗಿರಲಿದೆ. ಕೆಲವು ವಿಚಾರಗಳಲ್ಲಿ ಬಂಧುಗಳ ನೆರವನ್ನು ಪಡೆಯುವುದು ಮೇಲು, ಹಿಮ್ಮುಖ ಪಡೆದಿರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಇನ್ನು ಮುಂದೆ ಪ್ರಗತಿ ಕಾಣಲಿದೆ. ರಾಜಕಾರಣವನ್ನು ಪ್ರವೇಶಿಸಲು ಇಚ್ಛಿಸುವವರಿಗೆ ಇದು ಸಕಾಲವಾಗಿದ್ದು, ಎಚ್ಚರದ ಹೆಜ್ಜೆಗಳಿಡುವುದು ಮೇಲು. ನಿರೀಕ್ಷಿತ ಮೂಲಗಳಿಂದ ಬರಬೇಕಾಗಿರುವ ನೆರವು ಸಕಾಲದಲ್ಲಿ ಬರದೆ ಹೋಗಬಹುದು. ಮಡದಿ ಮಕ್ಕಳು ನಿಮ್ಮ ವಿರುದ್ಧವಾಗುವ ಸಂಭವವಿದೆ. ವಿಷ್ಣು ಸಹಸ್ರ ನಾಮಪಠಿಸಿ. ಭಾನು-ಬುಧ-ಗುರು-ಶುಭದಿಅನಗಳು.
ತುಲಾ ರಾಶಿ :
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಮನೆಯ ಮಕ್ಕಳು ಮಾಡಿರುವ ಯಡವಟ್ಟಿನಿಂದಾಗಿ ಸಾಮಾಜಿಕ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಕುಸಿಯುತ್ತಿರುವ ಆದಾಯವನ್ನು ಸರಿಪಡಿಸಿಕೊಳ್ಳಲು ಹರಸಾಹಸ ಪಡಬೇಕಾಗಬಹುದು. ಸರ್ಕಾರಿ ನೌಕರರು ತಮ್ಮ ಸಹೋದ್ಯೋಗಿಗಳೊಂದಿಗೆ ಎಷ್ಟೇ ಹೊಂದಿಕೊಳ್ಳಲು ಪ್ರಯತ್ನಿಸಿದರೂ ಅವರಿಂದ ಅಸಹಕಾರ ಕಂಡುಬರಲಿದೆ. ರಾಜಕಾರಣವನ್ನು ಪ್ರವೇಶಿಸಲು ಬಯಸುವವರಿಗೆ ಮನೆಯ ಹಿರಿಯರಿಂದಲೇ ಪ್ರತಿರೋಧ ಕಂಡುಬರಲಿದೆ. ಮಹಿಳಾ ಉದ್ಯೋಗಿಗಳ ವೇತನದಲ್ಲಿ ಸಾಕಷ್ಟು ಹೆಚ್ಚಳ ಕಂಡು ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಗುರು-ಶುಕ್ರ-ಶನಿ-ಶುಭದಿನಗಳು.
ವೃಶ್ಚಿಕ ರಾಶಿ :
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತೊಬ್ಬರನ್ನು ದೂಷಿಸುವಿರಿ, ಇದರಿಂದಲೇ ನಿಮ್ಮ ಬಣ್ಣ ಬಯಲಾಗಲಿದೆ. ಆದಾಯವು ಮಧ್ಯಗತಿಯಲ್ಲಿದ್ದರೂ ಚಿಂತೆ ಬೇಡ.ಹದಗೆಡುತ್ತಿರುವ ಆರೋಗ್ಯವನ್ನು ಸರಿದಾರಿಗೆ ತರಲು ಹರಸಾಹಸ ಪಡಬೇಕಾಗಬಹುದು.ವಿಷಯಗಳ ಅರಿವಿಲ್ಲದೇ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಒಳಗಾಗಬೇಕಾದೀತು.ಹಳೇ ಖಾಯಿಲೆಗಳು ನಿಮ್ಮನ್ನು ತೀವ್ರವಾಗಿ ಬಾಧಿಸಬಹುದು ಅಥವಾ ಹತೋಟಿ ಮೀರಬಹುದು. ಸಾಧ್ಯವಾದಷ್ಟು ವೈದ್ಯಕೀಯ ನಿಗಾದಲ್ಲಿರುವುದು ಮೇಲು.ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರಿಗೆ ಆಸಕ್ತಿ ಮೂಡಲಿದೆ. ಸೋಮ-ಮಂಗಳ-ಗುರು-ಶುಕ್ರ-ಶುಭದಿನಗಳು.
ಧನು ರಾಶಿ :
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಹಲವು ಮೂಲಗಳನ್ನು ಕಂಡುಕೊಳ್ಳಲು ಯತ್ನಿಸುವಿರಿ ಮತ್ತು ಈ ನಿಟ್ಟಿನಲ್ಲಿ ಸಫಲರಾಗುವಿರಿ. ಮತ್ತೊಬ್ಬರ ವೈಯುಕ್ತಿಕ ವಿಚಾರದಲ್ಲಿ ಪರ್ವೇಶ ಮಾಡುವುದರಿಂದ ಅವಮಾನಕ್ಕೆ ಗುರಿಯಾಗ ಬೇಕಾದೀತು ರಿಯಲ್ ಎಸ್ಟೇಟ್ ವ್ಯವಹಾರದಿಂದ ತಕ್ಕಮಟ್ಟಿನ ಲಾಭವನ್ನು ಕಾಣುವಿರಿ. ಹಿರಿಯರ ನಡಾವಳಿಯಲ್ಲಿ ಕಂಡು ಬರಲಿರುವ ವ್ಯತ್ಯಾಸದಿಂದ ಮನಸ್ಸಿಗೆ ಬೇಸರವಾಗಲಿದೆ. ಚಿಕ್ಕ ಮಕ್ಕಳಿಗೆ ಉದರ ಸಂಬಂಧಿ ಸಮಸ್ಯೆಗಳು ಎದುರಾಗಲಿದೆ, ಗುರುಗಳ ಆರಾಧನೆಮಾಡಿರಿ. ಬುಧ-ಗುರು-ಶುಕ್ರ-ಶುಭದಿನಗಳು.
ಮಕರ ರಾಶಿ :
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವು ರೀತಿಯ ಮಾರ್ಗವನ್ನು ಅನುಸರಿಸಿದರೂ ಯಶಸ್ಸು ಮಾತ್ರ ಸಾಧರಣವಾಗಿರಲಿದೆ. ಹಾಗೆಂದ ಮಾತ್ರಕ್ಕೆ ನಿರಾಸೆ ಬೇಡ ಮಿತ್ರವರ್ಗದಿಂದ ದೊರೆಯಲಿರುವ ನೆರವನ್ನು ಸದುಪಯೋಗ ಪಡಿಸಿಕೊಳ್ಳಿ. ಬಂಧುಗಳೊಬ್ಬರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥರಾಗಲು ಹೋಗಿ ತೊಂದರೆಗೆ ಸಿಲುಕುವಿರಿ, ವ್ಯಾಪಾರ ವ್ಯವಹರಗಳಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ಬೇಡ. ಮಗಳ ವಿದ್ಯಾಭ್ಯಾಸದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಸಿಗಲಿದೆ. ಸರಕಾರೀ ಕೆಲಸಗಳಲ್ಲಿ ಲಾಭವಾಗಲಿದೆ. ಗೋ ಗ್ರಾಸಕೊಡಿ. ಸೋಮ-ಮಂಗಳ-ಶನಿ-ಶುಭದಿನಗಳು.
ಕುಂಭ ರಾಶಿ :
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ಮನೆತನದ ಹಿರಿಯರು ಈ ಹಿಂದೆ ಮಾಡಿರುವ ಸಮಾಜ ಸೇವೆಯನ್ನು ಗುರುತಿಸಿ ಸಾರ್ವಜನಿಕ ಸನ್ಮಾನವಾಗಲಿದೆ. ನಂಬಿದವರೇ ನಿಮ್ಮ ಯಶಸ್ಸಿನ ಓಟಕ್ಕೆ ಅಡ್ಡಗಾಲು ಹಾಕುವರು, ಅಂತವರ ವಿಚಾರದಲ್ಲಿ ಎಚ್ಚರದಿಂದಿರುವುದು ಮೇಲು. ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಲಿವೆ, ಭೂಮಿ ವ್ಯವಹಾರದಿಂದ ಹೆಚ್ಚಿನ ಲಾಭ ನಿರೀಕ್ಷೆಸಬಹುದು. ಮಧ್ಯಗತಿಯ ಆದಾಯ ದೈನಂದಿನ ನಿರ್ವಹಣೆಗೆ ಮಾತ್ರ ಸಾಕಾದೀತು. ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯಗಳಿಗೆ ಭರಸಿದ್ಧತೆ ನಡೆಯಲಿದೆ. ಭಾನು-ಗುರು-ಶನಿ-ಶುಭದಿನಗಳು.
ಮೀನಾ ರಾಶಿ :
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ಬದುಕಿನಲ್ಲಿ ಸ್ವಾಭಿಮಾನದಿಂದಿರುವುದು ಒಳ್ಳೇಯದೇ, ಆದರೂ ಅದು ಅತಿಯಾದಲ್ಲಿ ದುರಭಿಮಾನವಾಗಲಿದೆ. ನಿಮ್ಮ ಕೆಲಸ ಕಾರ್ಯಗಳ ಸಿದ್ಧಿಗೋಸ್ಕರ ಮನೆಯ ಹಿರಿಯರನ್ನು ಓಲೈಸದಲೇ ವಿಧಿಯಿಲ್ಲ, ಆಸ್ತಿ ವಿಭಾಗದವಿ ಚಾರವನ್ನು ಕೆಲಕಾಲ ಮುಂದೂಡುವುದು ಉತ್ತಮ, ವಿದ್ಯಾವಂತಳಾದ ಮಗಳ ಉನ್ನತಾಧ್ಯಯನಕ್ಕೆ ಸಾಮಾಜಿಕ ನೆರವು ದೊರೆಯಲಿದೆ, ವಿದೇಶದಲ್ಲಿ ಬಂಡವಾಳ ಹೂಡುವ ಮೊದಲು ಅಲ್ಲಿಯ ಸ್ಥಿತಿಗತಿಯ ಅರಿವಿರುವುದು ಮೇಲು.ಮಧ್ಯಗತಿಯ ಆದಾಯ ಮಡದಿ ಮಕ್ಕಳ ಕೋರಿಕೆ ಪೂರೈಸಲು ಸಾಕಾಗದೇ ಹೋಗಬಹುದು.ಸೋಮ-ಗುರು-ಶನಿ-ಶುಭದಿನಗಳು.
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678