ವಿಠಲಾಪುರ : ಅನಾಮಧೇಯ ಮಹಿಳೆಯ ಶವ ಪತ್ತೆ

ಮಾಯಕೊಂಡ, ಮೇ 1 – ವಿಠಲಾಪುರ ಗ್ರಾಮದ ಭದ್ರಾ ಚಾನಲ್‌ ಬಳಿಯ ಮರದ ಕೊಂಬೆಯಲ್ಲಿ  ಸುಮಾರು 55-60 ವರ್ಷದ ಹೆಂಗಸಿನ ಅನಾಮಧೇಯ ಶವ ಪತ್ತೆಯಾಗಿದೆ.  ಮೃತ ಮಹಿಳೆ ಮೈಮೇಲೆ ಬಣ್ಣದ ಆಕಾಶ ನೀಲಿ ಬಣ್ಣದ ಲಂಗ, ಹಸಿರು ಜಾಕೀಟ್‌ ಧರಿಸಿದ್ದು, ಮೃತೆಯ ಕಣ್ಣು, ಕಿವಿ, ತುಟಿಯನ್ನು ಜಲಚರಗಳು ತಿಂದಿರುವ ಗುರುತು ಇದೆ. ಸಂಬಂಧಪಟ್ಟವರು ಮಾಯಕೊಂಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

error: Content is protected !!