Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಕಳಪೆ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕಬೇಡಿ

ಪ್ರಸಕ್ತ ಮುಂಗಾರು ಹಂಗಾಮು ಚುರುಕಾಗಿದ್ದು,  ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯ.  ಹಾಗಾಗಿ ರೈತರು ಬಿತ್ತನೆ ಬೀಜ ಖರೀದಿ ಮಾಡುವಾಗ ಎಚ್ಚರ ವಹಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ. 

ಕೊಟ್ಟೂರಿನಲ್ಲಿ ಇಂದು ಬಿಕ್ಕಿ ಮರಡಿ ದುರುಗಮ್ಮ ದೇವಿ ಜಾತ್ರೆ ಸಂಭ್ರಮ

ಧಾರ್ಮಿಕ ಮಹೋತ್ಸವಗಳಲ್ಲೊಂದಾದ ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೊಂಡಿರುವ ಸುಕ್ಷೇತ್ರ ಕೊಟ್ಟೂರು ಹುಣ್ಣಿಮೆಯ ದಿನವಾದ ಇಂದು ಮತ್ತೊಮ್ಮೆ ವೈಶಿಷ್ಟ್ಯತೆಗೆ ಸಾಕ್ಷಿಯಾಗಲಿದೆ. 

ನಗರದಲ್ಲಿಂದು ಸಿದ್ಧ ಕಣ್ಣಿನ ಹನಿ

ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ  ಇಂದು ಬೆಳಿಗ್ಗೆ 10 ರಿಂದ 12 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ. 

ಜಿಲ್ಲೆಯ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.95.92 ಫಲಿತಾಂಶ

ಜಿಲ್ಲೆಯ  ಒಟ್ಟು 22 ವಸತಿ ಶಾಲೆಗಳಲ್ಲಿ ಸುಮಾರು 1004 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿ 963 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಶೇ.95.92ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಜಿಲ್ಲೆಯ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.95.92 ಫಲಿತಾಂಶ

ಜಿಲ್ಲೆಯ  ಒಟ್ಟು 22 ವಸತಿ ಶಾಲೆಗಳಲ್ಲಿ ಸುಮಾರು 1004 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿ 963 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಶೇ.95.92ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಬುದ್ಧ ಪೂರ್ಣಿಮೆ

ಡಿ. ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್ ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಬುದ್ಧ ಪೂರ್ಣಿಮೆ ಪ್ರಯುಕ್ತ ಶ್ರೀ ಸತ್ಯ ನಾರಾಯಣ ಸ್ವಾಮಿ ‌ಪೂಜಾ ಕಥಾ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಶಿವಾನುಭವ ಗೋಷ್ಠಿ

ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ 279ನೇ ಬುದ್ಧ ಪೌರ್ಣಿಮೆ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ಇಂದು  ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ.

ನಗರದಲ್ಲಿ ಇಂದು ಜೀವನ ಕಲೆ ಶಿಬಿರ

ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ವತಿಯಿಂದ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಜೀವನ ಕಲೆಯ ಬೇಸಿಗೆ ಕಾರ್ಯಕ್ರಮವು ವಿಜಯನಗರ ಬಡಾವಣೆ, ಹೊಸ ಆರ್‌ಟಿಓ ಹತ್ತಿರ, ವರ್ತುಲ ರಸ್ತೆ, # 1512/5152 ಇಲ್ಲಿ  ಇಂದಿನಿಂದ ಇದೇ ದಿನಾಂಕ 26ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4.30 ರಿಂದ 7 ಗಂಟೆಯವರೆಗೆ 2 ಬ್ಯಾಚುಗಳಲ್ಲಿ ನಡೆಯಲಿದೆ.

ನಗರದಲ್ಲಿ ಇಂದು ಚಿಂತನಾ ಗೋಷ್ಠಿ

ಕರ್ನಾಟಕ ಸಾಂಸ್ಕೃತಿಕ ಅಭಿವೃದ್ಧಿ ಪರಿಷತ್ ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ಸಹಯೋಗದೊಂದಿಗೆ ಬುದ್ದ ಪೂರ್ಣಿವೆ ಅಂಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಗಾಂಧೀ ಭವನದಲ್ಲಿ ಚಿಂತನಾ ಗೋಷ್ಠಿ ಹಾಗೂ ಕವಿಗೋಷ್ಠಿ  ಆಯೋಜಿಸಲಾಗಿದೆ

error: Content is protected !!