ಬ್ಯಾಂಕ್ ಅಧಿಕಾರಿ ನೆಪದಲ್ಲಿ ವಿದ್ಯಾರ್ಥಿನಿ ಖಾತೆ ಹಣ ವರ್ಗಾವಣೆ

ಬ್ಯಾಂಕ್ ಅಧಿಕಾರಿ ನೆಪದಲ್ಲಿ ವಿದ್ಯಾರ್ಥಿನಿ ಖಾತೆ ಹಣ ವರ್ಗಾವಣೆ - Janathavaniದಾವಣಗೆರೆ, ಜು.28- ಬ್ಯಾಂಕ್ ಅಧಿಕಾರಿ ನೆಪದಲ್ಲಿ ವ್ಯಕ್ತಿಯೋರ್ವ ಖಾತೆಯ ವಿವರಗಳನ್ನು ಪಡೆದು ನಕಲಿ ಸಹಿ ಮಾಡಿ ವಿದ್ಯಾರ್ಥಿನಿಯೋರ್ವರ ಖಾತೆಯಲ್ಲಿದ್ದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹಾಲೇಕಲ್ಲು ಗ್ರಾಮದ ನವೀನ್ ಕುಮಾರ್ ಎಂಬಾತನ ವಿರುದ್ಧ ದೂರು ದಾಖಲಾಗಿದ್ದು, ಈತ ರಕ್ಷಿತ ಎಂಬ ವಿದ್ಯಾರ್ಥಿನಿಯ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಖಾತೆಯಲ್ಲಿದ್ದ ಸುಮಾರು 35 ಸಾವಿರ ಹಣವನ್ನು ವಿದ್ಯಾರ್ಥಿನಿಯ ದಾಖಲೆಗಳನ್ನು ಸೃಷ್ಠಿಸಿ ನಕಲಿ ಸಹಿ ಮಾಡಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ತಾನು ಕೋವಿಡ್ ನಿಮಿತ್ತ ತರಬೇತಿ ಶಾಲೆ ಮುಚ್ಚಿದ ಕಾರಣ ವಾಪಸ್ ದಾವಣಗೆರೆ ಬಂದು ಹಣದ ಅವಶ್ಯಕತೆ ಇದ್ದ ಕಾರಣ ಅಕ್ಕನೊಂದಿಗೆ ಹಣ ಬಿಡಿಸಲು ಖಾತೆ ಹೊಂದಿದ್ದ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಮುದ್ರಿಸಿದಾಗ ನನ್ನ ಖಾತೆಯಲ್ಲಿದ್ದ ವೈದ್ಯಕೀಯ ವ್ಯಾಸಂಗಕ್ಕಾಗಿ ಮಂಜೂರಾಗಿ ಜಮೆಯಾಗಿದ್ದ ವಿದ್ಯಾರ್ಥಿ ವೇತನದ 35 ಸಾವಿರ ಹಣವನ್ನು ನವೀನ್ ಕುಮಾರ್ ತನ್ನ ಖಾತೆಗೆ ಅದೇ ಬ್ಯಾಂಕ್ ನ ಮೂರು ಶಾಖೆಗಳಲ್ಲಿ ಮೂರು ಬಾರಿ ಖಾತೆಯ ಚಲನ್ ಮುಖೇನ ವರ್ಗಾಯಿಸಿಕೊಂಡಿರುವುದು ತಿಳಿದು ಬಂತು ಎಂದು ನೊಂದ ವಿದ್ಯಾರ್ಥಿನಿ ದೂರಿದ್ದಾರೆ.

ಈ ಹಿಂದೆ ಬ್ಯಾಂಕ್ ಗೆ ಹೋಗಿದ್ದ ವೇಳೆ ನವೀನ್ ಕುಮಾರ್ ತಾನು ಬ್ಯಾಂಕ್ ಅಧಿಕಾರಿ ಎಂದು ಸುಳ್ಳು ಹೇಳಿ ಪರಿಚಿತನಾಗಿ ಆಧಾರ್ ಲಿಂಕ್ ಮಾಡಲು ಬೇಕೆಂದು ನನ್ನ ಖಾತೆಯ ವಿವರಗಳನ್ನು ವಾಟ್ಸಾಪ್ ಮುಖೇನ ಅಕ್ಕನಿಂದ ಪಡೆದುಕೊಂಡಿದ್ದ ಎಂಬ ವಿಚಾರ ತಿಳಿಯಿತು. ಈ ಬಗ್ಗೆ ಬ್ಯಾಂಕಿನ ಶಾಖಾಧಿಕಾರಿಗಳನ್ನು ವಿಚಾರಿಸಿದಾಗ, ನವೀನ್ ಕುಮಾರ್ ಬ್ಯಾಂಕಿನ ಉದ್ಯೋಗಿಯಲ್ಲ. ಬ್ಯಾಂಕ್ ನ ಜೀವ ವಿಮೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆಂದು ವಿದ್ಯಾರ್ಥಿನಿ ದೂರಿನಲ್ಲಿ ವಿವರಿಸಿದ್ದಾರೆ.

error: Content is protected !!