ಜನರ ಸೇವೆ ಮಾಡಲೆಂದೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ : ಡಾ.ಪ್ರಭಾ

ಜನರ ಸೇವೆ ಮಾಡಲೆಂದೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ : ಡಾ.ಪ್ರಭಾ

ಹರಪನಹಳ್ಳಿ, ಮೇ 3 – ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಇಂದು ರೋಡ್ ಶೋ ನಡೆಸಿದರು. ಪಟ್ಟ ಣದ ಹಿರೇಕೆರೆ ವೃತ್ತದಿಂದ ಆರಂಭವಾಗಿ ಐಬಿ ವೃತ್ತದವರೆಗೆ ರೋಡ್ ಶೋ ನಡೆಯಿತು.

ಈ ವೇಳೆ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್‌, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ 1.10 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗಿದ್ದು, ಇದು ಕಾಂಗ್ರೆಸ್‌ ಸರ್ಕಾರದ ಸಾಧನೆಯಾಗಿದೆ ಎಂದರು.

ಜನರ ಸೇವೆ ಮಾಡಲೆಂದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ. ಜಿಲ್ಲೆಯ ರೈತರ ಸ್ವಾಭಿಮಾನ ಎತ್ತಿ ಹಿಡಿಯಲು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪ ಡಿಸಲು ಸದಾ ಸಿದ್ಧವಾಗಿರುತ್ತೇನೆ. ಬಡತನ ಮತ್ತು ರೈತರ ಕಷ್ಟ ನನಗೆ ತಿಳಿದಿದೆ.

ನಿಮ್ಮೆಲ್ಲರ ನೋವಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ಮನಗಂಡು ನೀವು ಮತ ನೀಡಬೇಕು. ಹರಪನಹಳ್ಳಿ, ಜಗಳೂರಿನಲ್ಲಿ ಕಾರ್ಖಾನೆ, ಶಿಕ್ಷಣ, ವಸತಿ, ಆಸ್ವತ್ರೆಗಳು ಆಗಬೇಕಿದೆ. ಪ್ರಣಾಳಿಕೆಯಲ್ಲಿ ಇರುವ ಎಲ್ಲಾ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತೇನೆ. ರಾಜ್ಯದಲ್ಲಿ 16ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಕಾಂಗ್ರೆಸ್ ಪರ ಜನರ ಒಲವು ಹಾಗೂ ಉತ್ಸಾಹ, ವಿಶ್ವಾಸ ಹೆಚ್ಚಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಸೇವೆಗೆ ಅವಕಾಶ ಮಾಡಿಕೊಡಿ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ನೀರಿನ ಸಮಸ್ಯೆಗೆ ಯೋಜನೆ ರೂಪಿಸಿ ಕಾರ್ಯಗತ ಮಾಡಲು ಅವಕಾಶ ನೀಡಿ ಎಂದರು.

ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಐದು ಗ್ಯಾರಂಟಿಗಳಿಂದ 50 ಲಕ್ಷ ರೂ. ಪಟ್ಟಣಕ್ಕೆ ಅನುದಾನ ಬರುತ್ತಿದ್ದು ಕಾಂಗ್ರೆಸ್ ಎಲ್ಲಾ ವರ್ಗದ ಹಿತಕಾಯುವ ಪಕ್ಷ. ನಮ್ಮ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಗ್ಯಾರಂಟಿಗಳಿಂದ ಎಲ್ಲ ರೀತಿಯ ವರ್ಕೌಟ್ ಆಗುತ್ತದೆ. ಹಾಲಿ ಸಂಸದರ ಅಭಿವೃದ್ಧಿ ಕೆಲಸದ ಬಗ್ಗೆ ಅಸಮಾಧಾನ ಇದೆ.  ಅನ್ನಭಾಗ್ಯ ಕೊಟ್ಟಿದ್ದೇವೆ. ನಮಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದರೆ ಗೋದಾಮಿ‌ನಲ್ಲಿ ಅಕ್ಕಿ ಕೊಳೆತರೂ ಕೂಡ ರಾಜ್ಯಕ್ಕೆ ಕೊಡಲಿಲ್ಲ. ಹಸಿವು ಮುಕ್ತ ಕರ್ನಾಟಕ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆ ತಂದಿದ್ದಾರೆ. ಜನರ ಕಷ್ಟಕ್ಕೆ ನೆರವಾಗುವಂತಹ ಸಂಸದರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.

ಈ ವೇಳೆ ವಿಧಾನಸಭೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅರಸೀಕೆರೆ ಎನ್. ಕೊಟ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಪ್ಪ,  ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷೀ, ಮುಖಂಡರುಗಳಾದ ಆಲದಹಳ್ಳಿ ಷಣ್ಮುಖಪ್ಪ, ಚಿರಸ್ಥಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಬಾಣದ ಅಂಜಿನಪ್ಪ. ತೆಲಗಿ  ಉಮಾಕಾಂತ, ಪುರಸಭೆ ಸದಸ್ಯರಾದ ಲಾಟಿ ದಾದಪೀರ್, ಉದ್ದಾರ ಗಣೇಶ, ಟಿ.ವೆಂಕಟೇಶ, ಡಿ.ಅಬ್ದುಲ್ ರಹಿಮಾನ್ ಸೇರಿದಂತೆ ಇತರರು ಇದ್ದರು.

error: Content is protected !!