ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಹೊನ್ನಾಳಿ ತಾ.ನ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್

ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ  ಹೊನ್ನಾಳಿ ತಾ.ನ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್

ಹೊನ್ನಾಳಿ, ಮೇ 3 – ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದ್ರೆ, ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೂ ಬಂದಿಲ್ಲ. ಇದಕ್ಕೆ ಇಷ್ಟು ದೀರ್ಘಕಾಲ ಆಡಳಿತ ನಡೆಸಿರುವವರಿಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕೊರತೆಯೇ ಕಾರಣ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನ ಬೆಳಲಗೆರೆ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು, ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ರಾಜಕೀಯದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆ ಬಂತು. ಆಗ ಜನರ ಬಳಿಗೆ ಮತ್ತೆ ಹೋದೆ. ಮುಂದಿನ ನಡೆ ಬಗ್ಗೆ ಕೇಳಿದೆ. 

ಸ್ವಾಭಿಮಾನಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದೀರಾ. 

ಚುನಾವಣೆಗೆ ಸ್ಪರ್ಧಿಸಿ. ನಾವು ಗೆಲ್ಲಿಸಿಕೊಂಡು ಬರುತ್ತೇವೆಂಬ ಭರವಸೆ ಕೊಟ್ಟ ಕಾರಣ ಸ್ಪರ್ಧೆ ಮಾಡಿದ್ದೇನೆ. ಎಲ್ಲರೂ ಬೆಂಬಲಿಸಿ ಗೆಲ್ಲಿಸುತ್ತೀರಾ ಎಂಬ ಭರವಸೆ ಇದೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಸಾಮಾನ್ಯ ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ಬೆಳಲಗೆರೆ ಗ್ರಾಮದ ಮುಖಂಡರಾದ ದೊಡ್ಡಪ್ಪ, ರಾಕೇಶ, ಪ್ರಕಾಶ ಬೀರೇಶ, ಮಂಜುನಾಥ, ದೊಡ್ಡೇಶ, ಮಂಜುನಾಥ, ರವಿಕುಮಾರ್, ಮೈಲಾರಿ, ಶ್ರೀನಿವಾಸ್, ಚಂದ್ರಪ್ಪ, ಮಂಜು, ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.

error: Content is protected !!