16 ತಿಂಗಳ ಶಿಷ್ಯ ವೇತನಕ್ಕಾಗಿ ಬಿಗಿಪಟ್ಟು ಸಡಿಲಿಸದೇ ಜೆಜೆಎಂ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ 5 ದಿನಗಳನ್ನು ಪೂರೈಸಿದೆ.
ರುದ್ರಭೂಮಿ ಸಮಾಧಿಯಲ್ಲಿನ ಶವ ಹೊರ ತೆಗೆದು ವಿಕೃತಿ ಮೆರೆದ ದುಷ್ಟರು
ಮೇ 25 ರಂದು ಭೋವಿ ರಾಮಪ್ಪ (45) ಮೃತಪಟ್ಟಿದ್ದರು. ಅವರನ್ನು ಗ್ರಾಮದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ಮೊನ್ನೆ ರಾತ್ರಿ ಕಿಡಿಗೇಡಿಗಳು ಶವವನ್ನು ಸಮಾಧಿಯಿಂದ ಹೊರಗಡೆ ತೆಗೆದು ಕೈ, ಕಾಲಿಗೆ ಗಾಯ ಮಾಡಿ ವಿಕೃತಗೊಳಿಸಿದ್ದಾರೆ.
ಚೆನ್ನಮ್ಮ ಶಾಲೆ ಕೋವಿಡ್ ಆಸ್ಪತ್ರೆ
ಹರಪನಹಳ್ಳಿ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ನಿಂದ ಹರಪನಹಳ್ಳಿ ತಾಲ್ಲೂಕಿನ ಹರಿಹರ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಸಿದ್ದಪಡಿಸಲಾಗಿದೆ.
ಎಂಪಿ-ಎಂಎಲ್ಸಿ ಸಂಧಾನ ವಿಫಲ
16 ತಿಂಗಳ ಶಿಷ್ಯ ವೇತನಕ್ಕಾಗಿ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಸಹ ಮುಂದುವರೆಯಿತು.
ಜ್ವರದ ಮಾಹಿತಿ ದಾಖಲಿಸದ ಹನ್ನೊಂದು ಆಸ್ಪತ್ರೆಗಳು ಸೀಜ್
ಶೀತ, ಜ್ವರದಂತಹ (ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ ಇರುವ (ಎಸ್ಎಆರ್ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್ಪೋರ್ಟಲ್ಗೆ ಅಪ್ಡೇಟ್ ಮಾಡದ ನಗರದ 11 ಖಾಸಗಿ ಆಸ್ಪ ತ್ರೆಗಳನ್ನು ಸೀಜ್ ಮಾಡಲಾಗಿದೆ.
ಹಣಕ್ಕಾಗಿ ಮತ ಮಾರಿಕೊಳ್ಳದೆ ನನಗೆ ನೀಡಿ: ಎಂ.ಜಿ. ಶ್ರೀಕಾಂತ್
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನವಭಾರತ ಸೇನಾ ಪಕ್ಷದ ವತಿಯಿಂದ ಸ್ಪರ್ಧಿಸಿದ್ದು, ತಮ್ಮ ಕ್ರಮ ಸಂಖ್ಯೆ 11ರ ಬೆಂಕಿ ಪಟ್ಟಣದ ಗುರುತಿಗೆ ಮತ ನೀಡುವಂತೆ ಅಭ್ಯರ್ಥಿ ಎಂ.ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.
ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಿದ್ದೇಶ್ವರ ಸಂತಾಪ
ಚಾಮರಾಜ ನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ನಿಧನವಾಗಿರು ವುದು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.
ನಿಟುವಳ್ಳಿಯಲ್ಲಿ ಇಂದು ಕರಿಯಾಂಬಿಕಾ ದೇವಿ ದೊಡ್ಡಜಾತ್ರೆ
ದಾವಣಗೆರೆ - ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ನಡೆಯುತ್ತಿರುವ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಇಂದು ಶ್ರೀ ಅಮ್ಮನವರ ದೊಡ್ಡಜಾತ್ರೆ ಜರುಗಲಿದೆ.
ಹರಿಹರದಲ್ಲಿ ಇಂದು ಪ್ರೊ.ಬಿ. ಕೃಷ್ಣಪ್ಪ ಸಂಸ್ಮರಣೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನ
ಹರಿಹರ ಹೊರವಲಯದ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನ ಮೈತ್ರಿ ವನದಲ್ಲಿ ನಾಳೆ ದಿನಾಂಕ 1ರ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರೊ.ಬಿ. ಕೃಷ್ಣಪ್ಪ ಅವರ ಸಂಸ್ಮರಣೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಏರ್ಪಡಿಸಲಾಗಿದೆ
ದಲಿತ ಸಂಘಟನೆಗಳ ಒಕ್ಕೂಟದಿಂದ ಕಾಂಗ್ರೆಸ್ಗೆ ಬೆಂಬಲ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಲೋಕ ಚುನಾವಣೆ : ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಕಾಂಗ್ರೆಸ್ಗೆ ಬೆಂಬಲ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ತಿಳಿಸಿದೆ.
ನಗರದಲ್ಲಿ ಇಂದು ಜಿಲ್ಲಾ ಪಂಚಮಸಾಲಿ ಸಮಾಜದ ಸಭೆ
ನಾಳೆ ದಿನಾಂಕ 1ರ ಬುಧವಾರ ನಗರದ ಬಂಟರ ಭವನದಲ್ಲಿ ಜಿಲ್ಲಾ ಪಂಚಮಸಾಲಿ ಸಮಾಜದ ಸಭೆ ಕರೆಯಲಾಗಿದೆ ಎಂದು ಮಾಜಿ ಶಾಸಕ, ಸಮಾಜದ ಮುಖಂಡ ಎಚ್.ಎಸ್. ಶಿವಶಂಕರ್ ತಿಳಿಸಿದರು.
ಜೆಡಿಎಸ್ ಸಂಸದನ ಬಂಧನಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ನಗರದಲ್ಲಿ ಇಂದು ಸಿಪಿಐ- ಎಐಟಿಯುಸಿ ನೇತೃತ್ವದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ
ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ದಾವಣಗೆರೆ ಜಿಲ್ಲಾ ಮಂಡಳಿಗಳ ನೇತೃತ್ವದಲ್ಲಿ ಇಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.
ನಗರದಲ್ಲಿಂದು ಛಲವಾದಿ ಸಮಾಜದ ಸಭೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸುವ ಸಲುವಾಗಿ, ಮೇ 1ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಛಲವಾದಿ ಸಮಾಜದ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ರುದ್ರಮುನಿ ತಿಳಿಸಿದರು.
ಸೋಲಿನ ಭಯದಿಂದ ಸಚಿವರಿಂದ ವೈಯಕ್ತಿಕ ಆರೋಪ : ಜಾಧವ್
ಜಿಲ್ಲಾ ಉಸ್ತುವಾರಿ ಸಚಿವರು ಸೋಲಿನ ಭಯದಿಂದ, ಹತಾಶರಾಗಿ ಸಂಸದರ ಬಗ್ಗೆ ವೈಯಕ್ತಿಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ನಗರದಲ್ಲಿ ಇಂದು ಯಕ್ಷರಂಗದಿಂದ ಮತದಾನ ಜಾಗೃತಿ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆಯಾದ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಇಂದು ಮಧ್ಯಾಹ್ನ 3 ಕ್ಕೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಮಹಿಳೆಯರು ಯಕ್ಷಗಾನ ವೇಷ, ಭೂಷಣದೊಂದಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಕಿರು ಯಕ್ಷ ಗಾನ ಪ್ರದರ್ಶನ ಮಾಡಲಿದ್ದಾರೆ
ಬ್ಲಾಕ್ಮೇಲ್ ಮೂಲಕ ಮತ ಕೇಳುತ್ತಿರುವ ಕಾಂಗ್ರೆಸ್ : ವಸಂತ್ ಕುಮಾರ್
ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳಲು ಅರ್ಹತೆ ಇಲ್ಲದ ಕಾಂಗ್ರೆಸ್, ಮತದಾರರನ್ನು ಬ್ಲಾಕ್ಮೇಲ್ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಅನುಸರಿಸುತ್ತಿದೆ. ಆದರೆ, ಅದು ಫಲ ನೀಡುವುದಿಲ್ಲ
ಸಾಕು ಪ್ರಾಣಿಗಳ ರ್ಯಾಂಪ್ ವಾಕ್
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ, ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಇಂದು ಸಂಜೆ 5 ಗಂಟೆಗೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಾಸ್ಕೆಟ್ ಬಾಲ್ ಗ್ರೌಂಡ್ನಲ್ಲಿ ಸಾಕು ಪ್ರಾಣಿಗಳ ರ್ಯಾಂಪ್ ವಾಕ್ ಆಯೋಜಿಸಲಾಗಿದೆ.
ನಗರದಲ್ಲಿ ನಾಳೆ ವೀರಭದ್ರೇಶ್ವರ ಸ್ವಾಮಿ ಗುಗ್ಗಳ
ನಗರದ ಶಾಮನೂರು ರಸ್ತೆಯ ಎಸ್.ಎಸ್.ಬಡಾವಣೆ `ಎ' ಬ್ಲಾಕ್ನಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾದರ್ಚನೆ ಕಾರ್ಯಕ್ರಮವು ದಿನಾಂಕ 2ರ ಗುರುವಾರ ಬೆಳಿಗ್ಗೆ ಎಡೆಯೂರು ಕ್ಷೇತ್ರದ ಷ|| ಬ್ರ|| ರೇಣುಕಾ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುವು.
ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ನಗರದಲ್ಲಿ ಇಂದು ಎಸ್ಸೆಸ್ ರೋಡ್ ಷೋ
ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಾ. ಪ್ರಭಾ, ಮಲ್ಲಿಕಾರ್ಜುನ್ ಅವರ ಪರವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ರೋಡ್ ಷೋ ಮೂಲಕ ಮತಯಾಚಿಸುವರು.
ಸಾಣೇಹಳ್ಳಿಯಲ್ಲಿ ಇಂದು `ವಚನ ಸಂವಿಧಾನ’ ಬಿಡುಗಡೆ
ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಇಂದು ಬೆಳಿಗ್ಗೆ 10-30ರಿಂದ ಬಸವಣ್ಣನವರ ಬಹುಮುಖ ವ್ಯಕ್ತಿತ್ವ ಕುರಿತಂತೆ, ಕರ್ನಾಟ ಕದ 30 ಜನ ಚಿಂತಕರು ವಚನಗಳನ್ನಾಧರಿಸಿ ಬರೆದಿರುವ `ವಚನ ಸಂವಿಧಾನ' ಕೃತಿಯ ಲೋಕಾರ್ಪಣೆ ಮಾಡಲಾಗುವುದು
ಹಮಾಲರ ಸಂಘದ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಣೆ
ಹರಪನಹಳ್ಳಿ : ಹಮಾಲರು ತಮ್ಮ ಬೆವರು ಹಾಗೂ ಶಕ್ತಿಯನ್ನು ವಿನಿಯೋ ಗಿಸಿ ಶ್ರಮವಹಿಸಿ ದುಡಿಯುವ ಜನ ಆಗಿದ್ದು, ದುಡಿಯುವ ಜನತೆ ಪರವಾಗಿ ಶ್ರಮಿಸುವವರಿಗೆ ಮತ ಹಾಕಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಹೇಳಿದರು.
ನಿಟುವಳ್ಳಿಯ ಶ್ರೀ ಕರಿಯಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಇಂದು
ದಾವಣಗೆರೆ - ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ಇಂದಿನಿಂದ ಬರುವ ಮೇ 3 ರವರೆಗೆ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.
ರುದ್ರಾಂಬ ಪ್ರಕಾಶ್ ನಿಧನಕ್ಕೆ ಎಸ್ಸೆಸ್-ಎಸ್ಸೆಸ್ಸೆಂ ಸಂತಾಪ
ಮಾಜಿ ಸಚಿವ ದಿ. ಎಂ.ಪಿ.ಪ್ರಕಾಶ್ ಅವರ ಧರ್ಮಪತ್ನಿ ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ (ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಅವರ ತಾಯಿ) ಅವರ ನಿಧನಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಲೋಕಸಭಾ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ರುದ್ರಾಂಬ ಅವರಿಗೆ ಬಾ.ಮ. ಶೋಕ
ಮಾಜಿ ಉಪಮುಖ್ಯಮಂತ್ರಿ ದಿ. ಎಂ. ಪಿ. ಪ್ರಕಾಶ್ ಧರ್ಮಪತ್ನಿ ಶ್ರೀಮತಿ ಎಂ.ಪಿ. ರುದ್ರಾಂಬ ಅವರ ನಿಧನಕ್ಕೆ ಹಿರಿಯ ಸಾಹಿತಿಯೂ ಆಗಿರುವ ಎಂ.ಪಿ.ಪ್ರಕಾಶ್ ಅವರ ಕುಟುಂಬದ ಆಪ್ತ ಒಡನಾಡಿ ಬಾ.ಮ. ಬಸವರಾಜಯ್ಯ ಶೋಕ ವ್ಯಕ್ತಪಡಿಸಿದ್ದಾರೆ.
ಪಂಚ ಜನ ಕಲ್ಯಾಣ ಯೋಜನೆ ಕೈ ಗೆಲುವಿಗೆ ಶ್ರೀರಕ್ಷೆ : ಹೆಚ್. ಆಂಜನೇಯ
ಸಿದ್ಧರಾಮಯ್ಯ ಸರ್ಕಾರದ ಪಂಚ ಜನ ಕಲ್ಯಾಣ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ನಗರದಲ್ಲಿ ನಾಳೆ ವಿಶ್ವ ಕಾರ್ಮಿಕ ದಿನಾಚರಣೆ
ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ದಾವಣಗೆರೆ ಜಿಲ್ಲಾ ಮಂಡಳಿಗಳ ನೇತೃತ್ವದಲ್ಲಿ ಮೇ 1ರಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆಡಳಿತಕ್ಕೆ ವಿಶ್ವದಲ್ಲೇ ಮೆಚ್ಚುಗೆ : ಜಿ.ಎಂ.ಸಿದ್ದೇಶ್ವರ
ಭಾರತ ದೇಶ ಅಷ್ಟೇ ಅಲ್ಲ, ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದೆ ಎ೦ದು ಸಂಸದ ಜಿ. ಎಂ.ಸಿದ್ದೇಶ್ವರ ಹೇಳಿದರು.
ದಾವಣಗೆರೆಯಲ್ಲಿರುವುದು ಅಭಿವೃದ್ಧಿಯ ಹವಾ
ದಾವಣಗೆರೆ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಹವಾನೂ ಇಲ್ಲ. ಅಭಿವೃದ್ಧಿ ಹವಾ ಒಂದೇ ಇರುವುದು ಎಂದು ದಾವ ಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಶಾಶ್ವತ ಅಭಿವೃದ್ಧಿ ಮಾಡದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ : ಡಾ. ಪ್ರಭಾ
ಹರಪನಹಳ್ಳಿ : ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮತದಾರರಲ್ಲಿ ವಿನಂತಿಸಿಕೊಂಡರು.
ಅಧಿಕಾರದಲ್ಲಿದ್ದವರು ಮಾಯಕೊಂಡಕ್ಕೆ ಕೈಗಾರಿಕೆ, ಶಿಕ್ಷಣ ಸಂಸ್ಥೆ ಯಾಕೆ ತರಲಿಲ್ಲ ?
ಮಾಯಕೊಂಡ ಕ್ಷೇತ್ರಕ್ಕೆ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಯಾಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದವರು ಜನಸೇವೆ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಬೇಕಾಗಿದೆ
ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಎತ್ತದ ಬಿಜೆಪಿ ಸಂಸದರು : ವಿನಯ್ ಕುಲಕರ್ಣಿ
ಹರಿಹರ : ರಾಜ್ಯದ ಜ್ವಲಂತ ಸಮಸ್ಯೆಗಳ ಪರವಾಗಿ ಕೇಂದ್ರದ ಸಂಸತ್ ಭವನದಲ್ಲಿ ಒಂದು ಬಾರಿ ಕೂಡ ಧ್ವನಿ ಎತ್ತದೇ ಇರುವಂತಹ ರಾಜ್ಯದ ಬಿಜೆಪಿ ಸಂಸದರನ್ನು ಆಯ್ಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಹೇಳುವಂತಹ ಬುದ್ಧಿವಂತಿಕೆ ಇರುವ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಶಾಸಕ ವಿನಯ್ ಕುಲಕರ್ಣಿ ಕರೆ ನೀಡಿದರು.
ಅಭಿವೃದ್ಧಿ ಮಾಡದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ
ಚನ್ನಗಿರಿ : ಅಭಿವೃದ್ಧಿ ಮಾಡದ ಎರಡೂ ರಾಷ್ಟ್ರೀಯ ಪಕ್ಷಗಳ ತಿರಸ್ಕರಿಸಿ. ಸ್ವಾಭಿಮಾನಿಯಾಗಿ ಕಣಕ್ಕಿಳಿದಿರುವ ನನಗೊಂದು ಅವಕಾಶ ಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಮತದಿಂದ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸುವ ಶಕ್ತಿಯೇ ಚುನಾವಣೆ : ಉಪಕಾರ್ಯದರ್ಶಿ ಕೃಷ್ಣನಾಯ್ಕ
ಮತ ಚಲಾಯಿ ಸುವ ಮೂಲಕ ರಾಷ್ಟ್ರದ ಭವಿಷ್ಯದ ಹಾದಿ ಯನ್ನು ರೂಪಿಸುವ ಶಕ್ತಿಯೇ ಮತದಾನ ವಾಗಿದ್ದು ಇದು ಪ್ರಜಾಪ್ರಭುತ್ವದ ನೀತಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಾರ್ಥಿಸಿ ದೀಡು ನಮಸ್ಕಾರ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ, ಕಾಂಗ್ರೆಸ್ ಮುಖಂಡ ವೀರಭದ್ರಸ್ವಾಮಿ ಮಟ್ಟಿಕಲ್ ಅವರು ಇಂದು ದೀಡು ನಮಸ್ಕಾರ ಸೇವೆ ಸಲ್ಲಿಸಿದರು.
ಅಮರಾವತಿಯಲ್ಲಿ ಸಂಭ್ರಮದ ಗ್ರಾಮ ದೇವತೆಗಳ ಹಬ್ಬ
ಹರಿಹರ : ನಗರದ ಹೊರವಲಯದ ಅಮರಾವತಿ ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಚೌಡೇಶ್ವರಿ ದೇವಿ ಮತ್ತು ಊರಮ್ಮ ದೇವಿಯ ಹಬ್ಬವು ಸಡಗರ - ಸಂಭ್ರಮದಿಂದ ನಡೆಯಿತು.
ದಲಿತ ಸಮಾಜದ ಏಳಿಗೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್
ಹರಿಹರ : ಕಾಂಗ್ರೆಸ್ ಪಕ್ಷವು ದಲಿತ ಸಮಾಜದ ಏಳಿಗೆಗಾಗಿ ಸಾಕಷ್ಟು ಅನುಕೂಲ ಮಾಡಿದ್ದರಿಂದ ಹರಿಹರ ತಾಲ್ಲೂಕಿನ ದಲಿತ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತವನ್ನು ಹಾಕುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸಬೇಕು
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು
ಹರಿಹರ : ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡುವ ಒಂದು ಮತ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಮದುವೆ ಊಟ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ಸಿದ್ದೇಶ್ವರ ಭೇಟಿ
ಹರಪನಹಳ್ಳಿ ತಾಲ್ಲೂಕಿನ ಸಿಂಗ್ರಿಹಳ್ಳಿ ತಾಂಡದಲ್ಲಿ ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಸ್ವಸ್ಥರನ್ನು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಹೆಬ್ಬಾಳು ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಎಸ್ಸೆಸ್ಸೆಂ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಉಜ್ಜಿನಿ ಗುರುಪೀಠಕ್ಕೆ ಗಾಯತ್ರಿ ಸಿದ್ದೇಶ್ವರ ಭೇಟಿ
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ಉಜ್ಜಿನಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು.
`ನಿಮ್ಮ ಬಗ್ಗೆ ಗೊತ್ತು’ ಎಂದ ಮೋದಿ ಶಾಸಕ ಬಿ.ಪಿ. ಹರೀಶ್ ಹರ್ಷ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿ ಹಾಗೂ ಅವರ ಅರಿವಿನ ಸಾಮರ್ಥ್ಯಕ್ಕೆ ಶಾಸಕ ಬಿ.ಪಿ. ಹರೀಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗುವಂತಹ ಬದಲಾವಣೆ ತರಬೇಕೆಂಬ ಗುರಿ ನನ್ನದು : ವಿನಯ್
ಜಗಳೂರು : ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುವುದು ಬಡತನವೇ. ಓದಿಗೆ ತಕ್ಕಂತೆ ಕೆಲಸಕ್ಕೆ ಸೇರುತ್ತಾರೆ. ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಬೇಕು. ಈ ಬದಲಾವಣೆ ತರಬೇಕು ಎಂಬುದು ನನ್ನ ಆಸೆ
ವಚನಾಮೃತ ಬಳಗದಿಂದ ಅಕ್ಕಮಹಾದೇವಿ ಜಯಂತಿ
ವಚನಾಮೃತ ಬಳಗದಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಆಚರಿಸಲಾಯಿತು.
ಹರಪನಹಳ್ಳಿ : ನೋವು-ನಲಿವುಗಳಿಗೆ ಸ್ಪಂದಿಸುವವರಿಗೆ ಮಾತ್ರ ಮತ ನೀಡಿ
ಹರಪನಹಳ್ಳಿ : ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು, ಹರಪನಹಳ್ಳಿ ತಾಲ್ಲೂಕಿನ ಜಂಬುಲಿಂಗನಹಳ್ಳಿಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಬೆಂಬಲಿಸಿದ ಹರಿಹರದ ಕಮ್ಯುನಿಸ್ಟ್
ಹರಿಹರ : ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿವಿಗಾಗಿ ಕಮ್ಯುನಿಸ್ಟ್ ಪಕ್ಷವು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಮಾಡಲಾಗಿದೆ ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡರು ತಿಳಿಸಿದರು.
17ನೇ ವಾರ್ಡಿನಲ್ಲಿ ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಪ್ರಭಾ ಪರ ಪ್ರಚಾರ
ಚುನಾವಣೆ ಪ್ರಯುಕ್ತ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ 17ನೇ ವಾರ್ಡಿನಲ್ಲಿ ದಿನೇಶ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಮನೆ ಮನೆ ಮತಯಾಚನೆ ಮಾಡಿ ಚುನಾವಣಾ ಪ್ರಚಾರ ನಡೆಸಲಾಯಿತು.
ಮಲೇಬೆನ್ನೂರು : ಗಮನ ಸೆಳೆದ ನಟ ಶ್ರೀಧರ್ ಭರತನಾಟ್ಯ
ಮಲೇಬೆನ್ನೂರು : ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸಭಾ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕಾಂತಾನಂದ ಭಗವಾನ್ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ನಡೆದ ರುದ್ರಪಾರಾಯಣದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರ ನಟ ಹಾಗೂ ಭರತ ನಾಟ್ಯ ಕಲಾವಿದ ಶ್ರೀಧರ್ ಅವರು ನಡೆಸಿಕೊಟ್ಟ ಭರತನಾಟ್ಯ ಸಂಗೀತ ನೃತ್ಯಗಳು ಎಲ್ಲರ ಗಮನ ಸೆಳೆದವು.
ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸಲು ಕರೆ
ಹರಪನಹಳ್ಳಿ : ವಿಶ್ವ ಮಲೇರಿಯಾ ದಿನಾಚರಣೆ 25 ಏಪ್ರಿಲ್ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿ ಸೋಣ. ಮಲೇರಿಯಾ ರೋಗದಿಂದ ಮುಕ್ತರಾಗಲು ಸೊಳ್ಳೆಗಳ ನಿರ್ಮೂಲನೆಯಿಂದಲೇ ಸಾಧ್ಯ.
ಗಾಂಧಾರಿ ವಿದ್ಯೆ ತರಬೇತಿ ಸಮಾರೋಪ
ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಗಾಂಧಾರಿ ವಿದ್ಯೆ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ಸಂಭ್ರಮದ ಕೂಡಲ ಸಂಗಮೇಶ್ವರ ಜಾತ್ರೆ
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರ ಸಮ್ಮುಖದಲ್ಲಿ ಸೋಮವಾರ ಜರುಗಿತು.
ಮಾಜಿ ಸಚಿವ ಎಸ್ಎಆರ್ಗೆ ಪ್ರಧಾನಿ ಮೋದಿ ಗೌರವ
ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಬಿಜೆಪಿಯಿಂದ ಏರ್ಪಾಡಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಚಿವರೂ, ಹಿರಿಯರೂ ಆದ ಎಸ್.ಎ. ರವೀಂದ್ರನಾಥ್ ಅವರನ್ನು ಗೌರವಿಸಿದರು.
ಅಸ್ಪೃಶ್ಯತೆಯಿಂದ ಕಾಪಾಡಿದ ಪಕ್ಷಕ್ಕೆ ಬೆಂಬಲಿಸಿ
ಗಾಂಧೀಜಿ, ನೆಹರು ಅಂತಹ ಕಾಂಗ್ರೆಸ್ಸಿನ ನಾಯಕರು ನಮ್ಮ ಹಿರಿಯರನ್ನು ಅಸ್ಪೃಶ್ಯತೆಯಿಂದ ಕಾಪಾಡಿದ್ದಾರೆ. ಹೊರತು ಬಿಜೆಪಿಗರು ಅಲ್ಲ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗೆ ರೈತ ಸಂಘದಿಂದ ಬೆಂಬಲ
ದೇಶದ ಬೆನ್ನೆಲುಬು ರೈತರು, ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲು ಬಾಗಿರುವುದು ಸಂತಸದ ಸಂಗತಿ, ರೈತ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ಸಿದ್ದೇಶ್ವರ
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.