ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು

ಸಮರ್ಥ ನಾಯಕ

`ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು, ವಿಶ್ವ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸುವಂತಹ ಕೆಲಸ ಮಾಡಿದೆ.’

– ಹೆಚ್.ಎಸ್. ಶಿವಶಂಕರ್,ಮಾಜಿ ಶಾಸಕರು, ಹರಿಹರ.


ಹರಿಹರ, ಏ.29-  ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡುವ ಒಂದು ಮತ  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದಲ್ಲಿ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಜೊತೆಗೆ ಊರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬಡಾವಣೆಯಲ್ಲಿ ಜಂಟಿಯಾಗಿ ಮತಯಾಚನೆ ವೇಳೆ ಅವರು ಮಾತನಾಡಿದರು. 

ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ನೀಡಿದ ಮತಗಳಿಂದಾಗಿ ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 1070 ಕೋಟೆ ರೂಪಾಯಿ ಅಭಿವೃದ್ಧಿ ಕಾರ್ಯವಾಗಿದ್ದು,  ಅದರ ಜೊತೆಗೆ 106 ಕೋಟಿ ಬಸ್ ನಿಲ್ದಾಣ, 51 ಸಾವಿರ ಪಾಸ್ ಪೋರ್ಟ್ ವಿತರಣೆ, 15 ಕೋಟಿ ವೆಚ್ಚದಲ್ಲಿ ಇಎಸ್ಐ ಆಸ್ಪತ್ರೆ, ತುಂಗಾ ನಾಲಾ ಆಧುನೀ ಕರಣ, 29ಜನೌಷದಿ ಕೇಂದ್ರಗಳು, ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 790 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ, 13.5 ಕೋಟಿ ರೂ. ವೆಚ್ಚದಲ್ಲಿ ಕೇಂದ್ರೀಯ ವಿದ್ಯಾಶಾಲೆ, 25 ಕೋಟಿ ವೆಚ್ಚದಲ್ಲಿ ದಿವ್ಯಾಂಗ ವ್ಯಕ್ತಿಗಳ ಚಿಕಿತ್ಸಾ ಕೇಂದ್ರ, ರೈತರಿಗೆ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ದಾವಣಗೆರೆ ಜಿಲ್ಲೆಯನ್ನು ರಾಜ್ಯದಲ್ಲಿ ಒಂದು ಮಾದರಿಯ ಜಿಲ್ಲೆಯನ್ನಾಗಿ ಮಾಡಿದ್ದರಿಂದ, ಈ ಬಾರಿಯೂ ಕೂಡ ಮತದಾರರು ಬಿಜೆಪಿ ಪಕ್ಷದ ಅಭ್ಯರ್ಥಿ  ಗಾಯತ್ರಿ ಜಿ.ಎಂ.ಸಿದ್ದೇಶ್ವರ  ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಹೇಳಿದರು.

ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್  ಮಾತನಾಡಿ,  ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಬಿಜೆಪಿ ಸರ್ಕಾರ ಸಮಾ ಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು, ವಿಶ್ವಮಟ್ಟದಲ್ಲಿ ದೇಶದ ಗೌರವ ವನ್ನು ಹೆಚ್ಚಿಸುವಂತಹ ಕೆಲಸ ಮಾಡಿದೆ.    ಇಂತಹ ಸಮರ್ಥ ನಾಯಕನ ನೇತೃತ್ವಕ್ಕೆ ಮತ್ತೆ ದೇಶದ ಚುಕ್ಕಾಣಿ ವಹಿಸುವ ಸದಾವಕಾಶ ಮತದಾರರಿಗೆ ಒಲಿದಿದ್ದರಿಂದ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಮತವನ್ನು ಹಾಕುವುದರ ಮೂಲಕ  ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಕಾರ್ಯ ವನ್ನು ಮಾಡೋಣ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ನಿಂಬಕ್ಕ ಚಂದಾಪೂರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರಾದ ಪೂಜಾರ್ ಈರಣ್ಣ, ಸುರೇಶ್ ಚಂದಾಪೂರ್, ಅಡಕಿ ಕುಮಾರ್, ಬೆಣ್ಣೆ ರೇವಣಸಿದ್ದಪ್ಪ, ಗೌಡ್ರು ಪುಟ್ಟಪ್ಪ, ಜಿ ನಂಜಪ್ಪ, ಬಸವರಾಜಪ್ಪ, ರೂಪಾ ಕಾಟ್ವೆ, ಬೆಣ್ಣೆ ಸಿದ್ದೇಶ್, ಮಹಾಂತೇಶ್, ಕರಿಬಸಪ್ಪ ಕಂಚಿಕೇರಿ, ಪಾಪಣ್ಣ, ಮೋಹನ್ ಕೊಂಡಜ್ಜಿ, ವೇದಮೂರ್ತಿ, ಸುನಿಲ್, ಬಾತಿ ಚಂದ್ರಶೇಖರ್, ಹಾವನೂರು ಈರಣ್ಣ, ಮಜ್ಜಿಗೆ ಚಂದ್ರಪ್ಪ, ಸಂತೋಷ ಗುಡಿಮನಿ, ರಾಘು ಚೌಗಲೆ, ದೊಗ್ಗಳ್ಳಿ ಗುರುಮೂರ್ತಿ, ಗಜೇಂದ್ರ ಬೇಲೂರು,  ಪ್ರವೀಣ್ ಮಜ್ಜಿಗೆ, ಸುನಂದ, ಬಿ.ಆರ್. ಸುರೇಶ್, ರುದ್ರೇಶ್, ಹಾಲೇಶ್, ಮಂಜುನಾಥ್  ಇತರರು ಹಾಜರಿದ್ದರು. 

error: Content is protected !!