ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ನಗರದಲ್ಲಿ ಇಂದು ಎಸ್ಸೆಸ್ ರೋಡ್ ಷೋ

ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಾ. ಪ್ರಭಾ, ಮಲ್ಲಿಕಾರ್ಜುನ್ ಅವರ ಪರವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ರೋಡ್ ಷೋ ಮೂಲಕ ಮತಯಾಚಿಸುವರು.

ಸಂಜೆ 4.30ಕ್ಕೆ ಗಡಿಯಾರ ಕಂಬದ ಸರ್ಕಲ್‌ನಿಂದ ಆರಂಭವಾಗುವ ಈ ರೋಡ್ ಷೋ, ಬಾರ್ ಲೈನ್ ರಸ್ತೆ, ಛಲವಾದಿ ಕೇರಿ, ಎಂ.ಬಿ.ಕೇರಿ. ಒಕ್ಕಲಿಗರ ಪೇಟೆ, ಕಾಯಿಪೇಟೆ, ಸ್ವಾಗೇರ ಪೇಟೆ, ಸ್ಟಾರ್ ನಾಗಪ್ಪನವರ ಮನೆ ಮುಂಭಾಗದಿಂದ ಜನತಾ ವಿದ್ಯಾಲಯ, ಜಾಲಿನಗರದ ಮೂಲಕ ಹೊಂಡದ ಸರ್ಕಲ್( ರಾಜವೀರ ಮದಕರಿ ನಾಯಕ ವೃತ್ತ) ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ದೊಡ್ಡಪೇಟೆ ಗಣೇಶ ದೇವಸ್ಥಾನದವರೆಗೂ ನಡೆಯಲಿದೆ.

ಈ ರೋಡ್ ಷೋನಲ್ಲಿ ಮುಖಂಡರುಗಳಾದ ಮಹಾಪೌರರಾದ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮಾಜಿ ಮೇಯರ್ ಅನಿತಾಬಾಯಿ, ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ್, ದೂಡಾ ಮಾಜಿ ಅಧ್ಯಕ್ಷ ಮಾಲತೇಶ್ ರಾವ್, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಮಾಜಿ ಉಪಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಮಾಜಿ ಸದಸ್ಯ ಬಾಬುರಾವ್ ಸಾಳಂಕಿ, ವಾರ್ಡ್ ಅಧ್ಯಕ್ಷರುಗಳಾದ ಪರಮೇಶ್, ಶಂಭು, ವಿಶ್ವನಾಥ, ಡಿಶ್ ಮಂಜುನಾಥ್, ಸತೀಶ್ ಪಾಲ್ಗೊಳ್ಳುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್‌ ಪೈಲ್ವಾನ್ ತಿಳಿಸಿದ್ದಾರೆ.

error: Content is protected !!