ಅಧಿಕಾರದಲ್ಲಿದ್ದವರು ಮಾಯಕೊಂಡಕ್ಕೆ ಕೈಗಾರಿಕೆ, ಶಿಕ್ಷಣ ಸಂಸ್ಥೆ ಯಾಕೆ ತರಲಿಲ್ಲ ?

ಅಧಿಕಾರದಲ್ಲಿದ್ದವರು ಮಾಯಕೊಂಡಕ್ಕೆ  ಕೈಗಾರಿಕೆ, ಶಿಕ್ಷಣ ಸಂಸ್ಥೆ ಯಾಕೆ ತರಲಿಲ್ಲ ?

ಮಾಯಕೊಂಡ ಕ್ಷೇತ್ರದ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಪ್ರಶ್ನೆ

ದಾವಣಗೆರೆ, ಏ. 30 – ಮಾಯಕೊಂಡ ಕ್ಷೇತ್ರಕ್ಕೆ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಯಾಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದವರು ಜನಸೇವೆ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪ್ರಶ್ನಿಸಿದರು. 

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಳಹುಣಸೆ, ಹಿರೇತೊಗಲೇರಿ, ಚಿಕ್ಕತೊಗಲೇರಿ, ಅತ್ತಿಗೆರೆ, ರಾಮಗೊಂಡನಹಳ್ಳಿ, ದ್ಯಾಮೇನಹಳ್ಳಿ, ಕಂದಗಲ್ಲು, ಮಾಯಕೊಂಡ ಸೇರಿದಂತೆ ಇತರೆ ಗ್ರಾಮಗಳಲ್ಲಿ ನಡೆಸಿದ ಪ್ರಚಾರದಲ್ಲಿ ಅವರು ಮಾತನಾಡಿದರು.

ಮಾಯಕೊಂಡ ಕ್ಷೇತ್ರವು ಇಷ್ಟೊತ್ತಿಗೆ ಅಭಿವೃದ್ಧಿಯಾಗಿರಬೇಕಿತ್ತು. ಜನರಿಗೆ ಉದ್ಯೋಗ ನೀಡುವಂಥ ಕೈಗಾರಿಕೆಗಳು ಬಂದಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂಥ ಶಿಕ್ಷಣ ಸಂಸ್ಥೆಗಳು ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಆಗಿಲ್ಲ ಎಂದೆನಿಸುತ್ತದೆ ಎಂದರು. 

ಇಷ್ಟವಿಲ್ಲದೇ, ಅಭಿಪ್ರಾಯಕ್ಕೆ ವಿರೋಧವಾಗಿ ಯಾರೋ ಟಿಕೆಟ್ ತರುತ್ತಾರೆ. ನಾನು ಕಾಂಗ್ರೆಸ್, ಬಿಜೆಪಿಯಿಂದಲೂ ಬಂದಿಲ್ಲ. ಸ್ವಾಭಿಮಾನಿ ಅಭ್ಯರ್ಥಿ ಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಬಡವರು, ಹಿಂದುಳಿದವರು, ಹಳ್ಳಿಯಿಂದ ಬಂದವರು ಎಂಎಲ್ಎ, ಎಂಪಿ ಆಗುವುದು ಅಷ್ಟು ಸುಲಭವಿಲ್ಲ. ನಮ್ಮನ್ನು ಬೆಳೆಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ನಮ್ಮನ್ನು ಬಳಸಿಕೊಂಡು ಜನರಿಂದ ಮತ ಪಡೆದು ಅವರು ಬೆಳೆಯುತ್ತಾರೆಯೇ ಹೊರತು ವಾಪಸ್ ನಿಮಗೇನೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಹಳ್ಳಿ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ರಾಜಕಾರಣಿಗಳ ಮಕ್ಕಳು ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಓದುತ್ತಾರೆ. ಒಳ್ಳೆಯ ಶಿಕ್ಷಣ ಸಿಕ್ಕರೆ ಬಡವರ ಮಕ್ಕಳು ಯಾಕೆ ಐಎಎಸ್ ಅಧಿಕಾರಿಗಳಾಗುವುದಿಲ್ಲ ಎಂದು ನೀವೇ ಯೋಚಿಸಿ ಎಂದು ಕರೆ ನೀಡಿದರು. 

ಶಿಕ್ಷಣ ಕ್ಷೇತ್ರದಿಂದ ಬಂದವರು, ಶಿಕ್ಷಣ ಪ್ರೇಮಿ ಗಳು ರಾಜಕಾರಣಕ್ಕೆ ಬರಬೇಕು. ಡಿಪ್ಲೋಮೊ, ಐಟಿಐ ಓದಿ ಮನೆಯಲ್ಲಿದ್ದಾರೆ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಎಂ. ಸಿದ್ದೇಶ್ವರ ಕುಟುಂಬದವರು ಅಧಿಕಾರದಲ್ಲಿ ದ್ದರೂ ಲಕ್ಷಾಂತರ ಯುವಕರು ಜಿಲ್ಲೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗಾವಕಾಶ ನೀಡಲು ಸಾಧ್ಯವಾಗಿಲ್ಲ. ಅವರ ಸ್ವಂತ ಕಾರ್ಖಾನೆ ಗಳಲ್ಲಿ ಏಳರಿಂದ ಎಂಟು ಸಾವಿರ ರೂ. ಸಂಬಳ ನೀಡಿ ಕೆಲಸ ತೆಗೆದುಕೊಳ್ಳು ತ್ತಿದ್ದಾರೆ. ಶ್ರೀಮಂತರು ಶ್ರೀಮಂತ ರಾಗುತ್ತಿದ್ದಾರೆ, ಬಡವರು ಬಡವರಾಗು ತ್ತಿದ್ದಾರೆ. ಲೋಕಸಭೆಯಲ್ಲಿ ನಿಮ್ಮ ಪರವಾಗಿ ಮಾತನಾಡದಿರುವುದು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದರು. 

ಅತ್ಯಂತ ಹೆಚ್ಚಿನ ಪ್ರಚಂಡ ಬಹುಮತದಿಂದ ನನ್ನನ್ನು ಗೆಲ್ಲಿಸಿದರೆ ಪ್ರಜಾಪ್ರಭುತ್ವದ ಗೆಲುವಾಗುತ್ತದೆ. ಸಂವಿಧಾನ ಜೀವಂತವಾಗಿದೆ, ಆಶಯಗಳು ಉಳಿದಿವೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಖುಷಿಯಾಗುತ್ತದೆ. ಸಂವಿಧಾನ ತಿದ್ದುಪಡಿ ಮಾಡಿ ತಿರುಚಲು ಬಿಡಬಾರದು ಎಂದು ಹೇಳಿದರು. 

error: Content is protected !!