ಸಾಣೇಹಳ್ಳಿಯಲ್ಲಿ ಇಂದು `ವಚನ ಸಂವಿಧಾನ’ ಬಿಡುಗಡೆ

ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಇಂದು ಬೆಳಿಗ್ಗೆ 10-30ರಿಂದ   ಬಸವಣ್ಣನವರ ಬಹುಮುಖ ವ್ಯಕ್ತಿತ್ವ ಕುರಿತಂತೆ, ಕರ್ನಾಟ ಕದ 30  ಜನ ಚಿಂತಕರು ವಚನಗಳನ್ನಾಧರಿಸಿ ಬರೆದಿರುವ `ವಚನ ಸಂವಿಧಾನ’ ಕೃತಿಯ ಲೋಕಾರ್ಪಣೆ ಮಾಡಲಾಗುವುದು ಎಂದು ಶ್ರೀ ಶಿವಕುಮಾರ ಕಲಾ ಸಂಘದ ಪ್ರಕಟಣೆ ತಿಳಿಸಿದೆ. ಕೃತಿಯ ಸಂಪಾದಕರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸುವರು. ಸಾನ್ನಿಧ್ಯವನ್ನು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಡಾ. ಜಗದ್ಗುರು ಗಂಗಾದೇವಿ ಮಾತಾಜಿ ವಹಿಸುವರು. 

ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕೃತಿ ಲೋಕಾರ್ಪಣೆ ಮಾಡುವರು. ಶ್ರೀ ಶರಶ್ಚಂದ್ರ ಮಹಾಸ್ವಾಮಿಗಳು ಮತ್ತು ಡಾ. ಸಬಿತಾ ಬನ್ನಾಡಿ ಗ್ರಂಥಾವಲೋಕನ ಮಾಡುವರು.

ಗ್ರಂಥದ ವಿವಿಧ ಲೇಖಕರು ತಮ್ಮ ಬರಹಗಳ ಸಾರ ರೂಪದ ವಿಷಯ ಮಂಡಿಸುವರು.`ವಚನ ಸಂವಿಧಾನ’ ಅನುಸರಣಾ ಕ್ರಮಗಳ ಕುರಿತಂತೆ 50ಕ್ಕೂ ಹೆಚ್ಚು ಸ್ವಾಮೀಜಿಯವರು ಸಂವಾದ ನಡೆಸುವರು.

`ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎನ್ನುವುದನ್ನು ಸಾಂಕೇತಿಕ ವಾಗಿಸಿಕೊಂಡು ಮಠಗಳು, ಸಾಹಿತಿಗಳು, ಸರ್ಕಾರ ಮುಂದೇನು ಮಾಡಬಹುದು ಎನ್ನುವ ಬಗ್ಗೆ ಮಹತ್ವದ ಚಿಂತನ-ಮಂಥನ ನಡೆಯಲಿದೆ. 

error: Content is protected !!