ಕೊರೊನಾ ತಾಂಡವವಾಡುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಕ್ಷೇತ್ರದ ಪಾತ್ರ ಮಹತ್ವದ್ದು. ಆ ಕಾರಣಕ್ಕಾಗಿಯೇ ವೈದ್ಯರನ್ನು ಕೊರೊನಾ ವಾರಿಯರ್ಸ್ ಎಂದು ಹೂ ಮಳೆ ಸುರಿಸಲಾಗಿತ್ತು.
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಜಿಇಸಿಎಲ್ ಯೋಜನೆ
ಕುಸಿತ ಕಂಡ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಚಟುವಟಿಕೆ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಯೋಜನೆ ಜಾರಿಗೆ ತಂದಿದ್ದು ಜಿಲ್ಲೆಯ ಎಲ್ಲ ಎಂಎಸ್ಎಂಇ ಗಳು ಸದ್ಬಳಕೆ ಮಾಡಿಕೊಳ್ಳಿ.
ಜಿಲ್ಲೆಯಲ್ಲಿ 16 ಪಾಸಿಟಿವ್, 3 ಬಿಡುಗಡೆ
ಜಿಲ್ಲೆಯಲ್ಲಿ ಮಂಗಳವಾರ ಮೂರು ಕೊರೊನಾ ವಾರಿಯರ್ ಗಳೂ ಸೇರಿದಂತೆ 16 ಜನರಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದೆ. ಇದೇ ದಿನದಂದು ಚನ್ನಗಿರಿಯ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ವಾರಿಯರ್ಗಳೇ ಮುಖಾಮುಖಿ !
ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಜೆಎಂ ವೈದ್ಯ ಕೀಯ ಕಾಲೇಜಿನ ಪಿ.ಜಿ. ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ವಿಷಯ ಕೊರೊನಾ ವಾರಿಯರ್ಸ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
ಏಳು ಬಣ್ಣ ಒಂದೇ ಮಾಡೋ ನೇಸರನು ಮೆಲ್ಲ ಮೆಲ್ಲ ಬಾನೊಳಕೆ ಜಾರುತಿಹನು…
ದಾವಣಗೆರೆ ಸಮೀಪದ ಬಾತಿ ಗುಡ್ಡದ ಹಿಂಭಾಗದಿಂದ ಮಂಗಳವಾರ ಸಂಜೆ ಕೊಟ್ರಪ್ಪ ಎರೇಸೀಮಿ ಅವರು ಸೆರೆ ಹಿಡಿದ 'ಸೂರ್ಯಾಸ್ತ'.
ಹರಿಹರದಲ್ಲಿ ನಾಳೆ ಬಸವೇಶ್ವರ ಜಯಂತಿ, ಎತ್ತುಗಳ ಮೆರವಣಿಗೆ
ಹರಿಹರ : ಹೊಸಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಯುಕ್ತ ನಾಡಿದ್ದು ದಿನಾಂಕ 10ರ ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಮತ್ತು ಉತ್ಸವ ಮೂರ್ತಿ ಬೆಳ್ಳಿ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯುವುದು.
ಆಸ್ತಿಗಾಗಿ ವೃದ್ಧೆಯ ಕೊಲೆ : ಘಟನೆ ನಡೆದ 24 ಗಂಟೆಯಲ್ಲೇ ಆರು ಜನರ ಬಂಧನ
ವೃದ್ದೆಯನ್ನು ನೇಣು ಬಿಗಿದು ಕೊಲೆ ಮಾಡಿ, ಸುಟ್ಟು ಹಾಕಿದ ಆರೋಪದ ಮೇಲೆ ಕಾರ್ತಿಕ, ಸಂದೀಪ, ತೇಜಸ್ವಿನಿ, ಮಹೇ ಶಪ್ಪ, ನಾಗರಾಜ, ಶಿವು, ವಿವೇಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಗೌಪ್ಯ ಮತದಾನ ಉಲ್ಲಂಘಿಸಿದ ಆರೋಪದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆಗ್ರಹಿಸಿದರು.
ನಗರದ ಕಾಯಿಪೇಟೆಯಲ್ಲಿ ಇಂದಿನಿಂದ ಬಸವೇಶ್ವರ ಜಯಂತ್ಯೋತ್ಸವ
ಕಾಯಿಪೇಟೆಯ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ. ಇಂದು ಪ್ರಾತಃಕಾಲ ಶ್ರೀ ಬಸವೇಶ್ವರ ಪಾದಕ್ಕೆ ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ.
12ರಂದು ನಗರದಲ್ಲಿ ಕವಿಗೋಷ್ಠಿ
ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯಿಂದ ಇದೇ ದಿನಾಂಕ 12ರ ಭಾನು ವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.
ನಗರದ ದೊಡ್ಡಪೇಟೆಯಲ್ಲಿ ಇಂದಿನಿಂದ ಬಸವ ಜಯಂತ್ಯೋತ್ಸವ
ದೊಡ್ಡಪೇಟೆಯ ಬಸವ ಮಂಟಪದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.
ಸರಸ್ವತಿ ಬಡಾವಣೆಯಲ್ಲಿ ಬಸವ ಜಯಂತಿ
ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತ್ಯೋತ್ಸವವನ್ನು ಬಸವ ಮಹಾಮನೆ, ಬಸವ ಬಳಗ, ಸರಸ್ವತಿ ಬಡಾವಣೆಯಲ್ಲಿ ಎ.ಹೆಚ್. ಹುಚ್ಚಪ್ಪ ಗುರುಗಳ ಅಧ್ಯಕ್ಷತೆಯಲ್ಲಿ ಮೊದಲಿಗೆ ಧ್ವಜಾರೋಹಣದೊಂದಿಗೆ ಪ್ರಾರಂಭ ಮಾಡಲಾಯಿತು.
ಹೆೊನ್ನಾಳಿಯಲ್ಲಿಂದು ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್ ಕೌಲಾಪೂರೆ ಅವರು ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಬಸವ ಜಯಂತಿ : ನಗರದಲ್ಲಿಂದು ಪ್ರಭಾತ್ಪೇರಿ
ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡುತ್ತಿದೆ.
ಲೋಕಸಭಾ ಮತದಾನಕ್ಕಾಗಿ ವಿದೇಶದಿಂದ ಬಂದ ಸನಾವುಲ್ಲಾ
ಮಲೇಬೆನ್ನೂರು : ನಿನ್ನೆ ನಡೆದ ಲೋಕಸಭಾ ಚುನಾವಣೆಗೆ ಸೌದಿ ಅರಬ್ನಿಂದ ಬಂದು ಮಲೇಬೆನ್ನೂರು ಪಟ್ಟಣದ 105ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಿವಿಲ್ ಎಂಜಿನಿಯರ್ ಸನಾವುಲ್ಲಾ ಖಾಜಿ ಅವರು ಬೆರಳು ತೋರಿಸಿ ಸಂಭ್ರಮಿಸಿದರು.
ನಗರದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದು ಸಂಜೆ 6.30ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಕಾರ್ಯದರ್ಶಿ ಜೆ. ರವಿಂದ್ರ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿ ನಾಡಿದ್ದು ಶ್ರೀ ಶಂಕರ ಭಗವತ್ಪಾದರ ಜಯಂತ್ಯೋತ್ಸವ
ಶ್ರೀ ಶಂಕರ ಸೇವಾ ಸಂಘದಿಂದ ಇದೇ ದಿನಾಂಕ 11 ಮತ್ತು 12 ರಂದು ಶ್ರೀ ಶಂಕರ ಭಗವತ್ಪಾದರ ಜಯಂತಿಯನ್ನು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತದಿಂದ ನಾಳೆ ಬಸವ ಜಯಂತಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಜಿಲ್ಲಾಡಳಿತದ ವತಿಯಿಂದ ನಾಡಿದ್ದು ದಿನಾಂಕ 10 ರ ಶುಕ್ರವಾರ ಬೆಳಿಗ್ಗೆ 11 ಕ್ಕೆ ಜಿಲ್ಲಾಡಳಿತ ಭವನದಲ್ಲಿ ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು
ಬಸವ ಜಯಂತಿ : ವಚನ ಗಾಯನ ಸ್ಪರ್ಧೆ
ಇಲ್ಲಿನ ವಿರಕ್ತಮಠ, ಲಿಂಗಾಯತ ತರುಣ ಸಂಘ ಚೌಕಿಪೇಟೆ ಹಾಗೂ ಬಸವಕೇಂದ್ರ, ವಿರಕ್ತಮಠ ದೊಡ್ಡಪೇಟೆ ಇವರ ಸಹಯೋಗದಲ್ಲಿ 112ನೇ ಬಸವ ಜಯಂತ್ಯೋತ್ಸವ ಹಾಗೂ 108ನೇ ವರ್ಷದ ಬಸವ ಪ್ರಭಾತ್ಪೇರಿ ಅಂಗವಾಗಿ ಶ್ರೀ ಬಸವ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಾಜಪೇಯಿ ಆರೋಗ್ಯಸ್ಥಿತಿ ತಿಳಿಸಲು ಕೇಂದ್ರಕ್ಕೆ ತೊಂದರೆ ಏನಿದೆ ? ಉಡುಪ
ವೈಯಕ್ತಿಕತೆ, ಗೌಪ್ಯತೆ ಇತ್ಯಾದಿ ಕಾರಣಗಳಿಂದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ವರ್ಷಗಳ ಆರೋಗ್ಯಸ್ಥಿತಿ, ವಿಚಾರ ಸ್ಥಿತಿಯನ್ನು ಆರ್ಟಿಐ ಮುಖಾಂತರವೂ ಉತ್ತರಿಸದೇ ರಹಸ್ಯವಾಗಿಡುವ ಉದ್ದೇಶವೇನು
ಜಿಲ್ಲಾಡಳಿತದಿಂದ 12ರಂದು ಶಂಕರಾಚಾರ್ಯ ಜಯಂತಿ
ಜಿಲ್ಲಾಡಳಿತ ವತಿಯಿಂದ ಇದೇ ದಿನಾಂಕ 12 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು
ಗಾಂಧಿನಗರದಲ್ಲಿ ಇಂದು ಹುಲಿಗೆಮ್ಮದೇವಿ ಜಾತ್ರೆ, ಭಜನೆ
ದಾವಣಗೆರೆ ಗಾಂಧಿ ನಗರದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಇಂದು - ನಾಳೆ ನಡೆಯಲಿದೆ.
ಹಲವು ಮತಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ
ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಕೆಲ ಮತಗಟ್ಟೆಗಳ ಮತಯಂತ್ರಗಳಲ್ಲಿ ತಾಂತ್ರಿಕ ಲೋಪ ಕಾಣಿಸಿಕೊಂಡಿದೆ.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಮತದಾನದ ಗೌಪ್ಯತೆ ಉಲ್ಲಂಘನೆ : ಎಸ್ಸೆಸ್ಸೆಂ ಆರೋಪ
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾನೂನು ಬಾಹಿರವಾಗಿ ತಮ್ಮ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಮತದಾನ ಮಾಡುವುದನ್ನು ನೋಡಿದ್ದಾರೆ ಹಾಗೂ ಇಂಥದೇ ಪಕ್ಷಕ್ಕೆ ಮತದಾನ ಮಾಡುವಂತೆ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಕ್ಷೇಪಿಸಿದ್ದಾರೆ.
ಗಂಗನರಸಿಯಲ್ಲಿ ಇಂದು ಅಕ್ಷಯ ತದಿಗೆ ಅಮಾವಾಸ್ಯೆ
ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ಇಂದು ಬೆಳಿಗ್ಗೆ 11ಕ್ಕೆ ನಡೆಯಲಿವೆ.
ಮತ ಚಲಾಯಿಸಿದವರಿಗೆ ಉಚಿತ ಕಿವಿ, ಮೂಗು, ಗಂಟಲು ತಪಾಸಣೆ
ದಾವಣಗೆರೆಯ ಡಾ.ಎ.ಎಂ. ಶಿವಕು ಮಾರ್ ಅವರ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆಯಲ್ಲಿ ಇಂದಿನಿಂದ ನಾಲ್ಕು ದಿನ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿ ಸಿದವರಿಗೆ ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ತಪಾಸಣಾ ನಡೆಯಲಿದೆ.
ಜಗಳೂರು : ಒಂದು ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ
ಜಗಳೂರು : ವಿಧಾನಸಭಾ ಕ್ಷೇತ್ರ 263 ಮತಗಟ್ಟೆ ವ್ಯಾಪ್ತಿಯಲ್ಲಿ ನಡೆದ ಲೋಕಸಭಾ ಚುನಾವಣೆ ಶಾಂತಿಯುತವಾಗಿದ್ದು ಯಾವುದೇ ಹಿತಕರ ಘಟನೆಗಳು ವರದಿಯಾಗಿಲ್ಲ.
ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಖಚಿತ: ಶಾಸಕ ಬಸವಂತಪ್ಪ ವಿಶ್ವಾಸ
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಒಲವು ತೋರಿದ್ದು, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವು ಖಚಿತವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಸವ ಜಯಂತಿ : ನಗರದಲ್ಲಿ ಇಂದು ಪ್ರಭಾತ್ಪೇರಿ
ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.
ಜಿಗಳಿ : ಗೆಲುವಿನ ವಿಶ್ವಾಸದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್
ಮಲೇಬೆನ್ನೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿ ಗಾಗಿ ಕಾಂಗ್ರೆಸ್ ಪಕ್ಷದ ಮುಖಂ ಡರು, ಕಾರ್ಯಕರ್ತರು, ಅಭಿ ಮಾನಿಗಳು ನಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದು, ಅವರಿಗೆ ನಾನು ಚಿರಋಣಿಯಾಗಿ ದ್ದೇನೆಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಪ್ರಭಾ ಭಾರೀ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ
ಹೊನ್ನಾಳಿ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅತೀ ಹೆಚ್ಚಿನ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಅರಕೆರೆ ಮಧುಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಭಾ ಎಸ್ಸೆಸ್ಸೆಂ ಗೆಲುವಿನ ಲೆಕ್ಕಾಚಾರದಲ್ಲಿ ಶಾಸಕ ಬಸವಂತಪ್ಪ
ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದ ಜನರ ಬಳಿ ತೆರಳಿ ಮತ ಬೇಟೆಯಲ್ಲಿ ತೊಡಗಿದ್ದ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಬುಧವಾರ ವಿಶ್ರಾಂತಿಯ ಮೊರೆಯಲ್ಲೂ ಪಕ್ಷದ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಹರಪನಹಳ್ಳಿ : 73ರ ಸಂಭ್ರಮದಲ್ಲಿ ಸಂಸದ ವೈ.ದೇವೇಂದ್ರಪ್ಪ
ಹರಪನಹಳ್ಳಿ : ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪನವರ 73ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ 12ರಂದು ಬೀಜ ವೈಭವ
ಬೀಜ ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ ಜೀವನಾಡಿ. ಸಾವಿರಾರು ವರ್ಷಗಳಿಂದ ಬೀಜ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜೊತೆಯಾಗಿ ಬೆಸೆದುಕೊಂಡು ಬಂದಿದೆ.
ಮೂಢನಂಬಿಕೆ, ಕಂದಾಚಾರದಿಂದ ದೂರವಿರಿ
ಸಾಣೇಹಳ್ಳಿ : ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು, ಪಾರದರ್ಶಕವಾಗಿ ಸದಾ ಕಾಯಕಶೀಲರಾಗಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಸಮ ಸಮಾಜದ ಪಿತಾಮಹ ವಿಶ್ವಗುರು ಬಸವಣ್ಣ
ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ ಮಾನವತಾವಾದಿ ಎಂದರೆ ಅದು 12ನೇ ಶತಮಾನದ ಬಸವಣ್ಣನವರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಭೂ ಫಲವತ್ತತೆ ಕುಗ್ಗಲು ರಾಸಾಯನಿಕ ಬಳಕೆ ಕಾರಣ
ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಸಿದರೆ ಭೂಮಿಯ ಫಲವತ್ತತೆ ಕುಗ್ಗುವ ಜತೆಗೆ ಪರಿಸರದಲ್ಲಿನ ಉಪಯುಕ್ತ ಕೀಟಗಳ ಸಂತತಿ ನಾಶವಾಗುತ್ತದೆ ಎಂದು ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.
ವೈದ್ಯ ಸಮೂಹಕ್ಕೆ ಹೊಸ ಆವಿಷ್ಕಾರಗಳ ಅರಿವು ಬೇಕು : ಡಾ. ಶುಕ್ಲಾ ಶೆಟ್ಟಿ
ವೈದ್ಯಕೀಯ ಸಮುದಾಯಕ್ಕೆ ಹೊಸ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಿದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ
ಡಾ. ಶುಕ್ಲಾ ಶೆಟ್ಟಿ ಹೇಳಿದರು.
ಅಕ್ಷಯ ತದಿಗಿ ಅಮಾವಾಸ್ಯೆ ಕೊಟ್ಟೂರಿನಲ್ಲಿ ಭಕ್ತರ ದಂಡು
ಕೊಟ್ಟೂರು : ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಅಕ್ಷಯತದಿಗಿ ಅಮಾವಾಸ್ಯೆ ನಿಮಿತ್ತ ಬುಧವಾರ ಭಕ್ತರು ದಂಡು ದಂಡಾಗಿ ಆಗಮಿಸಿ, ಬಿರು ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಪಡೆದರು.
ಶಿವಮೊಗ್ಗದಲ್ಲಿ ಜೋಡಿ ಹತ್ಯೆ
ಶಿವಮೊಗ್ಗ : ಇಲ್ಲಿನ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಬುಧವಾರ ಹಾಡಹಗಲೇ ಇಬ್ಬರು ರೌಡಿಶೀಟರ್ಗಳನ್ನು ನಡುರಸ್ತೆಯಲ್ಲಿ ಹತ್ಯೆಗೈದ ಘಟನೆಯೊಂದು ನಡೆದಿದೆ.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಚುನಾವಣಾ ಸಿಬ್ಬಂದಿಗಳು ಚುನಾವಣಾ ಪರ್ವದಲ್ಲಿ ಭಾಗಿಯಾಗಿ ನನ್ನ ಮತ, ನನ್ನ ಹಕ್ಕು ಚಲಾಯಿಸುವ ಮೂಲಕ ಸೆಲ್ಫಿಯಲ್ಲಿ ಒಂದಾಗಿ ಸಂತೋಷ ಹಂಚಿಕೊಂಡಿದ್ದಾರೆ.
ಮಲೇಬೆನ್ನೂರಿನಲ್ಲಿ ಶೇ. 80.13 ಶಾಂತಿಯುತ ಮತದಾನ
ಮಲೇಬೆನ್ನೂರು : ಮಂಗಳವಾರ ನಡೆದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಪೂರ್ಣ ಶಾಂತಿಯುತವಾಗಿತ್ತು.
ರಾಣೇಬೆನ್ನೂರು : ಅಲೆಮಾರಿಗಳಲ್ಲಿ ಮತ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ವಿಫಲ
ರಾಣೇಬೆನ್ನೂರು : ಜಿಲ್ಲಾ ಸ್ವೀಪ್ ಸಮಿತಿಯು ಗುಳೇ ಬಂದ ಹೆಳವರು ಮತ್ತು ಅಲೆಮಾರಿ ಗಳಿಗೆ ಮತದಾನದ ಅರಿವು ಮೂಡಿಸದೇ ಇರುವುದ ರಿಂದ ಈ ಜನಾಂಗ ಮತದಾನದಿಂದ ವಂಚಿತರಾಗಿದ್ದಾರೆ
ಕೊನೆಗೂ ಮತಭಾಗ್ಯ ಪಡೆದ ಅಮೆರಿಕದ ಮತದಾರ
ಅಮೆರಿಕದ ಡೆಲ್ಲಾಸ್ನಲ್ಲಿರುವ ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಅವರು ಈ ಬಾರಿ ಮತದಾನ ಮಾಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಗುಡಗೂರಿನಲ್ಲಿ ಕೋಳಿವಾಡ ಮತ ಚಲಾವಣೆ
ರಾಣೇಬೆನ್ನೂರು : ಮಗ ಶಾಸಕ ಪ್ರಕಾಶ ಕೋಳಿವಾಡ, ಸೊಸೆ ಪೂರ್ಣಿಮಾ ಸೇರಿದಂತೆ ಮಾವ, ಅಳಿಯ, ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ವಿಧಾನಸಭೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು ತಮ್ಮ ಹುಟ್ಟೂರು, ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿಂದು ಮತ ಚಲಾಯಿಸಿದರು.
ಹೂವಿನ ಸಸಿ ನೀಡಿ, ಮತಗಟ್ಟೆಗೆ ಆಹ್ವಾನ
ಚನ್ನಗಿರಿ : ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಇಲ್ಲಿನ ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹೂವಿನ ಸಸಿಗಳನ್ನು ನೀಡುವ ಮೂಲಕ ಮತಗಟ್ಟೆಗೆ ಬರಮಾಡಿಕೊಂಡು ಬೀಳ್ಕೊಡಲಾಯಿತು.
ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ
ಹರಪನಹಳ್ಳಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮತದಾರರಿಗೆ ಮುಸ್ಲಿಂ ಯೂತ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ತಂಪಾದ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಮಾಹಿತಿ
ಸಾರ್ವತ್ರಿಕ ಲೋಕಸಭಾ ಚುನಾವಣೆಯಂದು ದಾವಣಗೆರೆ ನಗರದ ವಿವಿಧ ಮತದಾನ ಕೇಂದ್ರಗಳಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಯೋವೃದ್ಧರಲ್ಲಿ ಮತದಾನದ ಉತ್ಸಾಹ
ಮನೆಯಲ್ಲಿ ಮತದಾನದ ಅವಕಾಶವಿದ್ದರೂ, ಹಲವಾರು ವಯೋ ವೃದ್ಧರು ಮತಗಟ್ಟೆಗಳಿಗೇ ಬಂದು ಉತ್ಸಾಹದಿಂದ ಮತ ಚಲಾಯಿಸಿದರು.
ಪತ್ರಕರ್ತ ಕೆ. ಚಂದ್ರಣ್ಣ ಕುಟುಂಬದ 38 ಸದಸ್ಯರ ಮತದಾನ
ನಗರದ ಎಂ.ಸಿ.ಸಿ. `ಎ' ಬ್ಲಾಕ್ ಬಳಿಯ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ ಹಾಗೂ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಸಹೋ ದರರು, ಸಹೋದರಿಯರು ಕುಟುಂಬ ವರ್ಗದವರು ಮಕ್ಕಳು ಸೇರಿದಂತೆ ಸುಮಾರು 38 ಜನರ ಒಟ್ಟು ಕುಟುಂಬದ ಸದಸ್ಯರು ಇಂದು ಮತದಾನ ಮಾಡಿದರು.
ಹೊನ್ನಾಳಿಯಲ್ಲಿ ಮತಯಂತ್ರ ದೋಷ ಮತ ವಂಚಿತ 10 ಮತದಾರರು
ಹೊನ್ನಾಳಿ : ತಾಲ್ಲೂಕಿನ ಕಮ್ಮಾರಗಟ್ಟೆ ಮತ ಕೇಂದ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಮತಯಂತ್ರ ದೋಷದಿಂದ ಸಮಯವಿದೆ ಎಂದು ತಡವಾಗಿ ಬಂದ 10 ಮತದಾರರು ಮತದಾನದಿಂದ ವಂಚಿತರಾಗಿರುವುದಾಗಿ ತಿಳಿದು ಬಂದಿದೆ.
ಮತಗಟ್ಟೆ ಸಿಬ್ಬಂದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ
ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಧ್ಯಾಹ್ನ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಹರಿಹರದಲ್ಲಿ ಶಾಂತಿಯುತ 77.99 ರಷ್ಟು ಮತದಾನ
ಹರಿಹರ : ನಗರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 77-99 ರಷ್ಟು ಶಾಂತಿಯುತ ಮತದಾನವಾಗಿದೆ.
ಶಾಂತಿಯುತ ಲೋಕಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಜ್ಜು
ಜಗಳೂರು : ಮತಗಟ್ಟೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರಿ ಬಸ್ ಗಳ ಮೂಲಕ ತಮ್ಮನ್ನು ನಿಯೋಜಿಸಿರುವ ಮತಗಟ್ಟೆಗಳಿಗೆ ಮತ ಯಂತ್ರಗಳೊಂದಿಗೆ ತೆರಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ 110ನೇ ಸಂಸ್ಥಾಪನಾ ದಿನಾಚರಣೆ
ನಗರದ ಕನ್ನಡ ಕುವೆಂಪು ಭವನದಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆಯ ಸಂಸ್ಥಾಪನೆ ದಿನಾಚರಣೆ ಆಚರಿಸಲಾಯಿತು.
ಪ್ರಜ್ಞಾವಂತ ಮತದಾರ ಪ್ರಜಾಪ್ರಭುತ್ವದ ಯಶಸ್ಸಿನ ರೂವಾರಿ : ಬಿ. ವಾಮದೇವಪ್ಪ
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತ. ಇಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರ ತನ್ನ ಅಮೂಲ್ಯ ಮತ ಚಲಾವಣೆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ತುಂಬುತ್ತಾನೆ.