ಶಾಂತಿಯುತ ಲೋಕಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಜ್ಜು

ಶಾಂತಿಯುತ ಲೋಕಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಜ್ಜು

ಜಗಳೂರು, ಮೇ 6- ಮತಗಟ್ಟೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಸರ್ಕಾರಿ ಬಸ್ ಗಳ ಮೂಲಕ ತಮ್ಮನ್ನು ನಿಯೋಜಿಸಿರುವ ಮತಗಟ್ಟೆಗಳಿಗೆ ಮತ ಯಂತ್ರಗಳೊಂದಿಗೆ  ತೆರಳಿದರು.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 263 ಮತಗಟ್ಟೆಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗ ಳನ್ನು ಒದಗಿಸಿದೆ. ಇದರಲ್ಲಿ 5 ಸಖಿ ಮತಗಟ್ಟೆಗಳು, 1 ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ, 1 ಯುವಜನ ನಿರ್ವಹಣೆ ಮತಗಟ್ಟೆ, 1 ಸಾಂಪ್ರದಾಯಿಕ ಮತ ಗಟ್ಟೆಗಳನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು  ಪಂಚಾಯಿತಿ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಮತಗಟ್ಟೆಯ ಕಟ್ಟಡಗಳಲ್ಲಿ, ತಂಗುವ ಸಿಬ್ಬಂದಿಗಳಿಗೆ ಅಗತ್ಯ ಕುಡಿಯುವ ನೀರು ಶೌಚಾಲಯ, ಊಟದ ವ್ಯವಸ್ಥೆ ರಾಕ್ ಸೌಲಭ್ಯಗಳನ್ನು   ಕೈಗೊಂಡಿದೆ. 

ಸಹಾಯಕ ಚುನಾವಣಾಧಿಕಾರಿ ಶಿದ್ರಾಮ ವೈ ಮಾರಿ ಹಾಳ, ವೆಚ್ಚ  ವೀಕ್ಷಕರಾಗಿ ಪ್ರತಿಭಾ ಸಿಂಗ್ (IRS ಅಧಿ ಕಾರಿ), ಸಾಮಾನ್ಯ ವೀಕ್ಷಕರಾಗಿ ಲಕ್ಷ್ಮಿದೇವಿ (ಹಿರಿಯ IAS ಅಧಿಕಾರಿ) ಇವರ ಮೂಲಕ ಮತಗಟ್ಟೆಗಳ ಪರಿಶೀಲನೆ ನಡೆಸಿದರು.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 263 ಮತಗಟ್ಟೆಗಳಿದ್ದು,   1 ಅತಿ ಸೂಕ್ಷ್ಮ ಮತಗಟ್ಟೆ, 49 ಸೂಕ್ಷ್ಮ ಮತಗಟ್ಟೆ, 214 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 157 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ  1,00,046 ಪುರುಷ ಮತ್ತು ಮಹಿಳೆಯರು – 98,759 ಒಟ್ಟು  1,98,815 ಮತದಾರರಿದ್ದಾರೆ 10 ಮಂದಿ ತೃತೀಯ ಲಿಂಗಿಗಳಿದ್ದಾರೆ .

ಲೋಕಸಭಾ ಚುನಾವಣಾ ಸಂಬಂಧ 31 ಮುಂದಿ ಸೆಕ್ಟರ್ ಅಧಿಕಾರಿಗಳು, ಎಸ್‌ಎಸ್‌ಟಿ 5, ಎಫ್.ಎಸ್.ಟಿ 3, ವಿ.ವಿ.ಟಿ 1 ವಿ, ಎಸ್‌.ಟಿ 2, ಎ.ಎಲ್‌.ಎಂ.ಟಿ.ಎಸ್ 2 ಮಂದಿ ಅಧಿಕಾರಿಗಳನ್ನು ನೇಮಿಸಲಾಗಿದೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿ  ತಾತ್ಕಾಲಿಕವಾಗಿ ಭದ್ರತಾ ಕೊಠಡಿ ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮತಯಂತ್ರ ಗಳನ್ನು ವಿ.ವಿ.ಎಂ. ಮಿಷನ್‌ಗಳನ್ನು  ಭದ್ರವಾಗಿ ಇಡಲಾಗಿತ್ತು.  ಚುನಾವಣೆ ನಡೆಯುವ ಪ್ರಕ್ರಿಯೆಗಳನ್ನು 1232 ಚುನಾವಣಾ ಸಿಬ್ಬಂದಿಗಳು, ಪಿ.ಆರ್.ಓ – 308, ಎಪಿಆರ್ ಓ-308 , ಪಿ ಓ-616 ಚುನಾವಣಾ ಸಿಬ್ಬಂದಿಗಳು ಇಂದು  ನಿಗದಿತ ಮತ ಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ತೆರಳಿದರು. ಮರುದಿನ ನಾಳೆ  ಬೆಳಿಗ್ಗೆ 7  ಗಂಟೆ ಯಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.

error: Content is protected !!