ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಖಚಿತ: ಶಾಸಕ ಬಸವಂತಪ್ಪ ವಿಶ್ವಾಸ

ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಖಚಿತ: ಶಾಸಕ ಬಸವಂತಪ್ಪ ವಿಶ್ವಾಸ

ದಾವಣಗೆರೆ, ಮೇ 7-  ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಒಲವು ತೋರಿದ್ದು, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವು ಖಚಿತವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಆನಗೋಡು ಸರ್ಕಾರಿ ಶಾಲೆಯಲ್ಲಿ  ಮತ ಚಲಾಯಿಸಿ, ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಪರವಾಗಿ ಬೆಳಗ್ಗೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ  ಈ ನಿಟ್ಟಿನಲ್ಲಿ ಡಾ.ಪ್ರಭಾ ಅವರು ಗೆಲ್ಲುವುದು ನಿಶ್ಚಿತವಾಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದೂ ಅವರು ಹೇಳಿದರು.

error: Content is protected !!