ಆಸ್ತಿಗಾಗಿ ವೃದ್ಧೆಯ ಕೊಲೆ : ಘಟನೆ ನಡೆದ 24 ಗಂಟೆಯಲ್ಲೇ ಆರು ಜನರ ಬಂಧನ

ದಾವಣಗೆರೆ, ಮೇ 8- ವೃದ್ದೆಯನ್ನು ನೇಣು ಬಿಗಿದು ಕೊಲೆ ಮಾಡಿ, ಸುಟ್ಟು ಹಾಕಿದ  ಆರೋಪದ ಮೇಲೆ ಕಾರ್ತಿಕ, ಸಂದೀಪ, ತೇಜಸ್ವಿನಿ, ಮಹೇ ಶಪ್ಪ, ನಾಗರಾಜ, ಶಿವು, ವಿವೇಕ  ಎಂಬುವವರನ್ನು  ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ,  ವೃದ್ದೆಗೆ ಸೇರಿದ 13 ಲಕ್ಷ  ರೂ ಮೌಲ್ಯದ 217 ಗ್ರಾಂ ಬಂಗಾರದ ಆಭರಣಗಳನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಆಸ್ತಿಯ ವಿಚಾರಕ್ಕೆ  ಸಂಬಂಧಿಸಿದಂತೆ ಮೃತ ವೃದ್ಧೆ ಉಮಾದೇವಿಯನ್ನು   ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದಾರೆ ಎಂದು  ಪಂಚಪ್ಪ ಎಂಬುವರು  ದೂರು ನೀಡಿದ್ದರು. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ  ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ    ಪೊಲೀಸ್ ಇನ್ಸ್‌ಪಕ್ಟರ್ ಸುನಿಲ್‌ಕುಮಾರ್ ಹೆಚ್.ಎಸ್ ನೇತೃತ್ವದಲ್ಲಿ   ಪಿ.ಎಸ್.ಐ  ಸಾಗರ್ ಅತ್ತರ್‍ವಾಲಾ,  ಎ.ಎಸ್.ಐ ಈರಣ್ಣ ಹಾಗು  ಸಿಬ್ಬಂದಿ ಶ್ರೀನಿವಾಸ್, ರವಿ,  ಗೌರಮ್ಮ, ಷಣ್ಮುಖ, ಶಿವರಾಜ, ಮಂಜಪ್ಪ, ಗಿರೀಶ್ ಗೌಡ, ಹರೀಶ ನಾಯ್ಕ, ವತ್ಸಲ,  ರಾಘವೇಂದ್ರ ಶಾಂತರಾಜ್  ತಂಡವು, ಪ್ರಕರಣ ದಾಖಲಾಗಿ 24 ಗಂಟೆಯೊಳಗೆ  ಪ್ರಕರಣದ ಆರೋಪಿಗಳನ್ನು  ಬಂಧಿಸಿ   ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. 

error: Content is protected !!