ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಮಾಹಿತಿ

ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಮಾಹಿತಿ

ದಾವಣಗೆರೆ, ಮೇ 7- ಸಾರ್ವತ್ರಿಕ ಲೋಕಸಭಾ ಚುನಾವಣೆಯಂದು ದಾವಣಗೆರೆ ನಗರದ ವಿವಿಧ ಮತದಾನ ಕೇಂದ್ರಗಳಲ್ಲಿ  ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ, ಮಹಿಳಾ ದೌರ್ಜನ್ಯ, ಅಪ್ರಾಪ್ತರ ಮೇಲೆ ದೌರ್ಜನ್ಯ  ಅಪರಾಧ ಮತ್ತು ಕಾಯ್ದೆಗಳು, ಬಾಲಾಪರಾಧ ತಡೆ ಕಾಯ್ದೆ, ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ, ತುರ್ತು ಸಹಾಯವಾಣಿ 112  ಬಗ್ಗೆ ಜಾಗೃತಿ  ಹೀಗೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್ ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ನಗರದ ಹದಡಿ ರಸ್ತೆಯಲ್ಲಿ  ನೀರಾವರಿ ಇಲಾಖೆಯ  ಹತ್ತಿರ ಮತದಾನ ಕೇಂದ್ರದ ಬಳಿ  ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಅಪಘಾತದಲ್ಲಿ ಬೈಕ್ ಸವಾರ  ತೀವ್ರ ಗಾಯಗೊಂಡಿರುವ ಪ್ರಾತ್ಯಕ್ಷಿಕೆ ಮೂಲಕ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಗಳನ್ನು ಧರಿಸಬೇಕೆಂದು ಮತದಾನಕ್ಕೆ ಬಂದ ಮತದಾರರಿಗೆ ಜಾಗೃತಿ ಮೂಡಿಸಲಾಯಿತು.

ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!