ಬಸವ ಜಯಂತಿ : ವಚನ ಗಾಯನ ಸ್ಪರ್ಧೆ

ದಾವಣಗೆರೆ, ಮೇ 8- ಇಲ್ಲಿನ ವಿರಕ್ತಮಠ, ಲಿಂಗಾಯತ ತರುಣ ಸಂಘ ಚೌಕಿಪೇಟೆ ಹಾಗೂ ಬಸವಕೇಂದ್ರ, ವಿರಕ್ತಮಠ ದೊಡ್ಡಪೇಟೆ ಇವರ ಸಹಯೋಗದಲ್ಲಿ 112ನೇ ಬಸವ  ಜಯಂತ್ಯೋತ್ಸವ ಹಾಗೂ 108ನೇ ವರ್ಷದ ಬಸವ ಪ್ರಭಾತ್‌ಪೇರಿ ಅಂಗವಾಗಿ ಶ್ರೀ ಬಸವ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧಾ ವಿಜೇತರು : ಚಿಣ್ಣರ ವಿಭಾಗದಲ್ಲಿ ಋತ್ವಿಕ (ಪ್ರಥಮ), ನಾಗಲಕ್ಷ್ಮಿ (ದ್ವಿತೀಯ), ಜೀವಿತ ಬಿ.ವಿ. (ತೃತೀಯ),  ಪ್ರಾಥಮಿಕ ವಿಭಾಗದಲ್ಲಿ ಚಿರಸ್ವಿ (ಪ್ರಥಮ), ವೀರೇಶ್ ಕೊಂಡಜ್ಜಿ, ಆದ್ಯ (ದ್ವಿತೀಯ), ಶ್ರಾವಣಿ (ತೃತೀಯ), ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿವರಾಜ್ ಎನ್. ಮಾಳಿಗಿ (ಪ್ರಥಮ), ತ್ರಿವೇಣಿ ಚಿಟ್ಟೂರು (ದ್ವಿತೀಯ), ಬಸವ ಸಂದೇಶ್, ದಿನಕರ್ ಎಸ್.ಪಿ. (ತೃತೀಯ), ಪ್ರೌಢ ವಿಭಾಗದಲ್ಲಿ ಶ್ರೇಯ ಎಂ. ಪಟ್ಟೇದ (ಪ್ರಥಮ), ವಚನ ಎಸ್. (ದ್ವಿತೀಯ), ಸ್ವರೂಪ್ (ತೃತೀಯ) ಹಾಗೂ ಮಹಿಳಾ ವಿಭಾಗದಲ್ಲಿ ಸುನಂದ ಮಳಗಿ (ಪ್ರಥಮ), ಬಸವಾಂಬಿಕ (ದ್ವಿತೀಯ), ಶಿವಬಸಮ್ಮ (ತೃತೀಯ) ಬಹುಮಾನ ಪಡೆದಿರುತ್ತಾರೆ. ಸ್ಪರ್ಧಾ ವಿಜೇತರಿಗೆ ಬಸವ ಜಯಂತಿಯ ದಿನವಾದ ನಾಡಿದ್ದು ದಿನಾಂಕ 10ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ವಿರಕ್ತ ಮಠದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಲಿಂಗಾಯತ ತರುಣ ಸಂಘದ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ತಿಳಿಸಿದ್ದಾರೆ.

error: Content is protected !!