ಜಗಳೂರು : ಒಂದು ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ

ಜಗಳೂರು, ಮೇ 7 – ವಿಧಾನಸಭಾ ಕ್ಷೇತ್ರ 263 ಮತಗಟ್ಟೆ ವ್ಯಾಪ್ತಿಯಲ್ಲಿ ನಡೆದ ಲೋಕಸಭಾ ಚುನಾವಣೆ ಶಾಂತಿಯುತವಾಗಿದ್ದು ಯಾವುದೇ ಹಿತಕರ ಘಟನೆಗಳು ವರದಿಯಾಗಿಲ್ಲ.

ತಾಲ್ಲೂಕಿನ ಕ್ಯಾಸೇನ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೌರಿಪುರ ಹೊಸೂರ್ ಗ್ರಾಮದ ಸುಮಾರು 170ಕ್ಕೂ ಹೆಚ್ಚು ಮತದಾರ ರಿರುವ ಮತದಾನ ಬಹಿಷ್ಕರಿಸಿ ಪ್ರತಿಭಟಿಸಿದರು.

ತಾವು ವಾಸಿಸುವ ಜಾಗದ ಹಕ್ಕು ಪತ್ರ ನೀಡಲು ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. 

ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭ ವಾದಾಗ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್‌ ಇಟ್ನಾಳ್ ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂೂ ಪ್ರಯೋಜನವಾ ಗಿಲ್ಲ ಎನ್ನುತ್ತಾರೆ ಸತೀಶ್ ನಾರಪ್ಪ ಅಜ್ಜಣ್ಣ ಪಾಪಮ್ಮ. ಸಂಜೆ 5.30 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಜೂನ್ 30ರ ಒಳಗಾಗಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಕೊನೆ ಗಳಿಗೆಯಲ್ಲಿ ಮತಚಲಾಯಿಸಿದರು.

ಹಾಲಿ, ಮಾಜಿ ಶಾಸಕರಿಂದ ಮತದಾನ: ಶಾಸಕ ಬಿ. ದೇವೇಂದ್ರಪ್ಪ ಅವರು ತಮ್ಮ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಸ್ವಗ್ರಾಮ ಬಿದರಿಕೆರೆ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ  ಮತ ಚಲಾಯಿಸಿದರು ಮತ್ತು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ದಾವಣಗೆರೆ ವನಿತಾ ಸಮಾಜದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಗಮನ ಸೆಳೆದ ಮತಗಟ್ಟೆ: ತಾಲ್ಲೂಕಿನ ಮುಸ್ಟೂರು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಧ್ಯೇಯ ಆಧಾರಿತ ಮತಗಟ್ಟೆ ಪ್ರತ್ಯಕ್ಷಕ್ಕೆ ಜನರ ಗಮನ ಸೆಳೆಯಿತು.

ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಮತಗಟ್ಟೆಯಲ್ಲಿ ನಿರ್ಮಿಸಲಾಗಿದ್ದ ಮಾದರಿ ಜಲ ನಯನ ಪ್ರದೇಶ ಪ್ರಾತ್ಯಕ್ಷಿಕೆ ಅಂತರ್ಜಲ ಅಭಿವೃದ್ಧಿ ಹಾಗೂ ಜಲಾಯನ ಅಭಿವೃದ್ಧಿ ಜಲಾನಯನ ಪ್ರದೇಶ ಅಭಿವೃದ್ಧಿ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು. ಮತದಾರರು ಸೆಲ್ಫಿ ತೆಗೆದು ಸಂಭ್ರಮಿಸಿದರು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದರು.

ವಿಧಾನಸಭಾ ಕ್ಷೇತ್ರದಲ್ಲಿ 1,98,815 ಅದರಲ್ಲಿ 1,00,046 ಪುರುಷ ಮತದಾರರಿದ್ದಾರೆ. ಮಹಿಳೆಯರು 98,759 ಮತದಾರರಿದ್ದಾರೆ. 10 ಮಂದಿ ತೃತೀಯ ಲಿಂಗಿಗಳಿದ್ದಾರೆ. ಜಗಳೂರು ತಾಲ್ಲೂಕಿನ 263 ಮತಗಟ್ಟೆಗಳಲ್ಲಿ ಶಾಂತಿಯುತ ಮತ ದಾನ ನಡೆಯಿತು.

ತಾಲ್ಲೂಕಿನಲ್ಲಿ ಮತ ಗಟ್ಟೆ ಸಂಖ್ಯೆ 15, 112, 173, 195 ಮತಗಟ್ಟೆಗಳಲ್ಲಿ  ದುರಸ್ತಿಗೆ ಬಂದಂತಹ ವಿವಿ ಪ್ಯಾಟ್ ಮತ್ತು ಮತಗಟ್ಟೆ ಸಂಖ್ಯೆ 90ರಲ್ಲಿ ಕಂಟ್ರೋಲ್ ಯೂನಿಟ್ ಗಳನ್ನು ಬದಲಾಯಿಸಲಾಗಿದೆ. 

ಉಳಿದಂತೆ ಯಾವುದೇ ಇವಿಎಂ ಮತ್ತು ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಶಿದ್ರಾಮ ವೈ. ಮಾರಿಹಾಳ  ತಿಳಿಸಿದ್ದಾರೆ.

error: Content is protected !!