ವೈದ್ಯ ಸಮೂಹಕ್ಕೆ ಹೊಸ ಆವಿಷ್ಕಾರಗಳ ಅರಿವು ಬೇಕು : ಡಾ. ಶುಕ್ಲಾ ಶೆಟ್ಟಿ

ವೈದ್ಯ ಸಮೂಹಕ್ಕೆ ಹೊಸ ಆವಿಷ್ಕಾರಗಳ ಅರಿವು ಬೇಕು : ಡಾ. ಶುಕ್ಲಾ ಶೆಟ್ಟಿ

ದಾವಣಗೆರೆ, ಮೇ 8- ವೈದ್ಯಕೀಯ ಸಮುದಾಯಕ್ಕೆ ಹೊಸ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಿದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ
ಡಾ. ಶುಕ್ಲಾ ಶೆಟ್ಟಿ ಹೇಳಿದರು.

ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ಮತ್ತು ಮಕ್ಕಳ ವಿಭಾಗದ ಸಂಯುಕ್ತಾಶ್ರಯದಲ್ಲಿ ಇತ್ತೀಚೇಗೆ ನಡೆದ `ವಿಶ್ವ ಹಿಮೊಫಿಲಿಯಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಹಿಮೊಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಶೇ.50ರಷ್ಟು ವೈದ್ಯಕೀಯ ಕಾಲೇಜುಗಳಲ್ಲಿ ಸಮೂಹ ರಕ್ತ ರೋಗದ ಚಿಕಿತ್ಸಾ ಕೇಂದ್ರ ಸ್ಥಾಪಿಸಿದರೆ ಸಾವಿರಾರು ರಕ್ತಸ್ರಾವ ಮತ್ತು ವಿರಳ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದರು.

ಬಾಪೂಜಿ ಆರೋಗ್ಯ ಕೇಂದ್ರದ ನಿರ್ದೇಶಕ  ಡಾ. ಗುರು ಪ್ರಸಾದ್, ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ವರದೇಂದ್ರ ಕುಲಕರ್ಣಿ, ಪ್ರಾಧ್ಯಾಪಕರಾದ ಡಾ. ಮೂಗನ ಗೌಡ, ಡಾ.ಎಸ್.ಎಂ. ಸ್ಪೂರ್ತಿ,  ಡಾ. ಪ್ರೀತಿ, ನವಜಾತ ಶಿಶು ತಜ್ಞೆ ಡಾ. ಅಶ್ವಿನಿ, ಡಾ. ಸೋಮೇಶ್ವರ, ಡಾ. ಅರುಣ್, ಡಾ. ಸಂಗೀತ, ಡಾ. ನಾಗರೂಪ, ಡಾ. ಅಪೂರ್ವ, ಡಾ. ಸೌಮ್ಯಶ್ರೀ ಇದ್ದರು.

error: Content is protected !!