ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಜೆಎಂ ವೈದ್ಯ ಕೀಯ ಕಾಲೇಜಿನ ಪಿ.ಜಿ. ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ವಿಷಯ ಕೊರೊನಾ ವಾರಿಯರ್ಸ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
ಏಳು ಬಣ್ಣ ಒಂದೇ ಮಾಡೋ ನೇಸರನು ಮೆಲ್ಲ ಮೆಲ್ಲ ಬಾನೊಳಕೆ ಜಾರುತಿಹನು…
ದಾವಣಗೆರೆ ಸಮೀಪದ ಬಾತಿ ಗುಡ್ಡದ ಹಿಂಭಾಗದಿಂದ ಮಂಗಳವಾರ ಸಂಜೆ ಕೊಟ್ರಪ್ಪ ಎರೇಸೀಮಿ ಅವರು ಸೆರೆ ಹಿಡಿದ 'ಸೂರ್ಯಾಸ್ತ'.
300ರ ಗಡಿ ದಾಟಿದ ಕೊರೊನಾ
ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಜೆಎಂ ವೈದ್ಯ ಕೀಯ ಕಾಲೇಜಿನ ಪಿ.ಜಿ. ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ವಿಷಯ ಕೊರೊನಾ ವಾರಿಯರ್ಸ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
ಡಿಕೆಶಿ ಪದಗ್ರಹಣ : ಗ್ರಾ.ಪಂ.ಗಳಲ್ಲೂ ಕಾರ್ಯಕ್ರಮ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭದ ಜೊತೆ ಸ್ಥಳೀಯ ಮಟ್ಟದಲ್ಲೂ ಏಕಕಾಲಕ್ಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಹೇಳಿದರು.
ತೈಲ ಬೆಲೆ ಏರಿಕೆ ಖಂಡಿಸಿ ಜೋಡೆತ್ತಿನ ಬಂಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ತೈಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷವಾಗಿ 6 ಜೋಡೆತ್ತಿನ ಬಂಡಿಗಳಲ್ಲಿ ಸವಾರಿ ಮಾಡುವ ಮುಖೇನ ಕೇಂದ್ರ ಸರ್ಕಾರದ ವಿರುದ್ಧ ಇಂದು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಗಂಗನರಸಿಯಲ್ಲಿ ನಾಳೆ ಅಮಾವಾಸ್ಯೆ
ಹರಿಹರ : ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ನಾಡಿದ್ದು 8ರ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿವೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಳೆ ಅಕ್ಷಯ ಅಮಾವಾಸ್ಯೆ
ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯಕ್ತ ನಾಡಿದ್ದು ದಿನಾಂಕ 8ರ ಬುಧವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.
ಮತದಾನ ಮಾಡಿ ಬಹುಮಾನ ಗೆಲ್ಲಿ
ನಗರದ 42ನೇ ವಾರ್ಡಿನ ಮತದಾರರು, ಮತ ಚಲಾಯಿಸಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ನಗರದ ವಿಶ್ವ ಪೇಪರ್ ಸ್ಟಾಲ್ ಕಲ್ಪಿಸಿದೆ.
ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ : ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಗುತ್ತಿಗೆದಾರರೊಬ್ಬರಿಂದ 4 ಲಕ್ಷ ರೂ. ಲಂಚ ಪಡೆಯುವಾಗ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅಮಾವಾಸ್ಯೆ ಪೂಜೆ
ನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ನಾಳೆ ದಿನಾಂಕ 8ರ ಬುಧವಾರ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ
ಬಸವ ಜಯಂತಿ : ನಗರದಲ್ಲಿ ಇಂದು ಪ್ರಭಾತ್ಪೇರಿ
ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.
ತಾಪಮಾನ : ಮುನಿಸಿಪಲ್ ಕಾರ್ಮಿಕರ ಕೆಲಸದ ಅವಧಿ ಕಡಿತಕ್ಕೆ ಒತ್ತಾಯ
ಹೆಚ್ಚಿರುವ ತಾಪಮಾನ ಜನರ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಉಂಟು ಮಾಡುತ್ತಿದ್ದು, ರಾಜ್ಯದ ಮಹಾನಗರ, ನಗರ, ಪಟ್ಟಣಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಮುನಿಸಿಪಲ್ ಕಾರ್ಮಿಕರು, ಪೌರಕಾರ್ಮಿಕರು, ಕಸ ಸಾಗಾಣಿಕೆ ಮತ್ತಿತರರ ಕೆಲಸದ ಅವಧಿಯನ್ನು ಬದಲಿಸುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘವು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.
ನಗರದಲ್ಲಿ ಇಂದು ಮತದಾನ ಜಾಗೃತಿ ವೈದ್ಯಕೀಯ ಶಿಬಿರ
ಯುನಿಟಿ ಹೆಲ್ತ್ ಸೆಂಟರ್ನಲ್ಲಿ ಮತದಾನ ಜಾಗೃತಿ ವೈದ್ಯಕೀಯ ಶಿಬಿರವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಕಾಯಿಪೇಟೆಯಲ್ಲಿ 10ರಂದು ಬಸವ ಜಯಂತ್ಯೋತ್ಸವ
ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.
ಗಾಂಧಿನಗರದಲ್ಲಿ ನಾಳೆಯಿಂದ ಜಾತ್ರೆ
ಇಲ್ಲಿನ ಗಾಂಧಿ ನಗರದಲ್ಲಿ ನಾಡಿದ್ದು ದಿನಾಂಕ 8ರಿಂದ 10ರ ವರೆಗೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. 8ರ ಬೆಳಗ್ಗೆ 6ಕ್ಕೆ ಹರಿಹರದ ತುಂಗಭದ್ರಾ ನದಿಗೆ ದೇವಿಯು ಹೊಳೆ ಪೂಜೆಗೆ ಹೋಗಲಿದ್ದು, ಅಂದು ಸಂಜೆ 6ಕ್ಕೆ ದೇವಿಯ ಮೆರವಣಿಗೆ ನಡೆಯಲಿದೆ.
ನಗರದಲ್ಲಿ ನಾಳೆ ವೈದ್ಯಕೀಯ ಶಿಬಿರ
ಬಸವ ಜಯಂತಿ ಪ್ರಯುಕ್ತ ವೈದ್ಯಕೀಯ ಶಿಬಿರವನ್ನು ಬಸವ ಬಳಗ ಹಾಗೂ ಎಸ್.ಎಸ್. ನಾರಾಯಣ ಹೃದಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 8ರ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ.
ಮತದಾನ ಮಾಡಿದವರಿಗೆ ಉಚಿತ ತಪಾಸಣೆ
ನಗರದ ಡಾ.ಎ.ಎಂ. ಶಿವಕುಮಾರ್ ಅವರ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆಯಲ್ಲಿ ನಾಡಿದ್ದು ದಿನಾಂಕ 8ರಿಂದ 11ರ ವರೆಗೆ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ತಪಾಸಣೆ ನಡೆಯಲಿದೆ.
ಸಮಾಜದ ಶಾಂತಿ-ನೆಮ್ಮದಿಗಾಗಿ ಕಾಂಗ್ರೆಸ್ ಗೆಲ್ಲಿಸಲು ಡಿಬಿ ಕರೆ
ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸಮಾಜದ ಜನರ ಶಾಂತಿ ನೆಮ್ಮದಿಗಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮನವಿ ಮಾಡಿದರು.
`ಪ್ರಭಾ ಪ್ರಣಾಳಿಕೆ’ ಮೂಲಕ ಜನರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಪ್ರಾಮೀಸ್
ನನ್ನ ರಾಜಕೀಯದಲ್ಲಿ `ನನ್ನ ತತ್ವ ಪ್ರಜಾಪ್ರಭುತ್ವ' ಎಂಬ ತತ್ವವು ಜನರ ಸೇವೆ, ಸತ್ಯದ ಆಧಾರದ ಮೇಲೆ ಆಡಳಿತ ಮತ್ತು ನಾಗರಿಕರ ಕಲ್ಯಾಣಕ್ಕೆ ಆದ್ಯತೆ ನೀಡುವಂತಹ ತತ್ವಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಾನು ನಿಮ್ಮ ಮನ ತಲುಪಿದ್ದೇನೆ: ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
ಆತ್ಮೀಯ ಮತದಾರ ಬಂಧುಗಳೇ ನಾನು ಪ್ರತಿಯೊಬ್ಬರ ಮನೆ ತಲುಪುವುದಕ್ಕೆ ಆಗದೇ ಇರಬಹುದು. ಆದರೆ, ನಿಮ್ಮೆಲ್ಲರ ಮನ ತಲುಪಿದ್ದೇನೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಚುನಾವಣೆ ಬಳಿಕ ಎಲ್ಲರನ್ನೂ ಮತ್ತೊಮ್ಮೆ ಭೇಟಿಯಾಗುತ್ತೇನೆ
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ತಂದದ್ದು ಕಾಂಗ್ರೆಸ್
ಚನ್ನಗಿರಿ : ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು ನಾನು ಮತ್ತು ಮಾಡಾಳು ವಿರೂಪಾಕ್ಷಪ್ಪ ಎಂದು ಸಂತೇಬೆನ್ನೂರಿನಲ್ಲಿ ಹೇಳಿಕೆ ನೀಡಿರುವ ಸಂಸದ ಜಿ.ಎಂ ಸಿದ್ಧೇಶ್ವರ ಅವರು ಸುಳ್ಳಿನ ಸರದಾರ. ಇಂತಹ ಸುಳ್ಳುಗಳನ್ನು ಹೇಳಿಯೇ ನಾಲ್ಕು ಬಾರಿ ಗೆದ್ದಿರುವುದು
ಕಾಂಗ್ರೆಸ್ ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಮತ ನಿಡಿ
ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ವೋಟ್ ಹಾಕಿಸಿಕೊಳ್ಳಲು ಇಟ್ಟುಕೊಂಡಿದೆ. ಆದ್ದರಿಂದ ಇಸ್ಲಾಂನವರು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಅಭ್ಯರ್ಥಿ ತಸ್ಲಿಂ ಬಾನು ಹೇಳಿದರು.
ಮತದಾನ ಮಾಡಿ ಸೆಲ್ಫಿ ಕಳುಹಿಸಿ ವಿಶೇಷ ಬಹುಮಾನ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮತದಾನ ಮಾಡಿ ಶಾಹಿ ಹಚ್ಚಿದ ಎಡಗೈ ತೋರು ಬೆರಳು ತೋರಿಸುತ್ತಾ ಕನಿಷ್ಠ 20 ಜನರು ಗರಿಷ್ಠ 100 ಜನರು ಸೇರಿ ಸೆಲ್ಫಿ ತೆಗೆದು 9731016999 ಮೊಬೈಲ್ಗೆ ಕಳುಹಿಸಿ ಬಹುಮಾನ ಪಡೆಯಬಹುದಾಗಿದೆ.
ಹಣ, ಆಮಿಷಕ್ಕೆ ಮತ ಮಾರಿಕೊಳ್ಳಬೇಡಿ : ವಿನಯ್ ಕಳಕಳಿ
ಹರಿಹರ : ಲೋಕಸಭೆ ಚುನಾವಣೆ ಯಲ್ಲಿ ಹಣ, ಆಮಿಷವೊಡ್ಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಜನರು ಸ್ವಾಭಿಮಾನಿಗಳಾಗಿದ್ದು, ಸ್ವಾಭಿಮಾನಕ್ಕೆ ಮತ ಹಾಕಿ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಜನರ ಪರ ಇರುವ ಕಾಂಗ್ರೆಸ್ಗೆ ಮತ ನೀಡಿ
ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಕಾರ್ಯದರ್ಶಿಯಾಗಿ ನಾಯರಿ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಅಖಿಲ ಭಾರತ ಕಾರ್ಯದರ್ಶಿಯಾಗಿ ನಗರದ ಕೆ.ರಾಘವೇಂದ್ರ ನಾಯರಿ ಅವರು ನೇಮಕವಾಗಿದ್ದಾರೆ.
ನಗರಕ್ಕೆ ನಾಳೆ ಸಿಎಂ ಸಿದ್ದರಾಮಯ್ಯ
ನಗರದ ಬಾಪೂಜಿ ಸಮುದಾಯ ಭವನದಲ್ಲಿ ನಾಡಿದ್ದು ದಿನಾಂಕ 4ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ನಲ್ಲಿರುವ ಕುರುಬ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಸಮಾಜದ ಮುಖಂಡ ಶಿವಕುಮಾರ್ ಒಡೆಯರ್ ತಿಳಿಸಿದ್ದಾರೆ.
ಹರಹರ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಮಾಧುಸ್ವಾಮಿ ಪ್ರಚಾರ
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಇಂದು ಮತಯಾಚಿಸಲಿದ್ಧಾರೆ.
ಅಂಕಲಿಮಠದ ಜಾತ್ರೆ : ನಗರದಲ್ಲಿ ಇಂದು ಸಭೆ
ರಾಯಚೂರು ಜಿಲ್ಲೆ ಲಿಂಗಸ ಗೂರು ತಾಲ್ಲೂಕಿನ ತಲೆಕಟ್ಟು ಗ್ರಾಮದ ಅಂಕಲಿಮಠದ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋ ತ್ಸವ ಹಾಗೂ ನೂತನ ಮಾಂಗಲ್ಯ ಭವನದ ಲೋಕಾ ರ್ಪಣೆಯ ಸಂಬಂಧ ಇಂದು ಬೆಳಿಗ್ಗೆ 10.30ಕ್ಕೆ ಬಿಐಇಟಿಯ ಬೆಳ್ಳಿಗಿರಿ ವಸತಿ ಗೃಹದಲ್ಲಿ ಪೂರ್ವಭಾವಿ ಸಭೆಯನ್ನು ಅಂಕಲಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ
ಶಾಂತಿಯುತ ಲೋಕಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಜ್ಜು
ಜಗಳೂರು : ಮತಗಟ್ಟೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರಿ ಬಸ್ ಗಳ ಮೂಲಕ ತಮ್ಮನ್ನು ನಿಯೋಜಿಸಿರುವ ಮತಗಟ್ಟೆಗಳಿಗೆ ಮತ ಯಂತ್ರಗಳೊಂದಿಗೆ ತೆರಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ 110ನೇ ಸಂಸ್ಥಾಪನಾ ದಿನಾಚರಣೆ
ನಗರದ ಕನ್ನಡ ಕುವೆಂಪು ಭವನದಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆಯ ಸಂಸ್ಥಾಪನೆ ದಿನಾಚರಣೆ ಆಚರಿಸಲಾಯಿತು.
ಪ್ರಜ್ಞಾವಂತ ಮತದಾರ ಪ್ರಜಾಪ್ರಭುತ್ವದ ಯಶಸ್ಸಿನ ರೂವಾರಿ : ಬಿ. ವಾಮದೇವಪ್ಪ
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತ. ಇಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರ ತನ್ನ ಅಮೂಲ್ಯ ಮತ ಚಲಾವಣೆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ತುಂಬುತ್ತಾನೆ.
ಹರಿಹರ : ವಿಳಂಬ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ
ಹರಿಹರ : ನಗರದ ದೊಡ್ಡಿ ಬೀದಿ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಸಕಾಲಕ್ಕೆ ಕಾಮ ಗಾರಿ ಪೂರ್ಣಗೊಳಿ ಸದೇ ಇರುವುದರಿಂದ ಬಡಾವಣೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬಸವ ಜಯಂತಿ : ವಚನಾಮೃತ ಬಳಗದಿಂದ ಆರೋಗ್ಯ ತಪಾಸಣೆ
ನಗರದ ವಚನಾಮೃತ ಬಳಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ನಾರಾಯಣ ಹೃದಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಆರೋಗ್ಯ ತಪಾಸಣೆ ಹಾಗೂ ದತ್ತಿ ಅನುಭಾವವನ್ನು ಎಸ್. ಎಸ್. ಲೇಔಟ್ನ ಸುಪ್ರೀತ್ ಹಾಲ್ನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಆವರಗೆರೆಯಲ್ಲಿ ಎಐವೈಎಫ್ ಸಂಸ್ಥಾಪನಾ ದಿನಾಚರಣೆ
ಅಖಿಲ ಭಾರತ ಯುವಜನ ಒಕ್ಕೂಟವು ನಗರದ ಹೊರ ವಲಯದ ಆವರಗೆರೆಯಲ್ಲಿ 65ನೇ ವರ್ಷದ ಸಂಸ್ಥಾಪನಾ ದಿನ ಆಚರಿಸಿತು.
ಹರಿಹರದಲ್ಲಿ ಚುನಾವಣಾ ಸಿಬ್ಬಂದಿಗೆ ಇಡಿಸಿ ವಿತರಣೆ
ಹರಿಹರ : ನಗರದ ಹರಪನಹಳ್ಳಿ ರಸ್ತೆಯ ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತ 1436 ಇಡಿಸಿ ಪತ್ರವನ್ನು ನೋಡಲ್ ಅಧಿಕಾರಿ ಬಿ.ಇ.ಒ.ಎಂ. ಹನುಮಂತಪ್ಪ ವಿತರಣೆ ಮಾಡಿದರು.
ಮತದಾನ ಜಾಗೃತಿಗಾಗಿ ಸಿದ್ಧಗಂಗಾ ವಿದ್ಯಾರ್ಥಿಗಳ `ಕೈ ಗೊಂಬೆ’ ಆಟ
ನಾಳೆ ದಿನಾಂಕ 7ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅವರ ನಾಯಕತ್ವದಲ್ಲಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಸುರೇಶ್ ಬಿ. ಇಟ್ನಾಳ್ ಅವರ ಮಾರ್ಗದರ್ಶನದಲ್ಲಿ ಮತದಾನ ಜಾಗೃತಿಗಾಗಿ ಹಲವಾರು ವಿನೂತನ ಕಾರ್ಯಕ್ರಮಗಳು ನಡೆದಿವೆ.
ಮಲೇಬೆನ್ನೂರಿನಲ್ಲಿ ಸಖಿ ಮತಗಟ್ಟೆ ಸ್ಥಾಪನೆ
ಮಲೇಬೆನ್ನೂರು : ರಾಜ್ಯ ದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಾಳೆ ದಿನಾಂಕ 7 ರಂದು ಜರುಗಲಿದ್ದು, ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತದಾನಕ್ಕೆ ಮತಗಟ್ಟೆಗಳು ಸಕಲ ರೀತಿಯಲ್ಲೂ ಸಜ್ಜಾಗಿ ಮತದಾರರನ್ನು ಸ್ವಾಗತಿಸುತ್ತಿವೆ.
ಹರಪನಹಳ್ಳಿ : 253 ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ
ಹರಪನಹಳ್ಳಿ : ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ 253 ಮತಗಟ್ಟೆಗಳಿಗೆ , ಅಧಿಕಾರಿಗಳು ಹೆಚ್ ಪಿ ಎಸ್ ಕಾಲೇಜಿನಿಂದ ವಿವಿ ಪ್ಯಾಟ್ ಹಾಗೂ ಇವಿಎಮ್ ಮತ ಯಂತ್ರಗಳೊಂದಿಗೆ ಬಸ್ ಮೂಲಕ ತೆರಳಿದರು.
ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ, ಗೌರವ
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಮೊನ್ನೆ ನಗರಕ್ಕಾಗಮಿಸಿದ್ದ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲೊಂದಾದ ದಾವಣಗೆರೆ - ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಭೇಟಿ ನೀಡಿದ್ದರು.
ಮತದಾರರನ್ನು ಆಕರ್ಷಿಸುತ್ತಿರುವ ಎಲೆಬೇತೂರಿನ `ಪಿಂಕ್ ಸಖಿ ಬೂತ್’
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲೆಬೇತೂರು ಗ್ರಾಮ ದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾ ವಣೆ-2024 ಅಂಗವಾಗಿ ಮತದಾನ ಜಾಗೃತಿಯೊಂದಿಗೆ ಮಹಿಳಾ ಮತ ದಾರರನ್ನು ಆಕರ್ಷಿಸಲು ಮತ್ತು ಮತ ದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿಸಲು `ಪಿಂಕ್ ಸಖಿ ಬೂತ್’ ನ ವ್ಯವಸ್ಥೆಯನ್ನು ಮಾಡಲಾಗಿದೆ.
ಹೊನ್ನೂರು : ನೀರಿನ ಸಂರಕ್ಷಣಾ ಮಾದರಿಯ ಧ್ಯೇಯ ಆಧಾರಿತ ಮತಗಟ್ಟೆ
ಜಿಲ್ಲಾ ಪಂಚಾಯತ ಸ್ವೀಪ್ ಸಮಿತಿ ಇವರ ನಿರ್ದೇಶನದನ್ವಯ ಹೊನ್ನೂರು ಗ್ರಾಮ ಪಂಚಾಯತಿ ವತಿಯಿಂದ ಹೊನ್ನೂರು ಗ್ರಾಮದ ಮತದಾನ ಕೇಂದ್ರದಲ್ಲಿ ನೀರಿನ ಸಂರಕ್ಷಣೆ ಅರಿವು ಮೂಡಿಸುವ ಹಾಗೂ ಮತದಾನ ಕೇಂದ್ರವನ್ನು ಮಾದರಿಯಾಗಿಸುವ ಹಿನ್ನಲೆಯಲ್ಲಿ ನೀರಿನ ಸಂರಕ್ಷಣಾ ಮಾದರಿಯ ದ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.
ಅಂಕಲಿಮಠದ ಶ್ರೀಗಳಿಂದ ಡಾ.ಪ್ರಭಾ ಅವರಿಗೆ ಆಶೀರ್ವಾದ
ರಾಯಚೂರು ಜಿಲ್ಲೆ, ಲಿಂಗಸೂರು ತಾಲ್ಲೂಕಿನ, ತಲೆಕಟ್ಟು ಗ್ರಾಮದ ಅಂಕಲಿ ಮಠದ ಅಂಕಲಿ ಶ್ರೀಗಳು ನಿನ್ನೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ರವರ ನಿವಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಂತೆ ಶಾಲು ಹೊದಿಸಿ, ಹೂವಿನ ಹಾರ ಅರ್ಪಿಸಿ, ಮಠದ ಪ್ರಸಾದ ನೀಡಿ ಆಶೀರ್ವದಿಸಿದರು.
ಚೀಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವ ಎಸ್ಸೆಸ್ಸೆಂ ಪ್ರಚಾರ
ನ್ಯಾಮತಿ : ಚೀಲೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಶಾಸಕ ಎಸ್ಸೆಸ್ರೊಂದಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 1,6,5 ಮತ್ತು 45ನೇ ವಾರ್ಡ್ಗಳ ವ್ಯಾಪ್ತಿಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮತ ಯಾಚಿಸಿದರು.
ಸೊಸೆ ಡಾ. ಪ್ರಭಾ ಎಸ್ಸೆಸ್ಸೆಂ ಪರ ಮಾವ ಬಕ್ಕೇಶ್ ಮತಯಾಚನೆ
ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದಾವಣಗೆರೆ ಉತ್ತರ ವಿಧಾನಸಭಾ ಮತದಾರರು ಪ್ರಜ್ಞಾವಂತರಿದ್ದು, ಪ್ರಜ್ಞಾವಂತಿಕೆಯನ್ನು ತೋರಿಸಬೇಕಿದೆ ಎಂದು ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಅವರು ಕರೆ ನೀಡಿದರು.
ಶ್ರೀಶೈಲ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದ ಪ್ರಭಾ ಮಲ್ಲಿಕಾರ್ಜುನ್ ದಂಪತಿ
ಯುವ ಮುಖಂಡ ಆರ್.ಟಿ ಪ್ರಶಾಂತ್ ದುಗತ್ತಿಮಠರವರ ಮನೆಯಲ್ಲಿ ನಡೆದ ಶ್ರೀಶೈಲ ಜಗದ್ಗುರುಗಳವರ ಇಷ್ಟಲಿಂಗ ಪೂಜೆ ಮತ್ತು ಧರ್ಮ ಸಮಾರಂಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಆಗಮಿಸಿ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಮಲೇಬೆನ್ನೂರಿನಲ್ಲಿ ಬಿಜೆಪಿ -ಜೆಡಿಎಸ್ ಜಂಟಿ ಪ್ರಚಾರ
ಮಲೇಬೆನ್ನೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮಲೇಬೆನ್ನೂರಿನಲ್ಲಿ ಬಿಜೆಪಿ - ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಮಾಡಿದರು.
ಕಾಂಗ್ರೆಸ್ ಆಡಳಿತವನ್ನು ಜನ ಮೆಚ್ಚಿದ್ದಾರೆ : ಗೆಲುವು ಖಚಿತ
ಚನ್ನಗಿರಿ : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಹರಿಹರ : ಗುತ್ತೂರು ಸುತ್ತ ಮುತ್ತ ಕಾಂಗ್ರೆಸ್ ಪ್ರಚಾರ
ಹರಿಹರ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಹರಿಹರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಗುತ್ತೂರು, ಗಂಗನಹರಸಿ, ದೀಟೂರು, ಸಾರಥಿ, ಪಾಮೇನಹಳ್ಳಿ, ಚಿಕ್ಕಬಿದರಿ, ಕುರುಬರಹಳ್ಳಿ, ಕರ್ಲಹಳ್ಳಿ, ಬುಳ್ಳಾಪುರ, ವಟಗನಹಳ್ಳಿ, ಸೇರಿದಂತೆ ವಿವಿಧ ಗ್ರಾಮ ಗಳಲ್ಲಿ ಪ್ರಚಾರ ನಡೆಸಿದರು.
ಹರಿಹರದಲ್ಲಿ ಕಾಂಗ್ರೆಸ್ನಿಂದ ಬಿರುಸಿನ ಪ್ರಚಾರ
ಹರಿಹರ ತಾಲ್ಲೂಕಿನ ಗುತ್ತೂರು ಬಡಾವಣೆಯ ಸುತ್ತಮುತ್ತಲಿನಲ್ಲಿ ದಾವಣಗೆರೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಬಿರುಸಿನ ಪ್ರಚಾರವನ್ನು ಮಾಜಿ ಶಾಸಕ ರಾಮಪ್ಪ, ಹೆಚ್.ಎಸ್. ನಾಗರಾಜ್, ನಂದಿಗಾವಿ ಶ್ರೀನಿವಾಸ್, ವಾಗೀಶ್ ಸ್ವಾಮಿ ಹಾಗೂ ಹಾಲನಗೌಡ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕಾಂಗ್ರೆಸ್ ಗೆಲ್ಲಿಸಲು ಸೈಯದ್ ಖಾಲಿದ್ ಅಹ್ಮದ್ ಕರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು.
ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚಿನ್ನಸಮುದ್ರ ಗ್ರಾಮದಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅದ್ಧೂರಿಯಾಗಿ ಪ್ರಚಾರ ಮಾಡಿದರು.
ಜಿ.ಬೇವಿನಹಳ್ಳಿಯಲ್ಲಿ ಡಾ. ಪ್ರಭಾ ಪರ ಪುತ್ರ ಸಮರ್ಥ್ ಮತಯಾಚನೆ
ಮಲೇಬೆನ್ನೂರು : ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಭಾನುವಾರ ಸಮರ್ಥ್ ಮಲ್ಲಿಕಾರ್ಜುನ್ ಅವರು, ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಬರಿಗಾಲಿನಿಂದ ಸಂಚರಿಸಿ, ಮತಯಾಚನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು.
ಸಾಮಾನ್ಯ ಜನರು ನನ್ನ ಗಾಡ್ ಫಾದರ್, ಗೆದ್ದರೆ ಸ್ವಾಭಿಮಾನಕ್ಕೆ ಜಯ ಸಿಕ್ಕಂತೆ
ಹರಪನಹಳ್ಳಿ : ರಾಜಕಾರಣದಲ್ಲಿ ನನಗೆ ಯಾರೂ ಗಾಡ್ ಫಾದರ್ ಇಲ್ಲ. ಜನಸಾಮಾನ್ಯರೇ ನನ್ನ ಗಾಡ್ ಫಾದರ್. ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸ್ವಾಭಿಮಾನಿಗಳಿಗೆ ಗೆಲುವು ಸಿಕ್ಕಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಭಾನುವಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ರೇವಣ್ಣ ಮತಯಾಚನೆ
ಮಲೇಬೆನ್ನೂರು : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತಿದ್ದಾರೆ ಎಂದವರ ಕುಟುಂಬವೇ ಹಾದಿ ತಪ್ಪಿರುವ ಘಟನೆ ನಿಮ್ಮ ಮುಂದಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.