ಹೊನ್ನೂರು : ನೀರಿನ ಸಂರಕ್ಷಣಾ ಮಾದರಿಯ ಧ್ಯೇಯ ಆಧಾರಿತ ಮತಗಟ್ಟೆ

ಹೊನ್ನೂರು :  ನೀರಿನ ಸಂರಕ್ಷಣಾ ಮಾದರಿಯ ಧ್ಯೇಯ ಆಧಾರಿತ ಮತಗಟ್ಟೆ

ದಾವಣಗೆರೆ, ಮೇ 6 – ಜಿಲ್ಲಾ ಪಂಚಾಯತ ಸ್ವೀಪ್ ಸಮಿತಿ ಇವರ ನಿರ್ದೇಶನದನ್ವಯ ಹೊನ್ನೂರು ಗ್ರಾಮ ಪಂಚಾಯತಿ ವತಿಯಿಂದ ಹೊನ್ನೂರು ಗ್ರಾಮದ ಮತದಾನ ಕೇಂದ್ರದಲ್ಲಿ ನೀರಿನ ಸಂರಕ್ಷಣೆ ಅರಿವು ಮೂಡಿಸುವ ಹಾಗೂ ಮತದಾನ ಕೇಂದ್ರವನ್ನು ಮಾದರಿಯಾಗಿಸುವ ಹಿನ್ನಲೆಯಲ್ಲಿ ನೀರಿನ ಸಂರಕ್ಷಣಾ ಮಾದರಿಯ ದ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ರಾಜ್ಯದಲ್ಲಿನ ಬರಗಾಲ ಇರುವ ಮತ್ತು ಕುಡಿಯುವ ನೀರಿನ ಅಪವ್ಯಯ ತಡೆಯುವ ಪರಿಸ್ಥಿತಿ ಒದಗಿದ ಹಿನ್ನಲೆಯಲ್ಲಿ ಮತದಾರರಲ್ಲಿ ಜಲ ಸಂರಕ್ಷಣೆ ಕುರಿತು ವೈಜ್ಞಾನಿಕ ವಿಧಾನಗಳನ್ನು ಸರಳವಾಗಿ ತಿಳಿಸಿ, ಆ ಮೂಲಕ ನೀರಿನ ಮಹತ್ವ ಹಾಗೂ ಸಂರಕ್ಷಣಾ ಕ್ರಮಗಳನ್ನು ಸಾರುವ ಮಾದರಿ ಪ್ರಾತ್ಯಕ್ಷಿಕೆ, ಗೋಡೆ ಬರಹ ಹಾಗೂ ಬ್ಯಾನರ್ ಗಳ ಮೂಲಕ ಬಿಂಬಿಸಲಾಗಿದೆ.

ಜೀವ ಜಲದ ಸಂರಕ್ಷಣೆ ಮೂಲಕ, ಸುಸ್ಥಿರ ಬಳಕೆಯ ವಿಧಿ ವಿಧಾನಗಳನ್ನೂ ಸಹ ಬಿಂಬಿಸಲಾಗಿದೆ. 1847 ಮತದಾರರನ್ನು ಜಾಗೃತರನ್ನಾಗಿಸುವ ಮಾಹಿತಿ ಸಂವಹನದ ಉಪಕ್ರಮ ಇದಾಗಿದೆ. ಈ ಮೂಲಕ ಗ್ರಾಮ ಪಂಚಾಯತಿ ಹೊನ್ನೂರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಮಾರ್ಗದರ್ಶನದಲ್ಲಿ ಧ್ಯೇಯ ಆಧಾರಿತ ಮತಗಟ್ಟೆಯನ್ನು ಮಾದರಿಯಾಗಿಸಿದೆ.

error: Content is protected !!