ಮಲೇಬೆನ್ನೂರು, ಮೇ 5- ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮಲೇಬೆನ್ನೂರಿನಲ್ಲಿ ಬಿಜೆಪಿ – ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಮಾಡಿದರು.
ಈ ವೇಳೆ ಮತದಾರರಿಗೆ ಬಿಜೆಪಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿ.ಪಂ.ಮಾಜಿ ಸದಸ್ಯ ಆದಾಪುರ ವೀರಭದ್ರಪ್ಪ, ಮುಖಂಡರಾದ ಎಂ.ಆರ್.ಮಹಾದೇವಪ್ಪ, ಗೋವಿಂದಪ್ಪ ಸಾವಜ್ಜಿ, ಆದಾಪುರ ವಿಜಯ ಕುಮಾರ್, ಪುರಸಭೆ ಸದಸ್ಯರಾದ ಬೆಣ್ಣೇಹಳ್ಳಿ ಸಿದ್ದೇಶ್, ಜಿಗಳೇರ ಹಾಲೇಶಪ್ಪ, ಓ.ಜಿ.ಕುಮಾರ್, ಪಾನಿಪುರಿ ರಂಗಣ್ಣ, ಕೆ.ಜಿ.ಮಂಜುನಾಥ್, ಭೋವಿ ಮಂಜಣ್ಣ, ಬಟ್ಟೆ ಅಂಗಡಿ ವಿಶ್ವ, ಉಡೆದರ್ ಸಿದ್ದೇಶ್, ಓ.ಜಿ.ಪ್ರಭು, ಪ್ರಕಾಶಾಚಾರ್, ಓ.ಜಿ.ಧನು, ಬೆಣ್ಣೆಹಳ್ಳಿ ಬಸವರಾಜ್, ನಿರಂಜನ್ ಪಿಂಟು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.