ಡಿಕೆಶಿ ಪದಗ್ರಹಣ : ಗ್ರಾ.ಪಂ.ಗಳಲ್ಲೂ ಕಾರ್ಯಕ್ರಮ

ಡಿಕೆಶಿ ಪದಗ್ರಹಣ : ಗ್ರಾ.ಪಂ.ಗಳಲ್ಲೂ ಕಾರ್ಯಕ್ರಮ - Janathavaniದಾವಣಗೆರೆ, ಜು. 30- ನಾಡಿದ್ದು ದಿನಾಂಕ 2ರ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭದ ಜೊತೆ ಸ್ಥಳೀಯ ಮಟ್ಟದಲ್ಲೂ ಏಕಕಾಲಕ್ಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಹೇಳಿದರು.

ಡಿ.ಕೆ. ಶಿವಕುಮಾರ್ ಜೊತೆ ಕಾರ್ಯಾಧ್ಯಕ್ಷರುಗಳಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಅವರುಗಳ ಪದಗ್ರಹಣವೂ ಹಾಗೂ ಪ್ರತಿಜ್ಞಾ ಸಮಾರಂಭವೂ ನಡೆಯಲಿದೆ. ಇದರೊಟ್ಟಿಗೆ  ಜಿಲ್ಲೆಯ 206 ಗ್ರಾಮ ಪಂಚಾಯ್ತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪಾಲಿಕೆಗಳಲ್ಲಿ ಟಿವಿ ಹಾಗೂ ಝೂಮ್ ಆಪ್ ಮೂಲಕ ವೀಕ್ಷಿಸುವ ಜೊತೆಗೆ ಕಾರ್ಯಕರ್ತರೂ ಸಹ ಅಧಿಕಾರ ಸ್ವೀಕರಿಸಿ, ಯಶಸ್ವಿಗೊಳಿಸುವಂತೆ  ಅವರು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜಪ್ಪ,   ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ದಾವಣಗೆರೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಅಭಿವೃದ್ಧಿ ಕೆಲಸ ಮಾಡಲಿ : ಶಾಸಕ ರೇಣುಕಾಚಾರ್ಯ ಅವರು ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ  ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಮಂಜಪ್ಪ ಹೇಳಿದರು.

ತೈಲ ಬೆಲೆ ಏರಿಕೆ ಬಗ್ಗೆ ರೇಣುಕಾಚಾರ್ಯ ಅವರ ಮಾತಿಗಳಿಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಅಧಿಕಾರದಲ್ಲಿ ಇದ್ದಾಗ ಒಂದು ರೀತಿ, ಇಲ್ಲದಾಗ ಒಂದು ರೀತಿ ಮಾತನಾಡುತ್ತಾರೆ. ಸರ್ಕಾರ ತಪ್ಪು ಮಾಡಿದಾಗ ಖಂಡಿಸುವುದು ವಿಪಕ್ಷಗಳ ಕೆಲಸ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ.ಶೆಟ್ಟಿ, ಮಾಗಾನಹಳ್ಳಿ ಪರಶುರಾಮ್, ಅಮೃತೇಶ್, ಮೋಕ್ಷದಾಯಿನಿ, ಖಾಲಿದ್, ಆಶಾ ಮುರಳಿ, ದ್ರಾಕ್ಷಾಯಣಮ್ಣ, ಚಂದ್ರು, ಮುಜಾಹಿದ್, ಹರೀಶ್ ಬಸಾಪುರ, ರಾಜೇಶ್ವರಿ, ಯುವರಾಜ್ ಇತರರಿದ್ದರು.

error: Content is protected !!