ಭಾನುವಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ರೇವಣ್ಣ ಮತಯಾಚನೆ

ಭಾನುವಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪರ  ಮಾಜಿ ಸಚಿವ ರೇವಣ್ಣ ಮತಯಾಚನೆ

ಮಲೇಬೆನ್ನೂರು, ಮೇ 5- ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತಿದ್ದಾರೆ ಎಂದವರ ಕುಟುಂಬವೇ ಹಾದಿ ತಪ್ಪಿರುವ ಘಟನೆ ನಿಮ್ಮ ಮುಂದಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.

ಅವರು ಭಾನುವಾರ ಭಾನುವಳ್ಳಿ ಗ್ರಾಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಮತಯಾಚನೆ ಮಾಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಪರ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ, ರಾಜ್ಯದ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಖಚಿತವಾಗಿದೆ. 

ಡಾ. ಪ್ರಭಾ ಅವರ ಗೆಲುವಿನಲ್ಲಿ ಅಹಿಂದ ವರ್ಗ ಪ್ರಮುಖ ಪಾತ್ರ ವಹಿಸಲಿದ್ದು, ಬಿಜೆಪಿಯ ಇನ್ನೊಂದು ಮುಖವಾಡ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಿರಸ್ಕರಿಸಿ ಎಂದು ಹೆಚ್.ಎಂ.ರೇವಣ್ಣ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಉಸ್ತುವಾರಿ ಪಿ.ಆರ್.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಮುಖಂಡರಾದ ಹೆಚ್.ಕೆ. ಕನ್ನಪ್ಪ, ಚಂದ್ರ ಪ್ಪ, ಜೆ.ಮನ್ಸೂರ್ ಅಲಿ, ಜೆ.ಗುತ್ಯಪ್ಪ, ಹೇಮಂತರಾಜ್, ಕರಿಯಪ್ಪ, ಕೆಂಚಪ್ಪ, ಕೆ.ಎ.ಕೆಂಚಪ್ಪ, ಚಂದ್ರಪ್ಪ, ಹಾಲಪ್ಪ ಪೂಜಾರ್, ಮುಕ್ತಿಯಾರ್ ಮೆಹಬುಬ್ ಸಾಬ್ ಸೇರಿದಂತೆ ಇನ್ನು ಅನೇಕರು ಹಾಜರಿದ್ದರು.

error: Content is protected !!