ಮತದಾರರನ್ನು ಸ್ವಾಗತಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ

ಮತದಾರರನ್ನು ಸ್ವಾಗತಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ

ದಾವಣಗೆರೆ : ಇಂದು ನಡೆಯುವ 18 ನೇ ಲೋಕಸಭಾ ಚುನಾವಣೆಯ ಮತದಾನಕ್ಕೆ ಸಾಂಪ್ರದಾಯಿಕ, ಧ್ಯೇಯ, ಸಖಿ, ಯುವ, ವಿಶೇಷಚೇತನರ ಮತಗಟ್ಟೆಗಳು ಕಂಗೊಳಿಸುತ್ತಿವೆ. ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ.  ವಿಶೇಷ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ಇವು ಜಿಲ್ಲೆಯಲ್ಲಿ 35 ಮತಗಟ್ಟೆಗಳು, ಧ್ಯೇಯ ಆಧಾರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಯೆದೆಲೆ, ಸಂಚಾರ ನಿಯಂತ್ರಣ, ಜಲಸಂರಕ್ಷಣೆ, ಸ್ಕೌಟ್ ಅಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾಯಿಕ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ಲಂಬಾಣಿ ಸಂಸ್ಕೃತಿ, ಯಾದವ ಸಂಪ್ರದಾಯ, ಹಕ್ಕಿಪಿಕ್ಕಿ ಸಂಪ್ರದಾಯ ಸೇರಿದಂತೆ ಜನಜೀವನದ ಬಗ್ಗೆ ಗಮನ ಸೆಳೆಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

error: Content is protected !!