ಹರಪನಹಳ್ಳಿ : 253 ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

ಹರಪನಹಳ್ಳಿ : 253 ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

ಹರಪನಹಳ್ಳಿ,ಮೇ 6-    ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ 253 ಮತಗಟ್ಟೆಗಳಿಗೆ , ಅಧಿಕಾರಿಗಳು ಹೆಚ್ ಪಿ ಎಸ್ ಕಾಲೇಜಿನಿಂದ ವಿವಿ ಪ್ಯಾಟ್ ಹಾಗೂ ಇವಿಎಮ್   ಮತ ಯಂತ್ರಗಳೊಂದಿಗೆ  ಬಸ್ ಮೂಲಕ ತೆರಳಿದರು.  ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ನಿಯೋಜಿತ ಕೇಂದ್ರಗಳಿಗೆ ತೆರಳುವಾಗ ಬಿಸಿಲ ತಾಪಕ್ಕೆ  ಕಂಪಾರ್ಟ್‌ಮೆಂಟ್ ಬೋರ್ಡ್‌ಗಳನ್ನೇ ತಲೆಗೆ ಆಸರೆಯಾಗಿಸಿಕೊಂಡು ತೆರಳಿದ್ದು ಕಂಡುಬಂದಿತು.  

ಈ ವೇಳೆ ಎಆರ್ಒ   ಚಿದಾನಂದ ಗುರು ಸಿದ್ದಪ್ಪ,  ತಹಶೀಲ್ದಾರ್ ಗಿರೀಶ್ ಬಾಬು, ಇಒ ಚಂದ್ರಶೇಖರ್‌, ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಇತರರು ಇದ್ದರು 

error: Content is protected !!