ನಗರದಲ್ಲಿ ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ

ನಗರದಲ್ಲಿ ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ

ದಾವಣಗೆರೆ, ಏ. 24 – ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಇವರುಗಳ ಸಹಾ ಯದೊಂದಿಗೆ ಸೋಮವಾರ ನಗರದ ಗುರುಭ ವನದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮಾತನಾಡಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದ ಹಳ್ಳಿಗಳಿಂದ ಬಂದಿರುವ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರು ಬಗೆ ಬಗೆಯ ರಂಗೋಲಿಯ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮತದಾರರೂ ಸಹ ಹೆಮ್ಮೆಯಿಂದ ತಮ್ಮ ಮತ ಚಲಾಯಿಸುವಂತಾಗಬೇಕೆಂದರು.  

ರಂಗೋಲಿ ಮೂಲಕ ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮತದಾರರು, ಮತದಾನ ಮೂಲ ಭೂತ ಕರ್ತವ್ಯ, ನಮ್ಮ ದೇಶ ಸೇವ ಕರಿಗೆ ನಾವು ನೀಡುವ ಅಮೂಲ್ಯ ವಾದ ದಾನವೇ ಮತದಾನ, ಮತದಾನ ಮಾಡಿದರೇ ಮಾತ್ರ, ಆ ಹಕ್ಕಿಗೆ ಅರ್ಥ ಸಿಗುತ್ತದೆ. ಮೇ 7 ರಂದು ತಪ್ಪದೇ ಮತ ಚಲಾಯಿಸಿ ಎಂಬಿತ್ಯಾದಿ ಘೋಷವಾಕ್ಯಗಳೊಂ ದಿಗೆ ರಂಗೋಲಿ ಬಿಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ಅಶೋಕ್ ಕಾಂಬೆಳ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ. ನೇತ್ರಾ ವತಿ,  ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಹಾಗೂ ಇನ್ನಿತರರಿದ್ದರು.

error: Content is protected !!