ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಅಂಬೇಡ್ಕರ್

ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಅಂಬೇಡ್ಕರ್

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಪಿ.ಎಸ್.ಐ. ಶಂಭುಲಿಂಗ ಸಿ. ಹಿರೇಮಠ

ಹರಪನಹಳ್ಳಿ, ಏ. 21  – ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಪಿ.ಎಸ್.ಐ. ಶಂಭುಲಿಂಗ ಸಿ.ಹೀರೆಮಠ್ ಹೇಳಿದರು.

ಪಟ್ಟಣದ ಬಾಪೂಜಿ ನಗರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ  ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ತಾಲ್ಲೂಕು ಸಮಿತಿ ಹಾಗೂ 5ನೇ ವಾರ್ಡ್ ಬಾಪೂಜಿ ನಗರದ ದೈವಸ್ಥರ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. 

ನಂತರ ಅವರು ಮಾತನಾಡಿ, ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಪೂರ್ತಿ, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಸಂವಿಧಾನದ ಅಡಿಯಲ್ಲಿ ನಾವು-ನೀವು ಎಲ್ಲರೂ ಕೆಲಸ ಮಾಡುವ ಹಾಗೆ ಮಾಡಿದ್ದು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ತಿಳಿಸಿದರು.

ಪುರಸಭೆ ಸದಸ್ಯ ಎಚ್.ಎಂ.ಅಶೋಕ ಹರಾಳ್ ಮಾತನಾಡಿ, ಮಹಿಳೆಯರಿಗೆ ಚುನಾವಣೆ ವೇಳೆ ಮತದಾನ ಮಾಡುವ ಹಕ್ಕನ್ನು ತಂದು ಕೊಟ್ಟವರು. ಅಧಿಕಾರದ ಹಂಚಿಕೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಸಮಾಜದಲ್ಲಿ ಅತ್ಯಂತ ನೋವು, ದುಃಖ, ಅಪಮಾನದಿಂದ ಬದುಕುವ ಸರ್ವ ಜನಾಂಗದ ವರಿಗೆ ತನ್ನ ಜೀವನದ ಸಾಧನೆಯನ್ನು ಅರ್ಪಣೆ ಮಾಡಿದ ಮಹಾನ್ ಚೇತನ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎ.ಕೆ.ಹುಚ್ಚಪ್ಪ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಗಳು ಶೋಷಿತರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳಾ ಸಮಾನತೆ, ಕಾರ್ಮಿಕ ಹಕ್ಕುಗಳು, ಅಲ್ಪಾ ಸಂಖ್ಯಾತರ ರಕ್ಷಣೆಗೆ ಅವರು ನೀಡಿದ ಕೊಡುಗೆಗಳು ಅಪಾರವಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದು ಪಾಸಾದ ಬಾಪೂಜಿ ನಗರದ ವಿದ್ಯಾರ್ಥಿಗಳಾದ ಅಳಗಂಚಿಕೇರಿ ಪ್ರಜ್ವಲ್, ಅಳಗಂಚಿಕೇರಿ ಸಂಜನಾ, ಬಂಗಿ ಲಕ್ಷ್ಮಿ, ಡಿ.ಅಶ್ವಿನಿ, ಕೆ.ಮನೋಜ, ಕೆ.ಮುರುಳಿ, ಅಳಗಂಚಿಕೇರಿ ಆಕಾಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಅಧ್ಯಕ್ಷ ಕೆ.ಸುಭಾಶ್ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಕೇರಿಯ ದೈವಸ್ಥರಾದ ಅಳಗಂಚಿಕೇರಿ ನಿಂಗಪ್ಪ, ಪೂಜಾರ್ ನಾಗೇಂದ್ರಪ್ಪ, ಸಿ.ಚಂದ್ರಪ್ಪ, ಅಳಗಂಚಿಕೇರಿ ರಾಮಪ್ಪ, ಬಿ.ಎಚ್.ನಿಂಗಪ್ಪ, ಗುಂಡಗತ್ತಿ ಕೊಟ್ರಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಾವಾದ ಸಂಘದ ಅಧ್ಯಕ್ಷ ಕೆ.ಸುಭಾಶ್, ಉಪಾಧ್ಯಕ್ಷ ಸಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪೂಜಾರ್ ಮಲ್ಲಿಕಾರ್ಜುನ್‌, ರಿಯಾಜ್, ಖಾಜಾಸಾಬ್, ಸೈಯದ್ ಇರ್ಫಾನ್, ನಾಲಬಂದ್ ಭಾಷ್, ಪೂಜಾರ್ ನಿಂಗಪ್ಪ, ಬಿ.ಮಹೇಂದ್ರ ಕುಮಾರ್, ಹೆಗ್ಗಪ್ಪರ ಸುರೇಶ್, ಜಿ.ಶ್ರೀಕಾಂತ್, ಸವಣೂರ್ ಯಲ್ಲಪ್ಪ, ಮಾಳಗಿ ರಮೇಶ್, ಆರ್.ಕೋಟೆಪ್ಪ, ಭಂಗಿ ಚಂದ್ರಪ್ಪ, ಕೆ.ಕೋಟೇಪ್ಪ, ಬಿ.ಮುತ್ತಪ್ಪ, ಅಂಬಳಿ ನಾಗರಾಜ, ಡಿ.ಮೈಲಾರಿ, ಭಂಗಿ ಮೂಕಪ್ಪ, ಅಂಜಿನಪ್ಪ, ಪೂಜಾರ್ ಕೆಂಚಪ್ಪ, ಛತ್ರಪತಿ, ಕೆ.ಭರತ್ ಸೇರಿದಂತೆ, ಅನೇಕರು ಭಾಗವಹಿಸಿದ್ದರು.

error: Content is protected !!