ರಾಣೇಬೆನ್ನೂರು : ವಿದ್ಯಾರ್ಥಿಗಳಿಂದ ಮಾದರಿ ವಸ್ತು ಪ್ರದರ್ಶನ

ರಾಣೇಬೆನ್ನೂರು : ವಿದ್ಯಾರ್ಥಿಗಳಿಂದ ಮಾದರಿ ವಸ್ತು ಪ್ರದರ್ಶನ

ರಾಣೇಬೆನ್ನೂರು, ಏ.2- ತಾಲ್ಲೂಕಿನ ಕಮದೋಡು ಬಳಿಯ ರೇನ್ ಬೊ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಮಾದರಿ ವಸ್ತು ಪ್ರದರ್ಶನ, ಪಾಲಕರ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು.

ವಿದ್ಯಾರ್ಥಿಗಳು ವಿವಿಧ ವಿಷಯಾಧಾ ರಿತವಾಗಿ ಮಾದರಿ ಪ್ರದರ್ಶನ ಮಾಡಿ ದರು. ಪಾಲಕರಿಗಾಗಿ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಪ್ರಶಸ್ತಿ ವಿತರಿಸಿ ಮಾತನಾಡಿದ ರವಿಕುಮಾರ ಅವರು,  ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕೌಶಲ್ಯ ಗುರುತಿಸಲು ಮತ್ತು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಎಂದು ಹೇಳಿದರು.

ಡಾ. ಸಿ.ಟಿ. ಸುರೇಶ ಲಲಿತಾ, ಸುರೇಶ್, ಎಸ್.ಎನ್. ಕಟ್ಟೀಮನಿ,  ಐ.ಕೆ.ಮಾಲತೇಶ್, ಎಸ್. ಕೆ. ನಾಗರಾಜ, ಆಡಳಿತ ಮಂಡಳಿಯ ಸದಸ್ಯರು ಮತ್ತು ಪ್ರಾಚಾರ್ಯರು, ಪಾಲಕರು ಇದ್ದರು.

ವಿದ್ಯಾರ್ಥಿಗಳಾದ ಶೃತಿ ಸಾವಕರ್, ತನುಶ್ರೀ ನಿರೂಪಿಸಿದರು. ಪಿ.ಕೆ. ಮಾನ್ಯ, ಪಿ. ಗಿರಿಜಾ ಸ್ವಾಗತಿಸಿದರು. ಯಶವಂತ್ ರೆಡ್ಡಿ ವಂದಿಸಿದರು.

error: Content is protected !!