75ರ ಸಂಭ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ

75ರ ಸಂಭ್ರಮದಲ್ಲಿ ಜಿಲ್ಲಾ ಕಸಾಪ  ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ

ದಾವಣಗೆರೆ, ಏ. 2 – ಸರ್ಕಾರಿ ಪದವಿಪೂರ್ವ ಕಾಲೇಜಿನ (ಅರಸಾಪುರ), ವಿಶ್ರಾಂತ ಉಪನ್ಯಾಸಕರೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಬಿ.ಎಂ. ಸದಾಶಿವಪ್ಪ ಅವರು ಇಂದು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಹಿರಿಯ ಸಾಹಿತಿಗಳೂ, ಕಸಾಪ ಮಾಜಿ ಪದಾಧಿಕಾರಿಗಳೂ ಆಗಿರುವ ಎಸ್.ಟಿ. ಶಾಂತ ಗಂಗಾಧರ್, ಎಲ್. ನಾಗರಾಜ್, ಎಲ್. ರಾಮಚಂದ್ರ ರಾವ್, ಹೆಚ್.ಎನ್. ಪ್ರದೀಪ್, ಜಿ. ಮುತ್ತಣ್ಣ, ಜಂಬಿಗಿ ರುದ್ರಪ್ಪ, ಭಾನುಮೂರ್ತಿ, ಸಿದ್ದಾಚಾರ್, ಎನ್. ಪೂರ್ವಾ ಚಾರ್, ಮಳಲ್ಕೆರೆ ಮಹೇಶ್, ಸಿ. ರಾಜಣ್ಣ, ಎಂ. ಬಸವ ರಾಜಪ್ಪ, ಡಾ. ಹೆಚ್.ಪಿ. ಪ್ರಕಾಶ್ ಇತರರು ಸದಾಶಿವಪ್ಪ ಅವರ ನಿವಾಸಕ್ಕೆ  ಭೇಟಿ ನೀಡಿ ಶುಭ ಕೋರಿದರು.

error: Content is protected !!