ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ : ಪ್ರಕಾಶ್

ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ : ಪ್ರಕಾಶ್

ದಾವಣಗೆರೆ, ಏ. 2- ಮಾತೃಭಾಷೆಯಾಗಿ ಕನ್ನಡಕ್ಕೆ ಮಹತ್ವವಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯ  ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ ಎಂದು ಆಹಾರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಟಿ. ಪ್ರಕಾಶ್ ತಿಳಿಸಿದರು.

ಅವರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ, ಕನ್ನಡ ನಾಡು, ನುಡಿಯ ಹಿರಿಮೆ ಕುರಿತು ಸೊಗಸಾದ ಕನ್ನಡ ಗೀತ ಗಾಯನದ ಮೂಲಕ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಬಿ. ವಿಕಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಬಿ.ಎಸ್‌. ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದತ್ತಿದಾನಿಗಳಾದ ಅಭಿಯಂತರ ಮೆದಿಕೆರೆ ವೀರಣ್ಣಗೌಡ್ರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸಾಪ ನಿರ್ದೇಶಕರಾದ ಬಿ.ವಿ. ಪರಿಮಳ ಜಗದೀಶ್ ದತ್ತಿ ದಾನಿಗಳನ್ನು ಪರಿಚಯಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಷಡಾಕ್ಷರಪ್ಪ, ಮಮತಾ ರುದ್ರಮುನಿ, ಡಾ. ರುದ್ರಮುನಿ ಹಿರೇಮಠ್ ಉಪಸ್ಥಿತರಿದ್ದರು.

ಸಿ.ಎಸ್. ರಾಧಿಕಾ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿನಿ ಪ್ರಾರ್ಥಿಸಿ ದರು. ಕು. ಸಂಗೀತ ಸ್ವಾಗತಿಸಿದರು. ಕು. ಅಪ್ಸರಾ ವಂದಿಸಿದರು.

error: Content is protected !!