ಸಾವಿತ್ರಿಬಾಯಿ ಪುಲೆ ಸ್ಮರಣೆ, ಮಹಿಳೆಯರಲ್ಲಿ ನಿರಂತರವಾಗಿರಬೇಕು : ರೂಪಾ ಕಾಕಿ

ಸಾವಿತ್ರಿಬಾಯಿ ಪುಲೆ ಸ್ಮರಣೆ, ಮಹಿಳೆಯರಲ್ಲಿ ನಿರಂತರವಾಗಿರಬೇಕು : ರೂಪಾ ಕಾಕಿ

ರಾಣೇಬೆನ್ನೂರು, ಮಾ. 25 – ಪುರುಷ ಪ್ರದಾನ ಸಮಾಜದಲ್ಲಿ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಗೆ ಶಿಕ್ಷಣ ಕೊಡಿಸಿ ಅವಳನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿ ಕಾರ್ಯ ಮಾಡಿದ ಸಾವಿತ್ರಿಬಾಯಿ ಪುಲೆ ಅವರ ಸ್ಮರಣೆ ಪ್ರತಿಯೊಬ್ಬ ಮಹಿಳೆಯಿಂದ ಆಗಬೇಕು ಎಂದು ಕಾಕಿ ಸೌಹಾರ್ದ ಸಹಕಾರಿ ಅಧ್ಯಕ್ಷೆ ರೂಪಾ ಕಾಕಿ ಹೇಳಿದರು. 

ಅವರು ಇಲ್ಲಿನ ದೇವಾಂಗ ಮಹಿಳಾ ಸಂಘದವರು ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಪ್ರತಿಭೆ ಗುರುತಿಸಿ ಅವರನ್ನ ಗೌರವಿಸುವ ಕಾರ್ಯ ಮಹಿಳಾ ದಿನಾಚರಣೆಯಲ್ಲಿ ನಡೆಯುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. 

ಅತಿಥಿಗಳಾಗಿದ್ದ ಡಾ. ವಿದ್ಯಾ ಕೇಲಗಾರ ಮಾತನಾಡಿ, ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿ ಜೊತೆ ತಮ್ಮ ಆರೋಗ್ಯದ ಕಾಳಜಿ ವಹಿಸಿಕೊಳ್ಳಬೇಕು ಎಂದು ಹೇಳಿ ದಿನಾಚರಣೆಗೆ ಶುಭ ಕೋರಿದರು.  ರಾಜ್ಯ ಸಂಘದ ಸದಸ್ಯರಾದ ಪುಷ್ಪಾ ಮಾಳಗಿ, ಸೌಮ್ಯ ಮಾಳಗಿ, ಜಿಲ್ಲಾಧ್ಯಕ್ಷರಾದ ಶಾರದಾ ಆನ್ವೇರಿ ಆಗಮಿಸಿದ್ದರು. ವಿಜ ಯಲಕ್ಷ್ಮಿ ಕದರಮುಂಡಲಗಿ, ಉಮಾ ಪ್ರಾಸ್ತಾವಿಕ ಮಾತುಗ ಳನ್ನಾಡಿದರು. ಶೋಭಾ ಮಾರನಾಳ ಸ್ವಾಗತಿಸಿದರು. ಚೇತನಾ ವಂದಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!