ವಿನಯ್ ಕುಮಾರ್‌ಗೆ ಹಿಂದುಳಿದ ಜನ ಜಾಗೃತಿ ವೇದಿಕೆ ಬೆಂಬಲ

ದಾವಣಗೆರೆ, ಏ. 24- ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿ ಸುವುದಾಗಿ ಭರವಸೆ ನೀಡಿರುವ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರನ್ನು ಬೆಂಬಲಿಸುವುದಾಗಿ ಹಿಂದುಳಿದ ಜನ ಜಾಗೃತಿ ವೇದಿಕೆ ಹೇಳಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್, ಲಿಂಗಾಯತ ಮುಖಂಡರು ವರದಿ ಕುರಿತು ಹಗುರವಾಗಿ ಮಾತನಾಡುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಡಾ.ಕರಿಬಸಯ್ಯ ಮಠದ ವಡೆಯರ್, ಆರ್.ಟಿ. ನಟರಾಜ್, ಪ್ರೊ.ಹೆಚ್. ರಾಜಪ್ಪ, ಪರಮೇಶ್ವರಪ್ಪ ಇತರರಿದ್ದರು.

error: Content is protected !!