ಡಿಆರ್‌ಆರ್ ಕಾಲೇಜಿನಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಆಹ್ವಾನ

ದಾವಣಗೆರೆ, ಜೂ.6- ಇಲ್ಲಿನ ಡಿಆರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2023-24 ನೇ ಸಾಲಿನ ಡಿಪ್ಲೋಮಾ ಮೊದಲ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಕಮರ್ಷಿಯಲ್ ಪ್ರಾಕ್ಟಿಸ್ ಕನ್ನಡ/ಇಂಗ್ಲಿಷ್ ಕೋರ್ಸ್‌ಗಳಲ್ಲಿ ಕೆಲವೇ ಸೀಟುಗಳು ಉಳಿದಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಆಹ್ವಾನಿಸಿದೆ. ಜೂ.20 ರೊಳಗೆ ಪ್ರವೇಶ ಪಡೆಯಬಹುದಾಗಿದೆ. ಈ ಕೋರ್ಸ್‌ ಮುಗಿದ ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಬಿ.ಕಾಂ/ಬಿಬಿಎ/ಬಿಬಿಎಂ ಪದವಿಗಳಿಗೆ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ ಎಂದು ಪ್ರಾಚಾರ್ಯ ಡಾ.ರವಿ.ಎ.ಎಂ ತಿಳಿಸಿದ್ದಾರೆ.

error: Content is protected !!