ಶಾಸಕ ಹರೀಶ್ ವಿರುದ್ಧ ಕ್ರಮಕ್ಕೆ ಮಾದಿಗ ಸಮಾಜದ ಮುಖಂಡರ ಒತ್ತಾಯ

ಹರಿಹರ, ಮೇ 28 – ಶಾಸಕ ಬಿ.ಪಿ. ಹರೀಶ್ ಅವರು ಮಾದಿಗ ಸಮಾಜದವರಿಗೆ ಅವಹೇಳನಕಾರಿ ಪದಗಳನ್ನು ಬಳಿಸಿದ್ದರ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಅಧಿಕಾರಿಗಳು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡರು ಇಂದು ಆರೋಪಿಸಿದ್ದಾರೆ. ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮಾಜದ ಮುಖಂಡರಾದ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದ್, ಜಿ.ವಿ. ವೀರೇಶ್, ನಾಗಭೂಷಣ, ನಗರಸಭೆ ಸದಸ್ಯರಾದ ರಜನಿಕಾಂತ್, ಪಿ.ಎನ್. ವೀರುಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯೆ ರತ್ನಮ್ಮ, ಡಿ. ಹನುಮಂತಪ್ಪ, ಕೊಟ್ರೇಶ್ ಸದಾನಂದ ಅವರು ಈ ಆರೋಪ ಮಾಡಿದ್ದಾರೆ.

ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸನ್ಮಾನಿಸಲು ತೆರಳಿದವರಿಗೆ ಅವಮಾನಿಸಿದ್ದಾರೆ. ನಂತರ ನಡೆದ ಸಮಾರಂಭವೊಂದರಲ್ಲೂ ವೀರಾವೇಶದ ಭಾಷಣ ಮಾಡಿದ್ದಾರೆ. ನಾನು ಒಬ್ಬನೇ ಠಾಣೆಗೆ ಹೋಗುವೆ ಎಂದಿದ್ದಾರೆ ಎಂದು ಟೀಕಿಸಿದರು. ಇವರು ದಲಿತ ಸಮಾಜದವರನ್ನು ತಮ್ಮ ಮನೆಯ ಜೀತದಾಳು ರೀತಿಯ ನಡೆಸಿಕೊಳ್ಳುವ ರೀತಿ ವರ್ತಿಸುವುದು ಸರಿಯಲ್ಲ ಎಂದೂ ಸಮಾಜದ ಮುಖಂಡರು ಹೇಳಿದ್ದಾರೆ.

 ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಆನಂದಪ್ಪ, ಜಿ.ವಿ. ವೀರೇಶ್, ನಗರಸಭೆ ಸದಸ್ಯರಾದ ರಜನಿಕಾಂತ್, ಪಿ.ಎನ್. ವಿರುಪಾಕ್ಷಪ್ಪ, ಮಾಜಿ ಸದಸ್ಯೆ ರತ್ನಮ್ಮ, ಹುಲಗಪ್ಪ ಪ್ರಭಾಕರ, ಡಿ.ಹನುಮಂತಪ್ಪ, ಸದಾನಂದ, ಶ್ರೀನಿವಾಸ್, ಸಂತೋಷ, ಶಿವಪ್ಪ ಮತ್ತಿತರರು ಹಾಜರಿದ್ದರು.

error: Content is protected !!