`ಸಾಮಾಜಿಕ ಸಾಮರಸ್ಯದೆಡೆಗೆ ಯುವ ಜನತೆ’ ದೊಗ್ಗಳ್ಳಿಯಲ್ಲಿ ಇಂದಿನಿಂದ ಕಾರ್ಯಕ್ರಮ

ದಾವಣಗೆರೆ, ಮೇ 28- ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶ್ರೀ ದೇವರಾಜ ಅರಸು ವಿದ್ಯಾಸಂಸ್ಥೆಯ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಘಟಕ 1 ಮತ್ತು 2 ರಿಂದ ಸಾಮಾಜಿಕ ಸಾಮರಸ್ಯದೆಡೆಗೆ ಯುವ ಜನತೆ ಕಾರ್ಯಕ್ರಮ ವನ್ನು ಮೇ 29 ರಿಂದ ಜೂನ್ 4 ರ ವರೆಗೆ ಹರಿಹರ ತಾಲ್ಲೂಕು ದೊಗ್ಗಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೇ 29 ರಂದು ಸಂಜೆ 6 ಗಂಟೆಗೆ ನಡೆಯುವ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಹನಗವಾಡಿ ಗ್ರಾಪಂ ಅಧ್ಯಕ್ಷರಾದ ಕವಿತ ಕೆ.ಟಿ ಮಹೇಶ್ ಉದ್ಘಾಟಿಸಲಿದ್ದು, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್. ಭರತ್, ಎಆರ್‌ಎಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಡಿ. ಅಣ್ಣಯ್ಯ ಉಪಸ್ಥಿತರಿರುವರು.

ಮುಖ್ಯಅತಿಥಿಗಳಾಗಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಅಶೋಕ ಕುಮಾರ್ ವಿ. ಪಾಳೇದ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸೋಮಶೇಖರ್ ಕಿಚಡಿ, ಗ್ರಾಪಂ ಉಪಾಧ್ಯಕ್ಷ ಎಸ್. ರೇವಣಸಿದ್ದೇಶ್, ದೊಗ್ಗಳ್ಳಿ ಗ್ರಾಪಂ ಸದಸ್ಯೆ ಲಕ್ಷ್ಮವ್ವ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 

ಮೇ 30 ರಿಂದ ಜೂನ್ 3 ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮಗಳು ನಡೆಯಲಿವೆ. ಜೂನ್ 4 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಅಣ್ಣಯ್ಯ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಹರಿಹರ ಶಾಸಕ ಬಿ.ಪಿ. ಹರೀಶ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸೋಮಶೇಖರ್ ಕಿಚಡಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್. ಭರತ್, ಹನಗವಾಡಿ ಗ್ರಾಪಂ ಅಧ್ಯಕ್ಷರಾದ ಕವಿತ ಕೆ.ಟಿ. ಮಹೇಶ್, ಗ್ರಾಪಂ ಉಪಾಧ್ಯಕ್ಷ ಎಸ್. ರೇವಣಸಿದ್ದೇಶ್ ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!