ಪಾರದರ್ಶಕ ಚುನಾವಣೆಗೆ ಅಗತ್ಯ ಕಾನೂನು ರೂಪಿಸಲು ಒತ್ತಾಯ

ದಾವಣಗೆರೆ, ಮೇ 17- ಸಾರ್ವತ್ರಿಕ ಚುನಾವಣೆ ಗಳನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಕಾನೂನು ಗಳನ್ನು ರೂಪಿಸಲು ವಕೀಲ ಕೆ.ಎಂ. ಮಲ್ಲಿಕಾರ್ಜುನಪ್ಪ ಗುಮ್ಮನೂರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಚುನಾವಣೆ ಅಕ್ರಮಗಳ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ, ಮುಖ್ಯ ಕಾರ್ಯದರ್ಶಿ, ಪ್ರಧಾನಿಯವರಿಗೂ ಪತ್ರ ಬರೆಯುವ ಮೂಲಕ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಣ, ಕುರಿ, ಕೋಳಿ, ಬೆಳ್ಳಿ, ಬಂಗಾರದ ವಸ್ತುಗಳು, ಇತರೆ ವಸ್ತುಗಳನ್ನು ನೀಡುವ ಮೂಲಕ ಮತದಾರರಿಗೆ ಆಮಿಷವೊಡ್ಡಿ ಮತಗಳನ್ನು ಖರೀದಿ ಮಾಡಲಾಗಿದೆ. ಮತದಾರರು ಕೂಡ ತಮ್ಮ ಅಮೂಲ್ಯ ಮತವನ್ನು ಮಾರಿಕೊಂಡಿರುವುದು ಬೇಸರದ ಸಂಗತಿ ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಕೆಲವು ಕಡೆ ಮತದಾರರು ಕುರಿ, ಕೋಳಿ, ಅಕ್ಕಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು.

ಪ್ರತಿ ಬಡವರ ಮನೆಯಲ್ಲಿ ದುಡಿಮೆ ಇಲ್ಲದಾಗ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಅರ್ಹತೆಯ ಆಧಾರದ ಮೇಲೆ ನೀಡಬೇಕು. 

ಹಣಕ್ಕಾಗಿ ಮತ ಮಾರಿಕೊಳ್ಳುವ ಮತ್ತು ಪಡೆಯುವ ಇಬ್ಬರ ಮತವನ್ನು ಹತ್ತು ವರ್ಷಗಳ ಮತ ಹಾಕದಂತೆ ನಿಷೇಧ ಹೇರಬೇಕು. ಚುನಾವಣೆೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಬೇಕು ಎಂಬಿತರೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

error: Content is protected !!